ಮೈಸೂರು: ದಿನೇ ದಿನೇ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಆನ್‌ಲೈನ್ ಮೂಲಕ ಎಂಎಲ್ ಸಿ ಎಚ್.ವಿಶ್ವನಾಥ್ ಪುತ್ರನ ಖಾತೆಗೆ ವಂಚಕರು ಕನ್ನ ಹಾಕಿದ್ದಾರೆ.
ಎಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿದ್ದಾರೆ. ಅಪರಿಚತನೊಬ್ಬ ವಂಚಿಸಿ 1.99 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದ ಅಮಿತ್ ಅವರ ಖಾತೆಯಿಂದ ದೊಡ್ಡ ಮೊತ್ತದ ಹಣವನ್ನು ಎಗರಿಸಲಾಗಿದೆ.
ಹಣ ಬಾರದ ಹಿನ್ನೆಲೆ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದಾಗ ಈ ವಂಚನೆ ಆಗಿದೆ. ಗೂಗಲ್ ನಲ್ಲಿ ನಂಬರ್ ಹುಡುಕಿ ಕರೆ ಮಾಡಿದ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ವಿವರ ಪಡೆದು ಹಣ ಲಪಟಾಯಿಸಿದ್ದಾನೆ. ಈ ಕುರಿತು ಸೈಬರ್ ಠಾಣೆಗೆ ಅಮಿತ್ ದೇವರಹಟ್ಟಿ ದೂರು ನೀಡಿದ್ದಾರೆ.