ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮೊಗೇನಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಮೊಗೇನಹಳ್ಳಿ ಕೆರೆಯಲ್ಲಿ ಬುಧವಾರ ರಾತ್ರಿಯಿಂದ ಬೀಡುಬಿಟ್ಟಿವೆ.
ಕಾಡಾನೆ ಇರುವ ಜಾಗದಲ್ಲೇ ವಾಸ್ತವ್ಯ ಹೂಡಿರುವ ಅರಣ್ಯ ಸಿಬ್ಬಂದಿ, ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.
ಇಂದು ಸಂಜೆ ಆನೆಗಳನ್ನು ಕಾಡಿಗಟ್ಟಲು ತಯಾರಿ ಮಾಡಕೊಂಡಿದ್ದಾರೆ.














