ಮನೆ ರಾಜ್ಯ ಪಕ್ಷದ ವರಿಷ್ಠರು ಸೂಚಿಸಿದ್ರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ: ಸಚಿವ ಕೆ.ಎನ್ ರಾಜಣ್ಣ

ಪಕ್ಷದ ವರಿಷ್ಠರು ಸೂಚಿಸಿದ್ರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ: ಸಚಿವ ಕೆ.ಎನ್ ರಾಜಣ್ಣ

0

ತುಮಕೂರು: ಪಕ್ಷದ ವರಿಷ್ಠರು ಸೂಚನೆ ನೀಡಿದರೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ತುಮಕೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎನ್​.ರಾಜಣ್ಣ, ಹೈಕಮಾಂಡ್​ನಿಂದ ಇನ್ನೂ ಯಾವ ರೀತಿಯ ಸೂಚನೆ ಬಂದಿಲ್ಲ. 34 ಸಚಿವರಿಗೂ ಪ್ರತಿ ಲೋಕಸಭೆ ಕ್ಷೇತ್ರದ ಉಸ್ತುವಾರಿ ಕೊಡುತ್ತಾರೆ. ಹಾಸನದಲ್ಲಿ ನನ್ನ ನೇತೃತ್ವದಲ್ಲಿ ನಡೆಯುತ್ತೆ ಎನ್ನುವ ನಂಬಿಕೆ ಇದೆ ಎಂದರು.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ 20 ಸೀಟುಗಳನ್ನು ಗೆಲ್ಲಿಸಿ ಕೊಡುವುದಾಗಿ ಭರವಸೆ ನೀಡಿದ್ದೇವೆ. ಸಭೆಯಲ್ಲಿ ಸಚಿವರಿಗೆ ಪ್ರತಿ ಕ್ಷೇತ್ರದ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.

ಸರ್ಕಾರದ ವಿರುದ್ಧ ವರ್ಗಾವಣೆ ಆರೋಪ ಮಾಡಿದ ಹೆಚ್.ಡಿ ಕುಮಾರಸ್ವಾಮಿ ಗೆ ಟಾಂಗ್ ನೀಡಿದ ಕೆ.ಎನ್ ರಾಜಣ್ಣ, ʼಕುಮಾರಸ್ವಾಮಿ ಅವರ ಅನುಭವವನ್ನು ಹೇಳಿಕೊಂಡಿದ್ದಾರೆ. ಸತ್ಯಹರಿಶ್ಚಂದ್ರ ಹೇಳಿದ ಮೇಲೆ ನಾವು ಹೇಳುವಷ್ಟು ಬುದ್ಧಿವಂತರಲ್ಲ. ಯಾರು ಭ್ರಷ್ಟಾಚಾರ ಬಗ್ಗೆ ಮಾತಾನಾಡುತ್ತಾರೋ ಅವರೇ ಭ್ರಷ್ಟಾಚಾರಿಗಳು ಎಂದು ಕುಟುಕಿದರು.