ಮನೆ ಆರೋಗ್ಯ ಚರ್ಮದ ರಕ್ಷಣೆಗೆ ಕೆಲವು ಮನೆ ಮದ್ದು

ಚರ್ಮದ ರಕ್ಷಣೆಗೆ ಕೆಲವು ಮನೆ ಮದ್ದು

0

●  ಗ್ಲಿಸರಿನ್ ನಿಂಬೆರಸ ಮತ್ತು ಪನ್ನೀರು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ ಈ ಮಿಶ್ರಣವನ್ನು ಮುಖ ಹಾಗೂ ಕೈಕಾಲುಗಳಿಗೆ ಲೇಪಿಸಿ.

Join Our Whatsapp Group

 ಚರ್ಮ ಮೃದುವಾಗಿಸಲು:

●  ಎಲ್ಲಣ್ಣನ್ನು ಅಂಗಾಂಗಗಳಿಗೆ ಹಚ್ಚಿ ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡುವ ಅಭ್ಯಾಸವಿಟ್ಟುಕೊಂಡರೆ ಚರ್ಮ ಸದಾಕಾಲಾ ಮೃದುವಾಗಿರುವುದು ಚರ್ಮವನ್ನು ಉಜ್ಜಿ ತೊಳೆಯಲು ಚಿಗರೆ ಪುಡಿ ಮತ್ತು ಕಡಲೆ ಹಿಟ್ಟಿನ ಮಿಶ್ರಣ ಬಳಸುವುದು ಲೇಸು.

 ಚರ್ಮದ ಸೌಂದರ್ಯ ರಕ್ಷಣೆಗೆ:

●  ಅರ್ಧ ಬಟ್ಟಲು ಹಸಿ ಹಾಲಿನೊಂದಿಗೆ ಒಂದು ಹೋಳು ನಿಂಬೆಹಣ್ಣಿನ ರಸ 1/2 ಟೀ ಚಮಚ ಗ್ಲಿಜರಿನ್ ಮಿಶ್ರ ಮಾಡಿ, ಈ ಮಿಶ್ರಣವನ್ನು ರಾತ್ರಿ ಮಲಗುವುದಕ್ಕಿಂತ ಮುಂಚೆ ಮುಖ, ಕೈ, ಕಾಲು, ಬೆನ್ನು, ಕುತ್ತಿಗೆ ಈ ಭಾಗಗಳಿಗೆ ಹಚ್ಚಿ ಮಲಗಿ. ಸುಖೋಷ್ಣವಾದ ನೀರಿನಲ್ಲಿ ಸ್ನಾನ ಮಾಡಿ. ಅಗತ್ಯವಿರುವಷ್ಟು ಕಾಲ ಈ ಉಪಚಾರ ಮಾಡುತ್ತಿದ್ದರೆ ಚರ್ಮ ಮೃದುವಾಗಿಯೂ, ಕೋಮಲವಾಗಿಯು, ಕಾಂತಿಯುತವಾಗಿಯೂ ಶೋಭಿಸುವುದು. ಚಳಿಗಾಲದಲ್ಲಿ ಚರ್ಮ ಹೊಡೆಯುವುದಿಲ್ಲ, ಅಂಗಲಿನಲ್ಲಿ ಕಾಣಿಸಿಕೊಳ್ಳುವ ಬಿರುಕುಗಳು ಮುಚ್ಚಿ ಹೋಗುವುವು.

ಅಂಗಾಲು ಅಂಗೈ ಬೆವರುತ್ತಿದ್ದರೆ:

● ಒಂದು ಬಟ್ಟಲು ಹಾಲಿಗೆ ಕೆಲವು ತೊಟ್ಟು ಬೇವಿನ ಎಣ್ಣೆ ಬೆರೆಸಿ ಪ್ರತಿದಿನ ಸೇವಿಸಿರಿ ಈ ಅವಧಿಯಲ್ಲಿ ಅಂಗಾಲು ಅಂಗೈಗಳಿಗೆ ಎಣ್ಣೆ ಸವರಿ ಚೆನ್ನಾಗಿ ತಿಕ್ಕಿ.

●  ನೆಲ್ಲಿಕಾಯಿ ಜಜ್ಜಿ ರಸಾ ತೆಗೆಯಿರಿ ಈ ರಸವನ್ನು ದಿನವಹಿ ಅಂಗಾಲು, ಅಂಗೈಗಳಿಗೆ ಲೇಪಿಸಿ.

ಅಂಗಾಲು ಒಡೆದು ಬಿರುಕು ಬಿಟ್ಟಿರುವಾಗ:

●  ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಇಟ್ಟು ಒಣಗಿಸಿ, ಸುಟ್ಟು ಬೂದಿ ತಯಾರಿಸಿ. ಹಿಮ್ಮಡಿ ಮತ್ತು ಅಂಗಾಲಿನಲ್ಲಿ ಕಂಡುಬರುವ ಬಿರುಕುಗಳಲ್ಲಿ ಈ ಬೂದಿಯನ್ನು ಒತ್ತಿ ತುಂಬಿರಿ.

●  ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಬಿರುಕು ಬಿಟ್ಟಿರುವ ಅಂಗಾಲಿಗೆ ಲೇಪಿಸಿ ಕಟ್ಟು ಕಟ್ಟಿ.

●  ಪಾದಗಳನ್ನು ಇರಿಸುವಷ್ಟು ಅಗಲವುಳ್ಳ ಪಾತ್ರೆಗೆ ಹೆಚ್ಚು ಮುಳುಗುವಷ್ಟು ಬಿಸಿ ನೀರು ಸುರಿಯಿರಿ ಈ ನೀರಿಗೆ ಒಂದು ಊಟದ ಚಮಚ ಅಡುಗೆ ಸೋಡಾ ಹಾಕಿ 10 ನಿಮಿಷಗಳವರೆಗೆ ಪಾದಗಳನ್ನು ಅದರಲ್ಲಿರಿ ಮೂರು ದಿನಗಳ ಚಿಕಿತ್ಸೆಯಿಂದ ಗುಣ ಕಂಡುಬರುವುದು.

●  ಪ್ಯಾರಫಿನ್ ಮೀನಾ 150 ಗ್ರಾಂ, ತೆಂಗಿನ ಎಣ್ಣೆ 50 ಗ್ರಾಂ, ತುಪ್ಪ 50 ಗ್ರಾಂ ಮತ್ತು ಕರ್ಪೂರ 10 ರಿಂದ 15 ಬಿಲ್ಲೆ, ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಾಯಿಸಿ, ಮಿಶ್ರಣ ದ್ರವ ರೂಪ ಹೊಂದಿದ ನಂತರ ಕಾಯಿಸುವುದನ್ನು ನಿಲ್ಲಿಸಿ. ತಣಿಸಿ. ಮುಲಾಮಿನಂತಹ ಪದಾರ್ಥ ಸಿದ್ಧವಾಗುವುದು ಈ ಮುಲಾಮು ಹಚ್ಚುತ್ತಿದ್ದರೆ ಒಡೆದ ಅಂಗಾಲು ಗುಣವಾಗುವುದು.

ಬೆವರಿನ ವಾಸನೆ ಅಸಹನೀಯವೆನಿಸಿದಾಗ:

●  ಮೃದುವಾದ ಹಸಿರು ಗರಿಕೆಯಿಂದ ಮೈ ತಿಕ್ಕಿ ಸ್ನಾನ ಮಾಡುವುದರಿಂದ ದೇಹದಿಂದ ಹೊರಡುವ ದುರ್ಗಂಧ ನಾಶವಾಗುವುದು ಮತ್ತು ಚರ್ಮ ಸಂಬಂಧವಾದ ದೋಷಗಳು ನಿವಾರಣೆಯಾಗುವುವು.

●  ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆಯಿರಿ, ಆ ಸರಿಯಾಯಯಿಂದ ಅಂಗಾಂಗಗಳನ್ನು ತಿಕ್ಕಿ ಸ್ನಾನ ಮಾಡುವುದರಿಂದ ದೇಹವು ಬೆವರಿನ ವಾಸನೆಯಿಂದ ಮುಕ್ತವಾಗುವುದು.

ಮೊಡವೆಗಳ ನಿವಾರಣೆಗೆ:

●  ಗರಿಕೆ ಹುಲ್ಲಿನ ರಸಾ ಹಚ್ಚುತ್ತಿದ್ದರೆ ಮೊಡವೆಗಳು ನಿವಾರಣೆಯಾಗುವುವು ಮತ್ತು ಮುಖದ ಮೇಲಿನ ಕಲೆಗಳು ನಿವಾರಣೆಯಾಗುವುವು.

●  ಮೊಡವೆಗಳ ಉಲ್ಬಣತೆಗೆ ನಿದ್ರಾಹೀನತೆ, ಮಲಬದ್ಧತೆ, ಅತಿಯಾದ ಆಹಾರ ಸೇವನೆ, ಕರೆದ ಪದಾರ್ಥಗಳ ಸೇವನೆ, ಮಾದಕ ವಸ್ತುಗಳ ಬಳಕೆ, ಅಜೀರ್ಣ, ಭಾವೋದ್ವೇಗ ಅತಿ ಮುಖ್ಯ ಕಾರಣಗಳೆಂದರೆ ತಪ್ಪಾಗಲಾರದು ಆದುದರಿಂದ ಮೊಡವೆಗಳ ಕಾಟದಿಂದ ಮುಕ್ತರಾಗಬೇಕಾದಲ್ಲಿ ಈ ಅಂಶಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ.

●  ತೇದಾ ಶ್ರೀಗಂಧ ಮತ್ತು ಅರಿಶಿಣದ ಗಂಧ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಹಾಲಿನ ಕೆನೆ ಯೊಂದಿಗೆ ಬೆರೆಸಿ ಚೆನ್ನಾಗಿ ಮಸಿಯಿರಿ ಇದನ್ನು ಪ್ರತಿದಿನ ಮುಖಕ್ಕೆ ಹಚ್ಚಿ ಒಂದೆರಡು ಗಂಟೆಗಳ ನಂತರ ಸುಖೋಷ್ಣವಾದ ನೀರಿನಿಂದ ಮುಖ ತೊಳೆಯಿರಿ.

●  ಟೊಮೆಟೊ ಹಣ್ಣಿನ ರಸವನ್ನಾಗಲಿ, ಸೌತೆಕಾಯಿ ರಸವನ್ನಾಗಲಿ, ನಿಂಬೆರಸವನ್ನಾಗಲಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆಗಳ ನಂತರ ಉಗುರು ಬೆಚ್ಚಿನ ನೀರಿನಿಂದ ಮುಖ ತೊಳೆಯಿರಿ.

●  ಹಿಂಗನ್ನು ನೀರಿನಲ್ಲಿ ತೇದು ಮೊಡವೆಗಳಿಗೆ ಹಚ್ಚಿ.

● ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ಮುಖದ ಮೇಲೆ ತೆಳುವಾಗಿ ಹಚ್ಚಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ.

●  ಜೇನಿನೊಂದಿಗೆ ನಿಂಬೆರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿ ಒಂದು ಗಂಟೆಯ ತರುವಾಯ ಮುಖ ತೊಳೆಯಿರಿ.

●  “ಏ” ಜೀವ ಸ್ವತ್ವವುಳ್ಳ ಟೊಮ್ಯಾಟೋ, ಎಲೆಕೋಸು, ಬಸಳೆ ಸೊಪ್ಪು, ನುಗ್ಗೆ ಸೊಪ್ಪು, ಪರಂಗಿ ಹಣ್ಣು ಸೇವಿಸುತ್ತಿದ್ದರೆ ಮೊಡವೆಗಳು ಉಲ್ಬಾಣಿಸುವುದಿಲ್ಲ.

●  ಕೆನೆ ತೆಗೆದ ಹಸುವಿನ ಹಾಲಿನಿಂದ ತಯಾರಿಸಿದ ಮೋಸರಿನೊಂದಿಗೆ ನುಣುಪಾದ ಕಡಲೆ ಹಿಟ್ಟು ಬೆರೆಸಿ ಸರಿ ತಯಾರಿಸಿ. ಈ ಸರಿಯನ್ನು ಮುಖಕ್ಕೆ ಲೇಪಿಸಿ 10 ರಿಂದ 15 ನಿಮಿಷಗಳು ಕಳೆದ ನಂತರ ಉಗುರು ಬೆಚ್ಚಗಿನ ಇರುವ ನೀರಿನಿಂದ ಮುಖ ತೊಳೆಯಿರಿ. ಆದರೆ ಮುಖವನ್ನು ಉಜ್ಜಿ ತೊಳೆಯಬೇಡಿ ಮೃದುವಾದ ಟವಲ್ನಿಂದ ತೇವ ಒತ್ತಿ ತೆಗಿಯಿರಿ.

●  ಸೇಬು ಹಣ್ಣು ಮತ್ತು ಕಿತ್ತಲೆ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಒಣಗಿಸಿ ಚೂರ್ಣ ತಯಾರಿಸಿ ಒಂದು ಡಬ್ಬಿಯಲ್ಲಿ ತುಂಬಿಡಿ ಅಗತ್ಯವೆನಿಸಿದಾಗ ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಇದರೊಂದಿಗೆ ಹಾಲು ಸಕ್ಕರೆ ಬೆರೆಸಿ ಸೇವಿಸಿ ಪ್ರತಿದಿನವೂ ಬೆಳಿಗ್ಗೆ ಮತ್ತು ಸಾಯಂಕಾಲಸುವುದರಿಂದ ಪ್ರಯೋಜನ ಉಂಟು.

 ಚಿಕಿತ್ಸೆಯ ಅವಧಿ ಪೂರ್ಣ ಒಂದು ಟೀ ಚಮಚದಷ್ಟು ಬಿಸಿ ಹಾಲಿನಲ್ಲಿ ಒಂದೆರಡು ಚಿಟಿಕೆ ಚೂರ್ಣವನ್ನು ಕಲಿಸಿ ಮುಖದ ಮೇಲೆ ಸವರುತ್ತಿದ್ದಲ್ಲಿ ಶೀಘ್ರ ಗುಣ ಕಂಡುಬರುವುದು.

●  ನುಣ್ಣಗೆ ಅರೆದ ಮೆಂತ್ಯದ ಸೊಪ್ಪಿನೊಂದಿಗೆ ಸ್ವಲ್ಪ ನಿಂಬೆರಸ ಸೇರಿಸಿ ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಸರಿಯನ್ನು ಮುಖದಾದ್ಯಂತ ಲೇಪಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ ಒಂದೆರಡು ವಾರಗಳ ಕಾಲ ಈ ಚಿಕಿತ್ಸೆ ಮಾಡಿದಲ್ಲಿ ಮೊಡವೆಗಳು ಕಪ್ಪು ಕಲೆಗಳು ಮಾಯವಾಗಿ ಮುಖದ ಚರ್ಮ ಕಾಂತಿಯುತವಾಗಿ ಕಾಣುವುದು.