ಮನೆ ರಾಜ್ಯ ಬೆಂ-ಮೈ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಅಲ್ಲಾ: ಸಿಎಂ ಸಿದ್ದರಾಮಯ್ಯ

ಬೆಂ-ಮೈ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಅಲ್ಲಾ: ಸಿಎಂ ಸಿದ್ದರಾಮಯ್ಯ

0

ಮಂಡ್ಯ : ಹೆದ್ದಾರಿ ಕಾಮಗಾರು ಅವೈಜ್ಞಾನಿಕ ಅಲ್ಲಾ ಆದ್ರೆ ಸ್ವಲ್ಪ ಫೆಸಲಿಟಿ ಆಗಬೇಕಿದೆ ಅಷ್ಟೇ.. ಹೆದ್ದಾರಿಯಲ್ಲಿ ಸೇಫ್ಟಿ ಮೆಜರ್ಸ್ ಗಳು ಆಗಬೇಕಿದೆ. ಅದಕ್ಕಾಗಿ ನಾವು ಸೂಚನೆ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Join Our Whatsapp Group

ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಎಕ್ ಪ್ರೆಸ್ ವೇ ವೀಕ್ಷಿಸಿ ಮಾತನಾಡಿದ ಅವರು, ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದಾವೆ. ಇಲ್ಲಿ ಸ್ಪೀಡ್ ಡಿಟೆಕ್ಟರ್ ಇರಲಿಲ್ಲ. ಈ ತಿಂಗಳು ಅಪಘಾತಗಳು ಕಡಿಮೆ ಆಗಿವೆ. ಜೂನ್ ತಿಂಗಳಲ್ಲಿ 20 ಅಪಘಾತಗಳು ಆಗಿವೆ. ಈ ತಿಂಗಳು ಕೇವಲ 5 ಅಪಘಾತಗಳು ಆಗಿವೆ. ಇದಕ್ಕಾಗಿಯೇ ಸ್ಪೀಡ್ ಡಿಟೆಕ್ಟರ್‌ನ್ನು ಅಳವಡಿಕೆ ಮಾಡಲಾಗಿದೆ ಎಂದರು.

ಇದು ಸ್ಪೀಡ್ ಮಾತ್ರವಲ್ಲ, ವಾಹನಗಳ ಚಲಾವಣೆಯ ಮೇಲು ಕಣ್ಣಿಟ್ಟಿರುತ್ತೆ. ಈ ಹೊಸ ನಿಯಮ ಉಲ್ಲಂಘನೆ ಮಾಡಿದ್ರೆ ಸಂಚಾರಿ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಾರೆ. ಸದ್ಯ ಎರಡು ಕಡೆ ಸ್ಪೀಡ್ ಡಿಟೆಕ್ಟರ್‌ನ್ನು ಹಾಕಲಾಗಿದೆ. ಮುಂದೆ 10 ಕಿಲೋಮೀಟರ್ ಗೆ ಒಂದರಂತೆ ಇವುಗಳನ್ನು ಹಾಕಲಾಗುತ್ತದೆ. ಆಗ ಅಪಘಾತಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಉಡುಪಿ ಕಾಲೇಜಿನಲ್ಲಿ ದೃಶ್ಯ ಸೆರೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಆ ಪ್ರಕರಣ ಸಂಬಂಧ ಎಫ್ ಐಆರ್ ರಿಜಿಸ್ಟರ್ ಆಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.

ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡೋರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸಿಎಂ ಪತ್ರಿಕಾಗೋಷ್ಠಿ ವೇಳೆ ಬಿಲ್ ಬಿಡುಗಡೆ ಮಾಡಿ ಎಂದ ಕಂಟ್ರಾಕ್ಟರ್ ಮಾತಿಗೆ ಸಾಫ್ಟ್ ಆಗಿ ಉತ್ತರಿಸಿದ ಸಿಎಂ, ಕಂಟ್ರಾಕ್ಟರ್ ಬಿಲ್ ನೀಡೋಕೆ ನಾವು ಕೆಲಸ ಮಾಡಿಸಿದ್ವಾ..? ಹಿಂದಿನವ್ರು ಮಾಡಿಸಿ ಬಿಟ್ಟೊಗಿರೋದು, ಮುಂದೆ ಕೊಡೋಣ ಎಂದು ಹೇಳಿದರು.