ಮನೆ ರಾಜ್ಯ ಚಪ್ಪಲಿ ಕಳೆದುಹೋಗಿದೆ ಹುಡುಕಿಕೊಡಿ ಎಂದು 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

ಚಪ್ಪಲಿ ಕಳೆದುಹೋಗಿದೆ ಹುಡುಕಿಕೊಡಿ ಎಂದು 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

0

ಬೆಂಗಳೂರು: ಚಪ್ಪಲಿ ಕಳೆದು ಹೋಗಿದೆ. ಹುಡುಕಿಕೊಡಿ ಎಂದು 112 ಸಹಾಯವಾಣಿಗೆ ಕರೆ ಮಾಡಿ ವ್ಯಕ್ತಿಯೊಬ್ಬ ದೂರು ನೀಡಿರುವ ಘಟನೆ ತಡರಾತ್ರಿ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಭಾನುವಾರ ತಡರಾತ್ರಿ ಪೊಲೀಸ್ ನಿಯಂತ್ರಣ ಕೋಣೆಯ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ‘ಕಾರ್ ಸ್ಟ್ರೀಟ್ ನಲ್ಲಿರುವ ಬಾಲಂಭಟ್ಟ ಹಾಲ್ ​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಹಿಂತಿರುಗಿ ಬಂದು ನೋಡಿದಾಗ ತನ್ನ ಚಪ್ಪಲಿ ಕಳೆದುಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ.

ಪೊಲೀಸ್ ನಿಯಂತ್ರಣ ಕೋಣೆಯ ಸಿಬ್ಬಂದಿ ಸಮೀಪದಲ್ಲಿ ಬೀಟ್ ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ ದೂರುದಾರನ ಜೊತೆ ಸೇರಿ ಚಪ್ಪಲಿ ಹುಡುಕಾಡಿ ಕೊನೆಗೆ ಚಪ್ಪಲಿ ಸಿಗದ ಕಾರಣ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ‌.