ಮನೆ ದೇವಸ್ಥಾನ ನಿಮಿಷಾಂಭ ದೇವಾಲಯದ ಹುಂಡಿ ಎಣಿಕೆ.43ಲಕ್ಷ ರೂ ಸಂಗ್ರಹ

ನಿಮಿಷಾಂಭ ದೇವಾಲಯದ ಹುಂಡಿ ಎಣಿಕೆ.43ಲಕ್ಷ ರೂ ಸಂಗ್ರಹ

0

Join Our Whatsapp Group

ಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ವ್ಯಾಪ್ತಿಯ ಪ್ರಸಿದ್ದ ಗಂಜಾಂ ಶ್ರೀನಿಮಿಷಾಂಬ ದೇವಾಲಯದ ಭಕ್ತರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,ಬರೋಬರಿ ೪೩, ೬೭,೭೩೨ ಲಕ್ಷ ರೂಗಳು ಸಂಗ್ರಹವಾಗಿದೆ.ಕಳೆದ ಎರಡು ವರೆ ತಿಂಗಳ ಹಿಂದೆ ಎಣಿಕೆ ಕಾರ್ಯ ನಡೆದಿತ್ತು.ನಂತರದ ಜು.೩೧ರಂದು ನಡೆದ ಹುಂಡಿ ಎಣಿಕೆಯಲ್ಲಿ ಈ ಹಣ ಸಂಗ್ರಹವಾಗಿದೆ.ಹುಂಡಿಯಲ್ಲಿ ಭಕ್ತರಿಂದ ಹಾಕಿದ ಚಿನ್ನ ೧೪೨ ಗ್ರಾಂ , ಹಾಗೂ ಬೆಳ್ಳಿ ೧೮೯ ಗ್ರಾಂ ಬೆಳ್ಳಿ ಕೂಡ ದೊರೆತಿದೆ.

ದೇವಾಲಯದಲ್ಲಿ ಭಕ್ತರಿಗಾಗಿಯೇ ಹೊಸದಾಗಿ ನಿರ್ಮಿಸಿರುವ ದಾಸೋಹ ಭವನದಲ್ಲಿ ಪ್ರತಿ ವಾರದ ಮೂರು ದಿನ ಅಂದರೆ,ಭಾನುವಾರ, ಮಂಗಳವಾರ ಶುಕ್ರವಾರ ಹಾಗೂ ತಿಂಗಳ ಪ್ರತಿ ಹುಣ್ಣಿಮೆಯಂದು ನಡೆಯುವ ದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು, ದೇವಾಲಯಕ್ಕೆ ಬರುವ ಭಕ್ತರಿಗೆ ದಾಸೋಹ ಮಾಡಿದ ನಂತರ ನೀಡಿದ ಕಾಣಿಕೆ ಹುಂಡಿಯಲ್ಲೂ ಪ್ರತ್ಯೇಕವಾಗಿ ಈ ಬಾರಿ ೩ ಲಕ್ಷ ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದಲ್ಲಿ ಒಟ್ಟು ೧೮ ದಾಸೋಹ ಭವನವದಲ್ಲಿ ಒಂದು ಹುಂಡಿಯಲ್ಲಿ ಸಂಗ್ರಹಿಸಿದ ಹಣವನ್ನು ಸುರಿದು ಏಣಿಕೆ ಮಾಡಲಾಗಿತ್ತು.ದೇವಾಲಯ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ದೇವಾಲಯದ ಇಒ ಕೃಷ್ಣ, ಸಮಿತಿ ಸದಸ್ಯರಾದ,ಮಂಜುಳಾ, ಈ.ಕುಮಾರ್, ವಿದ್ಯಾ ಉಮೇಶ್ , ಪ್ರಶಾಂತ್, ಕೃಷ್ಣಪ್ಪ ಸೆರಿದಂತೆ ಇತರ ಸದಸ್ಯರು ಉಪಸ್ಥಿತಿಯಲ್ಲಿ, ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಎಣಿಕೆ ಕಾರ್ಯ ನಡೆಸಿದರು.

ಈ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಜಮಾ ಮಾಡಲಾಗಿದೆ.ದೇವಾಲಯ ಅಧೀಕ್ಷಕ ಚಂದ್ರಮೋಹನ್ , ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್ ಸೇರಿದಂತೆ ಇತರ ಸಿಬ್ಬಂದಿ ವರ್ಗ ಹಾಜರಿದ್ದರು.