ಮನೆ ರಾಜಕೀಯ ಪ್ರಸಕ್ತ ಸಾಲಿನಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ: ಬಿ.ಸಿ.ನಾಗೇಶ್

ಪ್ರಸಕ್ತ ಸಾಲಿನಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ: ಬಿ.ಸಿ.ನಾಗೇಶ್

0

ಆಲಮಟ್ಟಿ (ವಿಜಯಪುರ ಜಿಲ್ಲೆ)(Vijaypura): ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ(Bhagavad geetha) ಅಳವಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್(B.C.Nagesh) ತಿಳಿಸಿದರು.

ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶವನ್ನಿಟ್ಟುಕೊಂಡು ರಾಮಾಯಣ, ಮಹಾಭಾರತ ಸೇರಿದಂತೆ ನೈತಿಕ ಗುಣ ಬೆಳೆಸುವ ಕತೆಗಳನ್ನು ಅಳವಡಿಸಲಾಗುವುದು. ಭಗವದ್ಗೀತೆಯ ಯಾವ ಸಾರವನ್ನು ನೈತಿಕ ವಿಷಯದ ಪಠ್ಯದಲ್ಲಿ ಅಳವಡಿಸಬೇಕೆಂಬುದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಅಬ್ದುಲ್ ಕಲಾಂ ಅವರು ಭಗವದ್ಗೀತೆಯಲ್ಲಿ ಶಕ್ತಿ ಅಡಗಿದೆ ಎಂದು ಹೇಳಿದ್ದಾರೆ. ಭಗವದ್ಗೀತೆ ಧಾರ್ಮಿಕ ಆಚರಣೆಯಲ್ಲ, ಪೂಜಾ ವಿಧಾನವೂ ಅಲ್ಲ, ಅದರ ಸಾರವನ್ನು ಎಲ್ಲ ಧರ್ಮೀಯರೂ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಜೀವನಕ್ಕೆ ಬೇಕಾದ ಮಾರ್ಗದರ್ಶನ ಅದರಲ್ಲಿ ಅಡಗಿದೆ ಎಂದರು.

ಪಠ್ಯದಲ್ಲಿ ಟಿಪ್ಪುವಿನ ಬಗ್ಗೆ ಕೊಟ್ಟಿರುವ ರೀತಿ ನೀತಿ ಸರಿಯಲ್ಲ. ಟಿಪ್ಪುವಿನ ಒಂದು ಮುಖ ಮಾತ್ರ ಪಠ್ಯದಲ್ಲಿ ತೋರಿಸಲಾಗಿದೆ. ಈ ವರ್ಷ ಪಠ್ಯದಿಂದ ಟಿಪ್ಪು ವಿಷಯ ತೆಗೆದಿಲ್ಲ, ವೋಟ್ ಬ್ಯಾಂಕಿಗಾಗಿ ಕಾಂಗ್ರೆಸ್ ನವರು ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ  ನಾಗೇಶ್‌ ಹೇಳಿದರು.