ಮನೆ ಕ್ರೀಡೆ IND vs WI :  5ನೇ ದಿನದ ಟೆಸ್ಟ್ ನಲ್ಲಿ ವಿಂಡೀಸ್ ಗೆಲುವಿಗೆ 289 ರನ್...

IND vs WI :  5ನೇ ದಿನದ ಟೆಸ್ಟ್ ನಲ್ಲಿ ವಿಂಡೀಸ್ ಗೆಲುವಿಗೆ 289 ರನ್ ಬೇಕು

0

ಪೋರ್ಟ್ ಆಫ್ ಸ್ಪೇನ್ : ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಗೆ 365 ರನ್ ಗಳ ಗುರಿ ನೀಡಿದೆ. ಮೊತ್ತವನ್ನು ಬೆನ್ನತ್ತಿರುವ ವೆಸ್ಟ್ ಇಂಡೀಸ್ ನಾಲ್ಕನೇ ದಿನದಂತ್ಯಕ್ಕೆ (ಭಾನುವಾರ) 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 289 ರನ್ ಗಳ ಹಿನ್ನಡೆಯಲ್ಲಿದೆ.

Join Our Whatsapp Group

ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆಟವಾಡಿದರು.

ಆದರೆ ಜೈಸ್ವಾಲ್ 38 ರನ್ ಗಳಿಸಿದಂತೆಯೆ  ಜೋಮೆಲ್ ವ್ಯಾರಿಕನ್ ಗೆ ವಿಕೆಟ್ ಒಪ್ಪಿಸಿದ್ದರು, ರೋಹಿತ್ ಶರ್ಮಾ ಕೂಡ ಅರ್ಧ ಶತಕ (57) ರನ್ ಗಳಿಸಿ ಶನನ್ ಗ್ಯಾಬ್ರಿಯಲ್ ಬೌಲಿಂಗೆ ವಿಕೆಟ್‌ ಒಪ್ಪಿಸಿದ್ದರು.

ಬಳಿಕ ಬಂದ ಶುಭ್ಮನ್ ಗಿಲ್ (29) ,ಇಶನ್ ಕಿಶನ್ (52) ರನ್ ಗಳಿಸಿ ಔಟಾಗದೇ ಉಳಿದರು. ಈ ವೇಳೆ ಮಳೆ ಬಂದು, ಪಂದ್ಯ ಸ್ಥಗಿತಗೊಂಡಿತ್ತು. ನಂತರ ಕೇವಲ ಮೂರು ಓವರ್ ಗಳನ್ನು ಆಡಿದ ಭಾರತವು 2 ವಿಕೆಟ್ ನಷ್ಟಕ್ಕೆ 181ರನ್ ಗಳಿಸಿ ಡಿಕ್ಲೇರ್ ಮಾಡಿತು.

ಭಾರತ ನೀಡಿದ 365 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ಕ್ರೇಗ್ ಬ್ರಾಥ್ವೈಟ್ 28 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ಅವರ ಉತ್ತಮ ಬೌಲಿಂಗೆ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ಕ್ರೆಕ್ ಮೆಕ್ಕೆನ್ಜೀ ಖಾತೆ ತೆರೆಯದೇ ಅಶ್ವಿನ್ ಎಸೆತದಲ್ಲಿ ಎ.ಲ್.ಬಿ ಗೆ ವಿಕೆಟ್ ಒಪ್ಪಿಸಿದ್ದರು. ನಾಲ್ಕನೇ ದಿನದಂತ್ಯಕ್ಕೆ ಟಾಗೆನರೈನ್ ಚಂದ್ರಪಾಲ್ (24) ಮತ್ತು ಜೆರ್ಮೈನ್ ಬ್ಲಾಕ್ವುಡ್ (20) ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ವೆಸ್ಟ್ ಇಂಡೀಸ್ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದು, ಬ್ಯಾಟಿಂಗ್ ಮುಂದುವರೆಸಿದ್ದು ವಿಂಡೀಸ್ ಗೆಲುವಿಗೆ ಇನ್ನೂ289 ರನ್ ಗಳು ಬೇಕು. ಭಾರತದ ಪರ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ.