ಮನೆ ಆಟೋ ಮೊಬೈಲ್ ಹೊಸ ಫೀಚರ್ಸ್’ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ

ಹೊಸ ಫೀಚರ್ಸ್’ಗಳೊಂದಿಗೆ ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್ ಬಿಡುಗಡೆ

0

ಕಿಯಾ ಇಂಡಿಯಾ ಕಂಪನಿಯು ಬಹುನೀರಿಕ್ಷಿತ ಸೆಲ್ಟೊಸ್  ಫೇಸ್ ಲಿಫ್ಟ್ ಆವೃತ್ತಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ವಿವಿಧ ವೆರಿಯೆಂಟ್’ಗಳೊಂದಿಗೆ ಹಲವಾರು ಹೊಸ ಫೀಚರ್ಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಟ್ಟಿದೆ.

Join Our Whatsapp Group

ಹೊಸ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಕ್ಸ್, ಹೆಚ್ ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಆವೃತ್ತಿಯು ರೂ.20 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆಗಳೊಂದಿಗೆ ಬಲಿಷ್ಠವಾದ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದು, ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಸೆಲ್ಟೊಸ್ ಕಾರಿನಲ್ಲಿ ಕಿಯಾ ಕಂಪನಿಯು 1.5 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಪೆಟ್ರೋಲ್ ಟರ್ಬೊ ಆವೃತ್ತಿಯು ಡ್ಯುಯಲ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 158 ಹಾರ್ಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಸಾಮಾನ್ಯ ಎನ್ಎ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ನೊಂದಿಗೆ 113 ಹಾರ್ಸ್ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ 1.5 ಲೀಟರ್ ಟರ್ಬೊ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 114 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಸೆಲ್ಟೊಸ್ ಆವೃತ್ತಿಯಲ್ಲಿ ಕಿಯಾ ಕಂಪನಿಯು ಬದಲಾವಣೆಗೊಳಿಸಲಾದ ಸ್ಪೋರ್ಟಿ ಮುಂಭಾಗದ ವಿನ್ಯಾಸದೊಂದಿಗೆ ಬಂಪರ್, ಗ್ರಿಲ್ ಮತ್ತು ಆಲ್ ಎಲ್ಇಡಿ ಲೈಟಿಂಗ್ಸ್, ಅಲಾಯ್ ವ್ಹೀಲ್, ಲೈಟ್ ಬಾರ್ ನೀಡಲಾಗಿದ್ದು, ಕಾರಿನ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಒಳಭಾಗದಲ್ಲಿ ಡ್ಯುಯಲ್ ಕನೆಕ್ಟ್ ಡಿಸ್ ಪ್ಲೇ, ಹೊಸ ಡ್ಯಾಶ್ ಬೋರ್ಡ್, ಇನ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್ ಮೆಂಟ್ ಸಿಸ್ಟಂ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಏರ್ ಕಂಡಿಷನರ್, ಪನೊರಮಿಕ್ ಸನ್ ರೂಫ್‌, ವೈರ್ ಲೆಸ್ ಚಾರ್ಜರ್ ಸೌಲಭ್ಯಗಳಿವೆ.

ಹೊಸ ಸೆಲ್ಟೊಸ್ ಕಾರಿನಲ್ಲಿ ಕಿಯಾ ಕಂಪನಿಯು ಈ ಬಾರಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಅದರಲ್ಲೂ ಹೊಸ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಎಡಿಎಎಸ್ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೊಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಡ್ ಸ್ಪಾಟ್ ಕೂಲಿಷನ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ ಅಸಿಸ್ಟ್ ಸೌಲಭ್ಯಗಳಿವೆ.