ಇವಿ ವಾಹನ ಖರೀದಿಗೆ ಉತ್ತೇಜಿಸಲು ಎಥರ್ ಎನರ್ಜಿ ಹೊಸ ಆಫರ್ ಘೋಷಣೆ ಮಾಡಿದೆ.
ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಜೊತೆಗೂಡಿ ಶೇ.100 ರಷ್ಟು ಆನ್ ರೋಡ್ ಲೋನ್ ಸೌಲಭ್ಯ ಪರಿಚಯಿಸಿದೆ. ಹೊಸ ಯೋಜನೆಯಿಂದ ಗ್ರಾಹಕರು ಸುಲಭವಾಗಿ ಮಾಲೀಕತ್ವ ಹೊಂದಬಹುದಾಗಿದ್ದು, ಹೊಸ ಸಾಲ ಸೌಲಭ್ಯಗಳ ಮೇಲೆ ಆಕರ್ಷಕ ಇಎಂಐ ವಿಧಿಸಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 450ಎಕ್ಸ್ ಮತ್ತು 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದೊಂದಿಗೆ ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಎಥರ್ ಎನರ್ಜಿ ಕಂಪನಿಯು ಪ್ರಮುಖ ಬ್ಯಾಂಕ್ ಗಳೊಂದಿಗೆ ಜೊತೆಗೂಡಿ ಶೇ.100 ರಷ್ಟು ಆನ್ ರೋಡ್ ಲೋನ್ ಆಫರ್ ನೀಡುತ್ತಿದೆ.
ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಹೆಚ್ ಡಿಎಫ್ ಸಿ, ಐಸಿಐಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಹೀರೋ ಫಿನ್ ಕಾರ್ಪ್, ಚೋಳಮಂಡಲಂ ಫೈನಾನ್ಸ್ ಮೂಲಕ ಶೇ.100 ಆನ್ ರೋಡ್ ಲೋನ್ ನೀಡಲಾಗುತ್ತಿದೆ.
ಹೊಸ ಇವಿ ಸ್ಕೂಟರ್ ಖರೀದಿದಾರರು ಗರಿಷ್ಠ 60 ತಿಂಗಳಿಗೆ ಅನ್ವಯಿಸುವಂತೆ ಹೊಸ ಲೋನ್ ಆಯ್ಕೆ ಮಾಡಬಹುದಾಗಿದ್ದು, ಪ್ರತಿ ತಿಂಗಳಿಗೆ ಕನಿಷ್ಠ ರೂ. 2,999 ಇಎಂಐ ದರ ನಿಗದಿ ಮಾಡಲಾಗಿದೆ.