ಹೈದರಾಬಾದ್: ಭಾರತ ಕ್ರಿಕೆಟ್ ತಂಡ ಇಂದು ಕೆರಿಬಿಯನ್ನರ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವೆಲ್ ನಲ್ಲಿ ಆಡಲಿದ್ದು, ಉಭಯ ತಂಡಗಳ ನಡುವಣ 100ನೇ ಟೆಸ್ಟ್ ಪಂದ್ಯ ಇದಾಗಿದೆ .
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸಹಿತ 141 ರನ್ ಗಳ ಜಯ ಸಾಧಿಸಿ 1-0 ಅಂತರದಿಂದ ಮುನ್ನಡೆಯಲ್ಲಿದೆ. ಭಾರತ 2ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಸಜ್ಜಾಗಿದೆ. ಇನ್ನೊಂದೆಡೆ, ವಿಂಡೀಸ್ ಸರಣಿ ಸಮಬಲ ಸಾಧಿಸುವ ಯೋಜನೆ ಹಾಕಿಕೊಂಡಿದೆ.
ಆದರೆ ಇಂದು ನಡೆಯುವ ಪಂದ್ಯಕ್ಕೆ ವರುಣನಿಂದ ಸಮಸ್ಯೆಯಾಗಬಹುದು. ಹವಾಮಾನ ವರದಿ ಪ್ರಕಾರ ಪಂದ್ಯದ ಐದು ದಿನಗಳಲ್ಲಿ ಶೇ. 52 ರಷ್ಟು, ಶೇ. 49 ರಷ್ಟು, ಶೇ. 51 ರಷ್ಟು, ಶೇ. 47 ರಷ್ಟು, ಮತ್ತು ಶೇ. 41 ರಷ್ಟು ಮಳೆ ಬೀಳಲಿದೆ.
ಪಂದ್ಯ ನಡೆಯುವ ಸಂಪೂರ್ಣ ಐದು ದಿನಗಳ ಅವಧಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ.