ಮೈಸೂರು: ‘ನಗರಾಡಳಿತ’ ವಿಷಯ ಕುರಿತು ನೆಲಮಂಗಲ ಮತ್ತು ಗದಗ ಬೆಟಗೇರಿ ನಗರಸಭೆ ಮತ್ತು ಪಿರಿಯಾಪಟ್ಟಣ, ಚಿಂಚಲಿ ಪುರಸಭೆಗೆ ಆಯ್ಕೆಗೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ “ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮೈಸೂರು” ವತಿಯಿಂದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಗಾರವನ್ನು ಸಂಸ್ಥೆ ನಿರ್ದೇಶಕರಾದ ವೆಂಕಟೇಶ ಕಡಗದ ಕೈ ಉದ್ಘಾಟಿಸಿದರು.
ಈ ವೇಳೆ ನಿರ್ದೇಶಕರು ಮಾತನಾಡಿ, ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗಳಿಗೆ ಸರ್ಕಾರ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಮುಖಾಂತರ ಪುರಸಭೆ, ನಗರಸಭೆ, ಪಾಲಿಕೆಗಳ ಸದಸ್ಯರಿಗೆ ನಗರಾಡಳಿತ ಕುರಿತು ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯ ವೇಳೆಯಲ್ಲಿ ಆಡಳಿತ, ಕಾರ್ಯವೈಖರಿ, ಸರ್ಕಾರದ ಯೋಜನೆಗಳು, ವಾರ್ಡ್ ಗಳಲ್ಲಿ ಸದಸ್ಯರ ಜವಾಬ್ದಾರಿಗಳನ್ನು ಕುರಿತು ತರಬೇತಿ ನೀಡಲಾಗುತ್ತದೆ. ಆದ್ದರಿಂದ ಈ ಕಾರ್ಯಗಾರವನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಿದರು.
ಸಂಸ್ಥೆ ಉಪನಿರ್ದೇಶರಾದ ರಾಜು. ಸಿ ರವರು ಪ್ರೇರಣಾ ನುಡಿಯನ್ನಾಡಿದರೆ, ಬೋಧಕರಾದ ಯಾದವ್ ಕುಮಾರ್ ಪ್ರಾರ್ಥಿಸಿದರು. ತರಬೇತಿಯ ಸಂಯೋಜಕರು ಹಾಗೂ ಬೋಧಕರಾದ ಬಿ . ವಿ ವೆಂಕಟೇಶ್ ಮತ್ತು ಸುನೀತಾ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.