ಮನೆ ಅಪರಾಧ ಆದೇಶ ಉಲ್ಲಂಘಿಸಿ ದಶಪಥ ಹೆದ್ದಾರಿಗಿಳಿದ ಬೈಕ್ ಗಳು: ದಂಡ ವಸೂಲಿ

ಆದೇಶ ಉಲ್ಲಂಘಿಸಿ ದಶಪಥ ಹೆದ್ದಾರಿಗಿಳಿದ ಬೈಕ್ ಗಳು: ದಂಡ ವಸೂಲಿ

0

ಮಂಡ್ಯ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಬೈಕ್, ಆಟೋ, ಟ್ರ್ಯಾಕ್ಟರ್ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೆದ್ದಾರಿಯಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಈ ಹೊಸ ನಿಯಮ ಜಾರಿ ಮಾಡಿದೆ.

Join Our Whatsapp Group

ಆದರೆ, ಮದ್ದೂರಿನಲ್ಲಿ ಈ ಆದೇಶಕ್ಕೆ ಜನ ಡೋಂಟ್ ಕೇರ್ ಅಂತ ಹೈವೆ ಗೆ ಇಳಿದ ಬೈಕ್ ಸವಾರರಿಗೆ ಮದ್ದೂರು ಸಂಚಾರಿ ಪೋಲೀಸರು ದಂಡ ವಿಧಿಸಿ ಮತ್ತೆ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು.

ಮದ್ದೂರು ತಾಲೂಕಿನ ಗಡಿಭಾಗ ನಿಡಘಟ್ಟ ಬಳಿ ಹೆದ್ದಾರಿಯ ಎರಡು ಬದಿಯ ಆಗಮನ ಮತ್ತು ನಿರ್ಗಮನದ ಬಳಿ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೆದ್ದಾರಿ ಪ್ರಾಧಿಕಾರದ ಆದೇಶ ಧಿಕ್ಕರಿಸಿ ಸಂಚರಿಸುತ್ತಿದ್ದ 40 ದ್ವಿಚಕ್ರ ವಾಹನ ಹಾಗೂ ಒಂದು ಟ್ರಾಕ್ಟರ್ ಗೆ ತಲಾ 500 ರೂ ದಂಡ ವಿಧಿಸಿ 20 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ.

ಬೈಕ್, ಆಟೋ ಹಾಗೂ ಟ್ರಾಕ್ಟರ್ ವಾಹನಗಳು ಹೆದ್ದಾರಿ ಬದಲಿಗೆ ಸರ್ವಿಸ್ ರಸ್ತೆಯಲ್ಲಿ ಮಾತ್ರ ಈ ವಾಹನಗಳು ಸಂಚರಿಸಬಹುದಾಗಿದೆ. ಹೆದ್ದಾರಿ ಉದ್ಘಾಟನೆಯಾದ ದಿನದಿಂದಲೂ ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿದೆ. ದಿನನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರ ನಿದ್ದೆಗೆಡಿಸಿದೆ. ಹೀಗಾಗಲೇ 290ಕ್ಕೂ ಹೆಚ್ಚು ಅಪಘಾತವಾಗಿದ್ದು, 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ಹೊಸ ನಿಯಮಯನ್ನು ಮಂಗಳವಾರದಿಂದ ಜಾರಿ ಮಾಡಲಾಗಿದೆ.

ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗೆ ನಿಷೇಧ ಹೇರಿದ್ದು ಸ್ಥಳೀಯರು ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ಪ್ರೆಸ್ ರಸ್ತೆಗಾಗಿ ನಮ್ಮ ಜಮೀನು ಕೊಟ್ಟಿದ್ದೇವೆ. ನಮಗೂ ಇಂತಹ ರಸ್ತೆಯಲ್ಲಿ ಓಡಾಡಬೇಕು ಅಂತ ಆಸೆ ಇದೆ. ನಮ್ಮತ್ರ ಕಾರಿಲ್ಲ ಕೊಂಡುಕೊಳ್ಳುವಷ್ಟು ನಮಗೆ ಆಗಲ್ಲ. ಬೈಕ್ ನಲ್ಲೆ ಹೋಗಬೇಕು ಹೀಗಾಗಿ ನಮಗೂ ಓಡಾಡೋಕೆ ಆಸೆ ಇರುತ್ತೆ ಅದಕ್ಕೆ ಅವಕಾಶ ಮಾಡಬೇಕು ಎಂದು ವಾಹನ ಸವಾರರು ಆಗ್ರಹಿಸಿದರು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಗಳೂರು ಮತ್ತು ರಾಮನಗರದ ಗಡಿಭಾಗವಾದ ಕಣಿಮಿಣಿಕೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಗಡಿಭಾಗವಾದ ಶ್ರೀರಂಗಪಟ್ಟಣದ ಬಳಿ ಟೋಲ್‌ ಗೇಟ್‌ಗಳಿವೆ. ಆದರೆ, ಮಂಡ್ಯ ಜಿಲ್ಲೆಯ ಬಹುತೇಕ ಭಾಗದಲ್ಲಿ ಟೋಲ್‌ ಗೇಟ್‌ ಇಲ್ಲ. ಆದ್ದರಿಂದ ಕೆಲವರು ಟೋಲ್‌ ಕಟ್ಟದೇ ಹೆದ್ದಾರಿಯನ್ನು ಬಳಸಿಕೊಂಡು ಹೋಗಿ ಇನ್ನೊಂದು ಮಾರ್ಗದಲ್ಲಿ ಹೊರ ಬರುತ್ತಿದ್ದಾರೆ. ಆದ್ದರಿಂದ, ಮಂಡ್ಯ ಸೇರಿ ಕೆಲವೆಡೆ ಬೈಕ್‌ ಸವಾರರು ಹೆದ್ದಾರಿಯಲ್ಲಿ ಬೈಕ್‌ ಸಂಚಾರ ನಿಷೇಧವಿದ್ದರೂ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದಾರೆ.