ಮೈಸೂರು : ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಇಬ್ಬರು ಮಹಿಳೆಯರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ.
ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ವಿಜಯಲಕ್ಷೀ ನಾಗಪ್ಪ ಸಿರಸಗಿ (29) ಎಂಬುವವರಿಗೆ ವಾಟ್ಸಾಪ್ ಮೂಲಕ ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿದ್ದು, ಮೋಜೋ ವಿಡಿಯೋಗಳನ್ನು ಲೈಕ್ ಮಾಡಿದರೆ ಪ್ರತೀ ವಿಡಿಯೋಗೆ 150 ರೂ. ನೀಡುವುದಾಗಿ ನಂಬಿಸಲಾಗಿತ್ತು. ಹಾಗೆ ವಿಡಿಯೋ ಲೈಕ್ ಮಾಡಬೇಕಾದರೆ ಲೈಕ್ ಮಾಡಲು ಹಣ ಹೂಡಿಕೆ ಮಾಡಬೇಕೆಂದು ತಿಳಿಸಲಾಗಿತ್ತು. ಅದರಂತೆ ವಿಜಯಲಕ್ಷೀ ಅವರಿಂದ 52 ಲಕ್ಷ ರೂ. ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬನ್ನಿಮಂಟಪ ಸಿ. ಲೇಔಟ್ ನಿವಾಸಿ ಪಿ. ಕುಶುಂದ (48) ಅವರಿಗೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಯುಟೂಬ್ ಚಾನೆಲ್ ಲೈಕ್, ಶೇರ್ ಮತ್ತು ರಿವ್ಯೂ ಕಂಪ್ಲೀಟ್ ಮಾಡುವ ಟಾಸ್ಕನ್ನು ಹಣ ಪಾವತಿಸಿ, ನಿರ್ವಹಿಸಿದರೆ ಕಮಿಷನ್ ನೀಡುವುದಾಗಿ ನಂಬಿಸಿ 2.93 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ.
ಇವೆರಡೂ ಪ್ರಕರಣ ಕುರಿತು ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದೆ.