ಮನೆ ತಂತ್ರಜ್ಞಾನ ಆಧಾರ್ ಕಾರ್ಡ್ ಕಳೆದು ಹೋದರೆ ತಕ್ಷಣ ಲಾಕ್ ಮಾಡಲು ಹೀಗೆ ಮಾಡಿ

ಆಧಾರ್ ಕಾರ್ಡ್ ಕಳೆದು ಹೋದರೆ ತಕ್ಷಣ ಲಾಕ್ ಮಾಡಲು ಹೀಗೆ ಮಾಡಿ

0

ಆಧಾರ್ ಕಾರ್ಡ್ ಪ್ರತಿಯೊಬ್ಬನಿಗೂ ಮುಖ್ಯವಾಗಿರುತ್ತದೆ. ಆದರೆ ಈ ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡುವುದು? ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ.

Join Our Whatsapp Group

ಭಾರತದ ನಾಗರಿಕ ಗುರುತಿನ ಚೀಟಿ ಎನಿಸಿಕೊಂಡಿರುವ ಆಧಾರ್​ ಕಾರ್ಡ್​ ದೊಡ್ಡ ಮಾನ್ಯತೆಯಿದೆ. ದೇಶದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು.

ಆಧಾರ್ ಕಾರ್ಡ್ ಇಲ್ಲದೆ ಸರ್ಕಾರ ಲಾಭಗನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಪ್ರತಿಯೊಬ್ಬನಿಗೂ ಮುಖ್ಯವಾಗಿರುತ್ತದೆ. ಆದರೆ ಈ ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡುವುದು? ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ.

ಆಧಾರ್ ಕಾರ್ಡ್ ಕಳೆದು ಹೋದರೆ ಆಧಾರ್ ಸಂಖ್ಯೆಯನ್ನ ಲಾಕ್ ಮಾಡಬಹುದಾಗಿದೆ. ನಂತರ ಅನ್ ​ಲಾಕ್ ಮಾಡುವ ಮೂಲಕ ಬಳಸಬಹುದಾಗಿದೆ. ಆದರೆ ಅದು ಹೇಗೆ ಸಾಧ್ಯ?

ಯುಐಡಿಐಡಿ ಅಧಿಕೃತ ವೆಬ್ ​ಸೈಟ್ ​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮೊದಲಿಗೆ https://resident.uidai.in/ ಭೇಟಿ ನೀಡಬೇಕು.

ನಂತರ ಅಲ್ಲಿ ಕಾಣಿಸುವ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಆಯ್ಕೆಯನ್ನ ಕ್ಲಿಕ್ ಮಾಡಬೇಕು.

ಆ ಬಳಿಕ ಲಾಕ್​ ಅನ್ ​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಾಣಿಸುತ್ತದೆ. ನಂತರ ಅದರ ಮೇಲೆ ಕ್ಲಿಕ್ ಮಾಡಿರಿ.

ಲಾಗ್ ಇನ್ ಆಯ್ಕೆ ಕಾಣಿಸುತ್ತದೆ. ನಂತರ 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸಿ

ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಒಟಿಪಿ ಎಂಟರ್ ಮಾಡಿದ ನಂತರ, ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.

ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ಆಧಾರ್ ಕಾರ್ಡ್ ಲಾಕ್ ಆಗುತ್ತದೆ.