ಮನೆ ರಾಜ್ಯ ಶಂಕಿತ ಉಗ್ರರ ಬಂಧನ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಿ: ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ...

ಶಂಕಿತ ಉಗ್ರರ ಬಂಧನ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಿ: ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

0

ಬೆಂಗಳೂರು: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪ್ರಕರಣವನ್ನು ಎನ್ ಐಎಗೆ ವಹಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Join Our Whatsapp Group

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಉಗ್ರರಿಗೆ ಈಗ ಬೆಂಗಳೂರು ಸುರಕ್ಷಿತ ತಾಣದಂತಾಗಿದೆ.  ಶಂಕಿತ ಉಗ್ರರು ಬೆಂಗಳೂರಿನಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆದಿದ್ದಾರೆ ಬೆಂಗಳೂರು ಪೊಲೀಸರು ಉತ್ತಮ ಕೆಲಸಕ್ಕೆ ಮಾಡಿದ್ದಾರೆ ಎಂದರು.

ಹಳೇ ಆರೋಪಿಗಳು ಉಗ್ರ ಚಟುವಟಿಕೆ ಪುನಾರಂಭಿಸಿದ್ದಾರೆ ಸಿಸಿಬಿ ಪೊಲೀಸರ ಕಾರ್ಯಕ್ಕೆ ನಾನು ಅಭಿನಂದಿಸುತ್ತೇನೆ ಆದರೆ ಉಗ್ರರ ಜಾಲದ ಆಳ ಅಗಲ ದೊಡ್ಡದಿದೆ. ಕ್ರಿಮಿನಲ್ ಚಟುವಟಿಕೆ ಕುಮ್ಮಕ್ಕು ಕೊಡುವ ಕೆಲಸವಾಗುತ್ತಿದೆ.  ಅಂತರಾಷ್ಟ್ರೀಯ ಐಸಿಸ್ ಸಂಪರ್ಕದಲ್ಲಿದ್ದಾರೆ ಶಂಕಿತರಿಗೆ ಅಂತರಾಷ್ಟ್ರೀಯ ಸಂಸ್ಥೆಗಳ ಬೆಂಬಲವಿದೆ ಎಂದು ಬೊಮ್ಮಾಯಿ ತಿಳಿಸಿದರು.

ಶಂಕಿತರ ಬಳಿ ಸ್ಪೋಟಕ ಪತ್ತೆಯಾಗಿದೆ.  ರಾಜ್ಯ ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಲ್ಲಾ ಕೇಸ್ ಗಳನ್ನೂ ಎನ್ ಐಎ ತನಿಖೆಗೆ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.