ಮನೆ ಅಪರಾಧ ಪ್ರಿಯತಮೆಯ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಪ್ರಿಯಕರ: ದೂರು ದಾಖಲು     

ಪ್ರಿಯತಮೆಯ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಪ್ರಿಯಕರ: ದೂರು ದಾಖಲು     

0

ಬೆಂಗಳೂರು: ಅಸ್ಸಾಂ ನಿಂದ ಬೆಂಗಳೂರಿಗೆ ಕರೆ ತಂದಿದ್ದ ಯುವತಿಯ ಮೇಲೆ ಆಕೆ ಪ್ರಿಯಕರ ತನ್ನ ನಾಲ್ವರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.    

Join Our Whatsapp Group

ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಶಾಹೀದ್ ಕಳೆದ ಜೂನ್ ನಲ್ಲಿ ಹುಡುಗಿಯನ್ನು ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ.ದೊಡ್ಡ ನಾಗಮಂಗಲದ ಬಾಡಿಗೆ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಿ, ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ, ಸಂಭೋಗದ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದ.    

ಕೆಲ ದಿನಗಳ ಬಳಿಕ ಶಾಹಿದ್ ಗೆ  ಬೇರೆ ಮಹಿಳೆಯ ಜೊತೆಗೆ ಮದುವೆಯಾಗಿರುವ ವಿಚಾರ ಸಂತ್ರಸ್ತೆ ಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆಸಿದಾಗ ಆರೋಪಿಯು ಬೆಲ್ಟ್ ನಿಂದ ಹಲ್ಲೆ ನಡೆಸಿ ಮನೆಯ ರೂಮ್ ನಲ್ಲಿ ಕೂಡಿ ಹಾಕಿದ್ದ ಬಳಿಕ ಪರಿಚಿತ ನಾಲ್ವರನ್ನು ಮನೆಗೆ ಕರೆಸಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾನೆ.       

ಈ ಬಗ್ಗೆ 20 ವರ್ಷದ ಸಂತಸ್ತ ಯುವತಿಯ ದೂರನ್ನು ನೀಡಿದ್ದು, ಆಕೆಯ ಪ್ರಿಯಕರ ಶಾಹಿದ್ ಉದ್ದೀನ್ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಎಫ್.ಐ.ಆರ್  ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.