ಮನೆ ಆರೋಗ್ಯ ಸಕಲ ಚರ್ಮ ವ್ಯಾಧಿಗಳಿಗೆ ಮನೆ ಮದ್ದು: ಭಾಗ- 03

ಸಕಲ ಚರ್ಮ ವ್ಯಾಧಿಗಳಿಗೆ ಮನೆ ಮದ್ದು: ಭಾಗ- 03

0

ಸುಡು ಬಿಸಿಲಿನ ಬೇಗೆಯಿಂದ ಮುಖ ಕಪ್ಪಾಗಿರುವಾಗ :

●  ಮುಖವನ್ನು ತಣ್ಣೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ, ನಂತರ ಸೌತೆಕಾಯಿ ಬಿಲ್ಲೆಯಿಂದ ಮುಖದಾದ್ಯಂತ ನಯವಾಗಿ ಉಜ್ಜಿ. ಪ್ರತಿದಿನವೂ 5 ರಿಂದ 10 ನಿಮಿಷಗಳ ಕಾಲ ಈ ಉಪಚಾರ ಮಾಡುವುದು ಅಗತ್ಯ.

Join Our Whatsapp Group

ಮುಖದ ಮೇಲಿನ ಕಪ್ಪು ಕಲೆಗಳ ನಿವಾರಣೆಗಾಗಿ:

●  ನಿಂಬೆರಸ ಹಿಂಡಿದ ನಂತರ ಉಳಿಯುವ ಸಿಪ್ಪೆಯ ಒಳ ಪಾರ್ಶ್ವವನ್ನು ಹೊರಮುಖ ಮಾಡಿ, ಚರ್ಮದ ಮೇಲೆ ತಿಕ್ಕಿ. ಹಲವು ದಿನಗಳವರೆಗೆ ಈ ಉಪಚಾರ ಮಾಡುತ್ತಿದ್ದರೆ ಕಲೆಗಳು ನಿವಾರಣೆಯಾಗುವುವು.

●  ಎಳೆ ಮೂಲಂಗಿ ತುರಿದು ಚೆನ್ನಾಗಿ ಮಸೀಯಿರಿ. ಆ ಬಳಿಕ ರಸ ಹಿಂಡಿ, ಮೂಲಂಗಿಯರಸವನ್ನು ಅಷ್ಟೇ ಪ್ರಮಾಣ ಮಜ್ಜಿಗೆ ಯೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ. ಅರ್ದ ತಾಸು ಕಳೆದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ ಮತ್ತು ತೇವವನ್ನು ಮೃದುವಾದ ಟವಲ್ಲಿನಿಂದ ಒತ್ತಿ ತೆಗೆಯಿರಿ. ಕೆಲಕಾಲದವರೆಗೆ ಪ್ರತಿದಿನವೂ ಈ ಉಪಚಾರ ಮಾಡುತ್ತಿದ್ದರೆ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುವು.

●  ಒಣ ಬಟಾಣಿಕಾಳು  ಹಿಟ್ಟನ್ನು ಬಟ್ಟೆಯಲ್ಲಿ ಗಾಳಿಸಿ, ನುಣ್ಣಗೆ ಹಿಟ್ಟು ಪಡೆಯಿರಿ. ಈ ಹಿಟ್ಟನ್ನು ಹಸಿ ಹಾಲಿನಲ್ಲಿ ಕಲಿಸಿ ಸರಿ ತಯಾರಿಸಿ. ಈ ಸರಿಯನ್ನು ಮುಖದಾದ್ಯಂತ ತೆಳುವಾಗಿ ಲೇಪಿಸಿ ಹಗುರವಾಗಿ ತಿಕ್ಕಿ.

●  ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಕಪ್ಪು ಕಲೆಯನ್ನು ತಿಕ್ಕುತ್ತಿದ್ದರೆ ಕಲೆಗಳು ಕ್ರಮೇಣ ಅದೃಶ್ಯವಾಗುವವು.

●  ಒಣಗಿದ ಗುಲಾಬಿ ಹೂವಿನ ದಳಗಳು, ಅಪ್ಪಟ ಅರಿಶಿಣದ ಪುಡಿ, ಬಲಿತನ ನೆಲ್ಲಿಕಾಯಿ ಚೆಟ್ಟು, ತಾಜ ಕೊತ್ತಂಬರಿ ಸೊಪ್ಪು ಇವಿಷ್ಟನ್ನು ಸಮತೂಕದಲ್ಲಿ ತೆಗೆದುಕೊಳ್ಳಿ. ಇವುಗಳ ಒಟ್ಟು ತೂಕದಷ್ಟು ಹೆಸರು ಬೆಳೆಯೊಂದಿಗೆ ಎಲ್ಲವನ್ನು ಮಿಶ್ರಣ ಮಾಡಿ ಇದಿಷ್ಟನ್ನು ಎಳ್ಳೆಣ್ಣೆ, ಮೊಸರು ಮತ್ತು ನಿಂಬೆರಸದೊಂದಿಗೆ ನುಣ್ಣಗೆ ಅರೆಯಿರಿ. ಹೀಗೆ ತಯಾರಿಸಿದ ಸರಿಯನ್ನು ಮುಖಕ್ಕೆ ಹಚ್ಚಿ  ಮೆದುವಾಗಿ ತಿಕ್ಕಿ. 15ರಿಂದ 20 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಿರಿ. ಯಾವುದೇ ಕೊಳೆ ನಿವಾರಕ (ಸಾಬೂನು, ಸಿಕೆಪುಡಿ ಇತ್ಯಾದಿ) ಬಳಸಬೇಡಿ. ಮುಖದ ಸೌಂದರ್ಯ ವೃದ್ಧಿಗೆ ಮತ್ತು ಕಪ್ಪು ಕಲೆಗಳ ನಿವಾರಣೆಗೆ ಇದು ಅತ್ಯುತ್ತಮ ಚಿಕಿತ್ಸೆ.

ಗಾಯದ ಕಲೆಗಳ ನಿವಾರಣೆಗೆ:

●  ಗಾಯದ ಕಲೆಗಳ ಮೇಲೆ ಜೇನುತುಪ್ಪ ಹಚ್ಚುತ್ತಿದ್ದರೆ ಕಲೆಗಳು ನಿವಾರಣೆಯಾಗಿ, ಚರ್ಮದ ಬಣ್ಣ ಸ್ವಾಭಾವಿಕ ಸ್ಥಿತಿಗೆ ಬರುವುದು.

 ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸಲು:

●  ಹಸುವಿನ ಹಾಲಿನ ನೊರೆಯನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ತಿಕ್ಕಿ. ತಪ್ಪದೇ ಈ ಕ್ರಮ ಅನುಸರಿಸುತ್ತಿದ್ದಲ್ಲಿ ಮುಖದ ಚರ್ಮ ಹೂವಿನಂತೆ ಮೃದುವಾಗುವುದು ಮತ್ತು ಮೊಡವೆಗಳು ಹಾಗೂ ಸುಕ್ಕು ಹೇಳ ಎಸರಿಲ್ಲದಂತಾಗುವುದು.

ಬೆವರು ಸಾಲಿ ನಿವಾರಣೆಗೆ:

 ● ಪ್ರತಿದಿನವೂ ತಣ್ಣೀರು ಸ್ನಾನ ಮಾಡುತ್ತಿದ್ದರೆ ಮೈಮೇಲೆ ಬೆವರು ಗುಳ್ಳೆಗಳು ಏಳುವುದಿಲ್ಲ ಮತ್ತು ಮೂಡುವೆಗಳ ಉಪದ್ರವ ಬಹುಮಟ್ಟಿಗೆ ಕಡಿಮೆಯಾಗುವುದು.

●  ಬೆವರು ಸಾಲೆ ಉಪದ್ರವವನ್ನು “ಸಿ” ಜೀವಸತ್ವದ ಪೂರೈಕೆಯಿಂದ ನಿವಾರಿಸಬಹುದು. ಬೆವರು ಸಾಲೆ ಕಾಣಿಸಿಕೊಂಡ ನಂತರ ಬಿಸಿಯಾದ ಆಹಾರವನ್ನಾಗಲಿ, ಪಾನಿಯನ್ನು ಆಗಲಿ ಸೇವಿಸುವುದು ಉಪಯುಕ್ತವಲ್ಲ. ಈ ಅವಧಿಯಲ್ಲಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಕು. ಸ್ನಾನಕ್ಕೆ ಸಾಬೂನಿಗೆ ಬದಲಾಗಿ, ಕಡಲೆ ಹಿಟ್ಟು ಬಳಸಬೇಕು. ಸ್ನಾನದ ನಂತರ ಮೈಮೇಲೆ ಅಧಿಕ ಗುಣಮಟ್ಟದ ಟಾಲ್ಕಂ ಪೌಡರ್ ಸಿಂಪಡಿಸಬೇಕು. ಸ್ವಚ್ಛವಾದ ಗಾಳಿ ದೊರಕುವ ಜಾಗದಲ್ಲಿ ನಿದ್ರಿಸಬೇಕು. ನಿಂಬೆ, ಮೂಸಂಬಿ, ಕಿತ್ತಳೆ ಹಣ್ಣಿನ ರಸವನ್ನು ಯಥೇಚ್ಛವಾಗಿ ಸೇವಿಸಬೇಕು.

ಮುಖದ ಚರ್ಮ ಹೂವಿನಂತೆ ಮೃದುವಾಗಲು:

●  ನಿಂಬೆ, ಕಿತ್ತಳೆ ಹಾಗೂ ಮೂಸಂಬಿ ಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಹಾಕಿ ಚೆನ್ನಾಗಿ ಒಣಗಿಸಿ. ಒಣಗಿಸಿದ ಸಿಪ್ಪೆಯನ್ನು ಕುಟ್ಟಿ ಜರಡಿ ಹಿಡಿದು, ನುಣುಪಾದ ಚೂರ್ಣ ತಯಾರಿಸಿ, ಈ ಚೂರ್ಣವನ್ನು ಒಂದು ಗಾಜಿನ ಬಾಟಲಿನಲ್ಲಿ ತುಂಬಿಡಿ. ಅಗತ್ಯವೆನಿಸಿದಾಗ ಸ್ವಲ್ಪ ಚೂರ್ಣವನ್ನು ಹಾಲಿನೊಂದಿಗೆ ಸೇರಿಸಿ  ಚೆನ್ನಾಗಿ ಗಂಧವನ್ನು ಮುಖಕ್ಕೆ ಲೇಪಿಸಿ. ಈ ಉಪಚಾರದಿಂದ ಮುಖದ ಚರ್ಮ ಮೃದುವಾಗುವುದು ಮತ್ತು ಮುಖ ಶೋಭಾಯಮಾನವಾಗಿ ಕಾಣುವುದು.

●  ಸುಮಾರು 50 ಗ್ರಾಂ ಹಾಲಿನ ಕೆನೆಗೆ, ಒಂದು ಟೀ ಚಮಚ ನಿಂಬೆರಸ ಹಿಂಡಿ ಚೆನ್ನಾಗಿ ಮಸೆಯಿರಿ. ಈ ಕಾಂತಿವರ್ಧಕ ಮುಲಾಮನ್ನು ರಾತ್ರಿ ಮಲಗುವುದಕ್ಕಿಂತ ಮುಂಚೆ ಮುಖಕ್ಕೆ ಲಿಪಿಸಿ. ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಸಾಬೂನುನನ್ನಾಗಲಿ, ಸೀಗೆಪುಡಿ ಯನ್ನಾಗಲಿ ಬಳಸಬೇಡಿ. ನಾಲ್ಕೈದು ವಾರಗಳ ಕಾಲ ಈ ಉಪಚಾರ ಮಾಡಿದಲ್ಲಿ ಮುಖವು ಸ್ವಚ್ಛವಾಗಿ ಹಾಗೂ ಕಾಂತಿಯುತವಾಗಿ ಶೋಭಿಸುವುದು.

 ● ಹಾಲಿನ ಕೆನೆಯೊಂದಿಗೆ ಹರಿಶಿಣದ ಪುಡಿ, ಶ್ರೀಗಂಧದ ಚೂರ್ಣ, ಕಡಲೆ ಹಿಟ್ಟು ಮಿಶ್ರಣ ಮಾಡಿ ಚೆನ್ನಾಗಿ ಮಸೆಯಿರಿ. ಈ ಸರಿಯನ್ನು ರಾತ್ರಿ ಮಲಗುವುದಕ್ಕಿಂತ ಮುಂಚೆ ಮುಖದಾದ್ಯಂತ ಲೇಪಿಸಿ. ಮರುದಿನ ಬೆಳಿಗ್ಗೆ ಉಗುರು ಬೆಚ್ಚಗಿರುವ ನೀರಿನಿಂದ ಮುಖ ತೊಳೆಯಿರಿ. ಕೆಲುವು ದಿನಗಳ ಸತತ ಉಪಚಾರದಿಂದ ಮುಖದ ಮೇಲಿನ ಕಲೆಗಳು ಬುಕ್ಕೆಗಳು ನಾಶವಾಗಿ ಸೌಂದರ್ಯ ವೃದ್ಧಿಯಾಗುವುದು.

●  ಚೆನ್ನಾಗಿ ಕಳಿತ ಒಂದು ತುಣುಕು ಪರಂಗಿ ಹಣ್ಣನ್ನು ನುಣ್ಣಗೆ ಮಸಿಯಿರಿ. ಈ ಸರಿಯನ್ನು ಮುಖಕ್ಕೆ ಲೇಪಿಸಿ ಮಾಲಿಶ್ ಮಾಡಿ 10 ರಿಂದ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿರುವ ನೀರಿನಿಂದ ಮುಖ ತೊಳೆಯಿರಿ. ಈ ಉಪಚಾರವನ್ನು ಸುಧೀರ್ಘಕಾಲದವರೆಗೆ ಮುಂದುವರೆಸಿದಲ್ಲಿ ಮುಖದ ಚರ್ಮ ಹೂವಿನಂತೆ ಮೃದುವಾಗಿ ಲಕಲಕ ಹೊಳಿಯುವುದು.

ಮುಂದುವರೆಯುತ್ತದೆ…