ಬೆಂಗಳೂರು(Bengaluru): ಮಂಡ್ಯ(Mandya) ವಿದ್ಯಾರ್ಥಿನಿ(Student) ಮುಸ್ಕಾನ್(Muskan) ಬೆಂಬಲಿಸಿ ಅಲ್ ಖೈದಾ ಮುಖ್ಯಸ್ಥ ಮಾಡಿದ್ಧ ವಿಡಿಯೋ ಸಂದೇಶ ವೈರಲ್ ಆಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್(Sumalatha ambareesh) ಈ ಬಗ್ಗೆ ಪ್ರತಿಕ್ರಿಯಿಸಿ, ಮುಸ್ಕಾನ್ ಬಗ್ಗೆ ತನಿಖೆ ಆದರೆ ತಪ್ಪೇನಿಲ್ಲ. ಸೂಕ್ತ ತನಿಖೆ ಆಗಿ ಸತ್ಯಾಂಶ ಹೊರಬರಬೇಕು ಅಷ್ಟೆ ಎಂದಿದ್ದಾರೆ.
ಅಲ್ ಖೈದಾ ಮುಖ್ಯಸ್ಥನ ವಿಡಿಯೋವನ್ನು ಹಲವಾರು ರಾಜಕಾರಣಿಗಳು ಖಂಡಿಸಿದ್ದು, ಮುಸ್ಕಾನ್ ಬಗ್ಗೆ ತನಿಖೆ ನಡೆಸುವಂತೆ ಆಗ್ರಹ ಕೇಳಿ ಬರುತ್ತಿದೆ. ಈ ಮಧ್ಯೆ ಸಂಸದ ಅನಂತ್ ಕುಮಾರ್ ಹೆಗಡೆ ಸಹ ತನಿಖೆಗೆ ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಂಸದೆ ಪ್ರತಿಕ್ರಿಯಿಸಿದ್ದು, ಹಾಗೆಯೇ ರಾಜ್ಯದಲ್ಲಿ ಶಾಂತಿಯುತ ಪರಿಸ್ಥಿತಿ ಇದೆ. ಮಂಡ್ಯದಲ್ಲೂ ಪರಿಸ್ಥಿತಿ ಶಾಂತಿಯುತವಾಗಿಯೇ ಇದೆ. ಎಲ್ಲಾ ಸಮಾಜದವರು ಒಂದಾಗಿ ಸಮಸ್ಯೆ ಬಗೆಹರಿಸಿ. ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಬೇಡ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.