ಮನೆ ರಾಜ್ಯ ಆ.20ರಂದು ಡಿ.ದೇವರಾಜ ಅರಸು ಪ್ರತಿಮೆ ಶಂಕುಸ್ಥಾಪನೆ: ಸಿಎಂ ಸಿದ್ಧರಾಮಯ್ಯಗೆ ಆಹ್ವಾನ

ಆ.20ರಂದು ಡಿ.ದೇವರಾಜ ಅರಸು ಪ್ರತಿಮೆ ಶಂಕುಸ್ಥಾಪನೆ: ಸಿಎಂ ಸಿದ್ಧರಾಮಯ್ಯಗೆ ಆಹ್ವಾನ

0

ಮೈಸೂರು: ಆಗಸ್ಟ್ 20 ರಂದು ಸಾಮಾಜಿಕ ನ್ಯಾಯದ ಹರಿಕಾರ ಸಮ ಸಮಾಜದ ಚಿಂತಕರು ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪ್ರತಿಮೆ ಶಂಕುಸ್ಥಾಪನೆ   ತವರು ಜಿಲ್ಲೆ ಮೈಸೂರಿನಲ್ಲಿ ನೆರವೇರಲಿದ್ದು ಸಿಎಂ ಸಿದ್ಧರಾಮಯ್ಯಗೆ ಡಿ.ದೇವರಾಜ ಅರಸ್ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಆಹ್ವಾನ ನೀಡಲಾಯಿತು.

Join Our Whatsapp Group

ವಿಧಾನಪರಿಷತ್ ಸದಸ್ಯ, ಹೆಚ್.ವಿಶ್ವನಾಥ್ ಹಾಗೂ .ದೇವರಾಜ ಅರಸ್ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಹಿಂದೆ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಸಿಎಂ ಆಗಿದ್ದ ವೇಳೆ ಅರಸು ಪ್ರತಿಮೆ ವಿಚಾರವಾಗಿ ಅರಸು ಸಮಿತಿ ನೀಡಿದ ಮನವಿಯನ್ನು ಪುರಸ್ಕರಿಸಿ ಅದಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಸಿದ್ದಾರ್ಥನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಧಿಕಾರಿಗಳ ಸಂಕೀರ್ಣದ ಮುಂಭಾಗ ಅರಸುರವರ ಪ್ರತಿಮೆ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.  ತದನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸೂಕ್ತ ಸ್ಥಳವೆಂದು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.  ಜೊತೆಗೆ ಪ್ರತಿಮೆ ನಿರ್ಮಾಣ ವಿಚಾರವಾಗಿ ಹಣಕಾಸಿನ ಇಲಾಖೆಯಿಂದ ರೂ.92 ಲಕ್ಷ ಹಣ ಮಂಜೂರಾಗಿತ್ತು.

ಇದೀಗ ಆಗಸ್ಟ್ 20ರ  ಅರಸು ಜಯಂತಿಯಂದು ಅರಸುರವರ ಪ್ರತಿಮೆ ಶಂಕುಸ್ಥಾಪನಾ ಕಾರ್ಯಕ್ಕೆ ಚಾಲನೆ  ನೀಡಲು  ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ  ಸಮಿತಿಯ ಗೌರವಾಧ್ಯಕ್ಷ ಎಂ ಚಂದ್ರಶೇಖರ್ ಗೌರವ ಸಲಹೆಗಾರ ಡಾ. ವೈ.ಡಿ.ರಾಜಣ್ಣ ಜಿಲ್ಲಾ ಪ್ರಧಾನ ಸಂಚಾಲಕ ಪವನ್ ಸಿದ್ದರಾಮಯ್ಯ ಉಪಸ್ಥಿತರಿದ್ದರು.