ಮನೆ ಮನರಂಜನೆ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಹಾಡು ಬಿಡುಗಡೆ

“ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಹಾಡು ಬಿಡುಗಡೆ

0

ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ.. ಸೈಡ್‌ -ಎ ಹಾಗೂ ಸೈಡ್‌-ಬಿ ಎಂದು ಈ ಎರಡು ಭಾಗಗಳನ್ನು ವಿಂಗಡಣೆ ಮಾಡಲಾಗಿದ್ದು, “ಸೈಡ್‌-ಎ’ ಸೆಪ್ಟೆಂಬರ್‌ 1ರಂದು ತೆರೆಕಂಡರೆ, “ಸೈಡ್‌-ಬಿ’ ಅಕ್ಟೋಬರ್‌ 20ರಂದು ತೆರೆಗೆ ಬರಲಿದೆ.

Join Our Whatsapp Group

ಈಗ ಮೊದಲ ಹಂತವಾಗಿ “”ಸಪ್ತಸಾಗರದಾಚೆ ಎಲ್ಲೋ- ಸೈಡ್‌-ಎ’ನಿಂದ ಮೊದಲ ಹಾಡು ಬಿಡುಗಡೆಯಾಗಿದೆ. “ಹೋರಾಟ ಹೋರಾಟ ಮುಗಿಯೋವರೆಗೂ ಅಲೆದಾಟ, ಅಂತ್ಯನೇ ಇರದಂತಹ ದೂರ ತೀರದ ಹುಡುಕಾಟ…’ ಎಂಬ ಹಾಡು ಗುರುವಾರ ಬೆಳಗ್ಗೆ ಪರಂವ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡಗಡೆಯಾಗಿದೆ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ.

ಅಂದಹಾಗೆ, ಈ ಚಿತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿದ್ದು, ಹೇಮಂತ್‌ ರಾವ್‌ ಈ ಸಿನಿಮಾದ ನಿರ್ದೇಶಕರು.

ಅಂದಹಾಗೆ, ಇದು ಔಟ್‌ ಅಂಡ್‌ ಔಟ್‌ ಲವ್‌ ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ರಕ್ಷಿತ್‌ ಎರಡು ಶೇಡ್‌ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಒಮ್ಮೆ ತೂಕ ಇಳಿಸಿಕೊಂಡ ರಕ್ಷಿತ್‌ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ತಮ್ಮ ವಿಭಿನ್ನ ಅಭಿರುಚಿಯ ಮೂಲಕ ಕನ್ನಡಕ್ಕೆ ಹೊಸ ಬಗೆಯ ಸಿನಿಮಾಗಳನ್ನು ನೀಡಿರುವ ರಕ್ಷಿತ್‌ ಶೆಟ್ಟಿ, ಈಗ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸಿದ್ದಾರೆ.