ಮನೆ ರಾಜಕೀಯ ಸಂತೋಷ್  ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ ಷಡ್ಯಂತ್ರ: ಎಂ.ಪಿ.ರೇಣುಕಾಚಾರ್ಯ

ಸಂತೋಷ್  ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ ಷಡ್ಯಂತ್ರ: ಎಂ.ಪಿ.ರೇಣುಕಾಚಾರ್ಯ

0

ಬೆಂಗಳೂರು(Bengaluru): ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ  ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವ್ಯವಸ್ಥಿತ  ಷಡ್ಯಂತ್ರವಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೆಣುಕಾಚಾರ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾದ ಡ್ರಾಫ್ಟ್ ಸಿದ್ದವಾಗಿದ್ದೇ ಕಾಂಗ್ರೆಸ್ ನಾಯಕರ ಮನೆಯಲ್ಲಿ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತವಾಗಿ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಸಾವಿನ ಮನೆಯಲ್ಲಿ ಯಾರೊಬ್ಬರೂ ಕೂಡ ರಾಜಕಾರಣ ಮಾಡಬಾರದು. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ. ಸತ್ತವರ ಕುಟುಂಬಕ್ಕೆ  ಸಾಂತ್ವನ ಹೇಳಬೇಕು ಎಂದರು.

40% ಕಮೀಷನ್ ತೆಗೆದುಕೊಂಡರೆ 20% ರಾಜಧನ ಕಟ್ಟಬೇಕು. ಅಲ್ಲಿಗೆ 60% ಹೋಗುತ್ತದೆ. ಇನ್ನು ಉಳಿದ 40% ನಲ್ಲಿ ಕಾಮಗಾರಿ ನಡೆಸಲು ಸಾಧ್ಯವೇ? ಇದನ್ನು ಯಾರಾದರೂ ನಂಬುತ್ತಾರೆಯೇ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಸರ್ಕಾರಕ್ಕೆ ಕೆಟ್ಟ ತರಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಮ್ಮದು 40% ಕಮೀಷನ್  ಸರ್ಕಾರ  ಎನ್ನಲು ಕಾಂಗ್ರೆಸಿಗರು ಸತ್ಯ ಹರಿಶ್ಚಂದ್ರರೇ ಎಂದು ವಾಗ್ದಾಳಿ ಮಾಡಿದರು.

ಸಾವಿನ  ರಾಜಕಾರಣ  ಬೇಡ. ಕಾಂಗ್ರೆಸ್ ಜೆಡಿಎಸ್ ಯಾರೇ ಆತ್ಮಹತ್ಯೆಗೂ ಮುನ್ನವೇ ಸುರ್ಜೆವಾಲ, ಡಿಕೆಶಿ ಎಲ್ಲರು ಮಾತನಾಡುತ್ತಾರೆ. ಬಿಜೆಪಿ ಕೆಟ್ಟ ಹೆಸರು ತರಲು ಷಡ್ಯಂತ್ರ . ಸಂತೋಷ್ ಪಾಟೀಲ್ ವಿಷಯ ಮಾನತಾಡಲು ಇಷ್ಟಪಡಲ್ಲ. ಇದು ಕಾಂಗ್ರೆಸ್ ವ್ಯವಸ್ಥಿತ ಪಿತೂರಿ ಎಂದರು.

ಆತ್ಮಹತ್ಯೆ ವಿಚಾರ ಮಾತನಾಡುವುದೆ ಇಲ್ಲ ಈ ಡ್ರಾಪ್ಟ್ ಸಿದ್ದವಾಗಿದ್ದೇ ಕಾಂಗ್ರೆಸ್‍ನವರ ಮನೆಯಲ್ಲಿ  ಮುಖ್ಯಮಂತ್ರಿಗಳು ಪಾರದರ್ಶಕವಾಗಿ  ತನಿಖೆ ಮಾಡುತ್ತಾರೆ.

ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಸಾವಿನ ಬಗ್ಗೆ  ನಮಗೂ ನೋವಿದೆ. ಸರ್ಕಾರ ಹಾಗೂ ಸಿಎಂಗೂ ಅನುಕಂಪವಿದೆ.  ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆಂದು ಮನವಿ ಮಾಡಿದರು.

40% ಕಮೀಷನ್ ಕಮೀಷನ್ ಶುದ್ಧ ಸುಳ್ಳು. ಕಾಂಗ್ರೆಸ್ ನವರಿಗೆ ನಮ್ಮ ಸರ್ಕಾರದ ವಿರುದ್ಧ ಹೇಳಲು ವಿಷಯಗಳಿಲ್ಲಘಿ.  ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಈ ಆತ್ಮಹತ್ಯೆ ಪ್ರಕರಣವನ್ನು ಸಾವಿನ ರಾಜಕಾರಣ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಲು ಹೊರಟಿದೆ. ಇದು ನಡೆಯುವುದಿಲ್ಲ.  ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರುಗಂಭೀರ ಆರೋಪ ಮಾಡಿದ್ದಾರೆ. ಈಶ್ವರಪ್ಪ ವಜಾ ಮಾಡಲು, ಸಿಎಂ ಪಾಲಿದೆ ಎಂದು ಆರೋಪಿಸುತ್ತಿದ್ದಾರೆ ಇದು ‌ಸರಿಯೇ ಪ್ರಶ್ನೆಸಿದರು.

ನಮ್ಮ ಸರ್ಕಾರ, ಸಿಎಂ, ಗೃಹಸಚಿವರು  ಪ್ರಕರಣದ ಬಗ್ಗೆ ಪಾರದರ್ಶಕ  ತನಿಖೆ ಮಾಡಿಸುತ್ತಾರೆ.  ತನಿಖೆ ಬಳಿಕ ವರದಿ ಬರಲಿದೆ. ತನಿಖೆ ನಡೆಯುವ ಮೊದಲೇ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತನಿಖಾ ವರದಿ ಬರುವ ಮೊದಲೇ ಸಿಎಂ ಮೇಲೆ ಆರೋಪ ಮಾಡುವ  ನೈತಿಕತೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಗುಡುಗಿದರು.