ನವದೆಹಲಿ: ವಾಣಿಜ್ಯ ಬಳಕೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಆಗಸ್ಟ್ 1 ರಿಂದಲೇ ಜಾರಿಗೆ ಬರುವಂತೆ 19 ಕೆಜಿ ಗಾತ್ರದ ಸಿಲಿಂಡರ್ ದರದಲ್ಲಿ 99.75 ರೂಪಾಯಿಯನ್ನು ತೈಲ ಮಾರುಕಟ್ಟೆ ಕಂಪನಿಗಳು ಕಡಿತ ಮಾಡಿವೆ.
100 ಕಡಿತದ ಬಳಿಕ 1780 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1680 ಕ್ಕೆ ಸಿಗಲಿದೆ. ದೆಹಲಿಯಲ್ಲಿ 99.75 ರೂಪಾಯಿ ಇಳಿಕೆ ಮಾಡಲಾಗಿದ್ದರೆ, ಇತರ ಮಹಾನಗರಗಳಲ್ಲಿ 93 ರೂಪಾಯಿಯಷ್ಟು ಕಡಿತ ಮಾಡಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
ದೇಶಾದ್ಯಂತ 19 ಕೆಜಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 99.75 ರೂಪಾಯಿ ಇಳಿಸಲಾಗಿದೆ. ಇತರ ಮಹಾನಗರಗಳಲ್ಲಿ 93 ರೂಪಾಯಿಗಳ ಕಡಿತವನ್ನು ಮಾಡಲಾಗಿದೆ. ಈಗ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ 1680 ರೂಪಾಯಿಗೆ ಲಭ್ಯವಿರುತ್ತದೆ.
ಇದುವರೆಗೆ ಅದು 1780 ರೂಪಾಯಿ ದರ ಇತ್ತು. ದರ ಇಳಿಕೆ ಆದೇಶ ಇಂದಿನಿಂದಲೇ (ಆಗಸ್ಟ್ 1) ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1895.50 ರೂ. ಇದ್ದು, ಈಗ 1802.50 ರೂ.ಗೆ ಸಿಗಲಿದೆ. ಮುಂಬೈನಲ್ಲಿ 1733.50 ರೂ.ಗೆ ಬದಲಾಗಿ 1640.50 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 1945 ರೂ. ಬದಲಿಗೆ 1852.50 ರೂ. (ರೂ. 92.50 ಇಳಿಕೆ) ಆಗಿದೆ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 93 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ.