ಮನೆ ಅಪರಾಧ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ:  ಬಿಬಿಎಂಪಿ ಆರ್ ​ಐ ಲೋಕಾಯುಕ್ತ ಬಲೆಗೆ

5 ಲಕ್ಷ ರೂ. ಲಂಚಕ್ಕೆ ಬೇಡಿಕೆ:  ಬಿಬಿಎಂಪಿ ಆರ್ ​ಐ ಲೋಕಾಯುಕ್ತ ಬಲೆಗೆ

0

ಬೆಂಗಳೂರು: ಬಿಬಿಎಂಪಿ ಮಹದೇವಪುರ ಕಂದಾಯ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ ನಟರಾಜ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಖಾಸಗಿ ವ್ಯಕ್ತಿ ಪವನ್ ಮೂಲಕ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.

ಇನ್ನು ನಟರಾಜ್ ಫ್ಲ್ಯಾಟ್ ಖಾತೆ ಮಾಡಿಕೊಡಲು 1 ಫ್ಲ್ಯಾಟ್​ ಗೆ 10 ಸಾವಿರದಂತೆ 79 ಫ್ಲ್ಯಾಟ್ ​ಗೆ 7.90 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ. ಅದರಂತೆ ಮುಂಗಡವಾಗಿ 5 ಲಕ್ಷ ರೂ. ಲಂಚ ಪಡೆಯುವಾಗ ಬಿಬಿಎಂಪಿ ಆರ್​ ಐ ನಟರಾಜ್, ಆರೋಪಿ ಪವನ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.