ಮನೆ ರಾಜ್ಯ ಗೃಹಲಕ್ಷ್ಮಿ ಯೋಜನೆ ಸಹಾಯ ಧನ ಪಡೆಯುವುದು ಹೇಗೆ ?

ಗೃಹಲಕ್ಷ್ಮಿ ಯೋಜನೆ ಸಹಾಯ ಧನ ಪಡೆಯುವುದು ಹೇಗೆ ?

0

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ವಿವರಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಶನಿವಾರ ಘೋಷಿಸಿದ್ದಾರೆ. ಈ ಯೋಜನೆಯಡಿ ಫಲಾನುಭವಿ ಮಹಿಳೆಯರು ಪ್ರತಿ ತಿಂಗಳೂ ಎರಡು ಸಾವಿರ ರೂ. ಸಹಾಯಧನ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Join Our Whatsapp Group

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರು ಸರ್ಕಾರದಿಂದ ನಿಯಮಿಸಲ್ಪಟ್ಟ ಪ್ರಜಾ ಪ್ರತಿನಿಧಿಗಳ ಮೂಲಕ ಅಥವಾ ಸಮೀಪದ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು.

ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ, ಸ್ಥಳವನ್ನು 1902 ಸಂಖ್ಯೆಗೆ ಕರೆ ಮಾಡುವ ಮೂಲಕ ತಿಳಿಯಬಹುದು. ಅಥವಾ 814700500 ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಪಡೆಯಬಹುದು

ಆಧಾರ್ ಕಾರ್ಡ್, ಪಡಿತರ ಚೀಟಿ ಸಂಖ್ಯೆ, ಆಧಾ‌ರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ (ಅಥವಾ ಪರ್ಯಾಯ ಬ್ಯಾಂಕ್‌ ಖಾತೆಯ ಪಾಸ್ ಬುಕ್ ) ಯೋಜನೆಗೆ ನೋಂದಾಯಿಸಿಕೊಳ್ಳಲು ಅವಶ್ಯವಾಗಿ ಬೇಕಾಗಿರುವ ದಾಖಲೆಗಳಾಗಿವೆ.

ನೋಂದಾಯಿಸಿಕೊಂಡಿರುವ ಅರ್ಜಿದಾರರು ತಮ್ಮ ಮೊಬೈಲ್ ನಂಬರ್‌ಗೆ ನೋಂದಣಿ ಪ್ರಕ್ರಿಯೆಯ ಮಾಹಿತಿ ಪಡೆಯಬಹುದಾಗಿದೆ.

ನಿಗದಿಯದ ಸಮಯ/ದಿನಾಂಕದಲ್ಲಿ ನೋಂದಣಿ ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಅದೆ ಸೇವಾಕೇಂದ್ರಗಳಿಗೆ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ರವರೆಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.