ಮನೆ ರಾಷ್ಟ್ರೀಯ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ

0

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Join Our Whatsapp Group

ಶನಿವಾರ ಬೆಳಿಗ್ಗೆ ರಾತ್ರಿ 12:53 ಕ್ಕೆ ಭೂಕಂಪನ ಸಂಭವಿಸಿದ್ದು, ಭೂಕಂಪದ ಕೇಂದ್ರಬಿಂದು ಪೋರ್ಟ್ ಬ್ಲೇರ್ ನ ಆಗ್ನೇಯಕ್ಕೆ 126 ಕಿ.ಮೀ. ದೂರದಲ್ಲಿ ಮೇಲ್ಮೈಯಿಂದ 69 ಕಿಮೀ ಆಳದಲ್ಲಿ ಸಂಭವಿಸಿದೆ.

ಭೂಕಂಪನವು ಮಧ್ಯರಾತ್ರಿ 12:53ಕ್ಕೆ ಐಎಸ್‌ಟಿ ಮೇಲ್ಮೈಯಿಂದ 69 ಕಿಮೀ ಆಳದಲ್ಲಿ, 10.75 ಅಕ್ಷಾಂಶ ಮತ್ತು 93.47 ರೇಖಾಂಶದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿದುಬಂದಿದೆ.

ಏಪ್ರಿಲ್‌ ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಿಜೋರಾಂ ಮತ್ತು ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಎರಡು ಭೂಕಂಪಗಳು ಸಂಭವಿಸಿದವು. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ಕ್ಯಾಂಪ್‌ ಬೆಲ್ ಕೊಲ್ಲಿಗೆ ಅಪ್ಪಳಿಸಿತು ಮತ್ತು ಮಿಜೋರಾಂನಲ್ಲಿ ರಿಕ್ಟರ್ ಮಾಪಕದಲ್ಲಿ 4.7 ಅಳತೆಯ ಭೂಕಂಪ ಸಂಭವಿಸಿದೆ.