ಮನೆ ಜ್ಯೋತಿಷ್ಯ ಈ ರಾಶಿಯವರು ಅತಿ ಹೆಚ್ಚು ಶಾಪಿಂಗ್ ಮಾಡುತ್ತಾರಂತೆ

ಈ ರಾಶಿಯವರು ಅತಿ ಹೆಚ್ಚು ಶಾಪಿಂಗ್ ಮಾಡುತ್ತಾರಂತೆ

0

ಸಾಮಾನ್ಯವಾಗಿ ಕೆಲವರು ಹೆಚ್ಚು ಶಾಪಿಂಗ್ ಮಾಡುತ್ತಾರೆ. ಈ ಶಾಪಿಂಗ್​ನಲ್ಲೇ ಖುಷಿ ಕಂಡು ಕೊಳ್ಳುತ್ತಾರೆ. ಈ ಶಾಪಿಂಗ್​ ಹುಚ್ಚು ಕೆಲವೊಮ್ಮೆ ಅವರ ರಾಶಿಚಕ್ರದ ಪರಿಣಾಮವಾಗಿ ಕೂಡ ಬಂದಿರುತ್ತದೆ. ನಿಮ್ಮ ಸಂಗಾತಿ ರಾಶಿಚಕ್ರದ ಚಿಹ್ನೆಯು ಆ ರಾಶಿಚಕ್ರದ ಚಿಹ್ನೆಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.ಕೆಲವರಿಗೆ ಶಾಪಿಂಗ್​ ಹುಚ್ಚು ಹೇಗಿರುತ್ತದೆ ಎಂದರೆ ಅನಗತ್ಯವಾಗಿ ವಸ್ತುಗಳನ್ನು ಕೊಳ್ಳುತ್ತಲೇ ಇರುತ್ತಾರೆ. ಅವರ ಈ ಶಾಪಿಂಗ್​ ಸಂಗಾತಿಗೆ ಕೆಲವೊಮ್ಮೆ ಕಿರಿಕಿರಿ ಆಗಬಹುದು. ಈ ರೀತಿಯ ಶಾಪಿಂಗ್​ ಹುಚ್ಚಿಗೆ ಇಡೀ ದಿನಗಳೇ ಕಳೆದು ಹೋಗುತ್ತದೆ. ಇದಕ್ಕೆ ಕೆಲವೊಮ್ಮೆ ಮಾನಸಿಕ ಸ್ಥಿತಿ ಜೊತೆಗೆ ಅವರ ರಾಶಿ ಚಕ್ರ ಕೂಡ ಕಾರಣವಾಗಿರುತ್ತದೆ.

ಧನು ರಾಶಿ : ಧನು ರಾಶಿಯವರು ಶಾಪಿಂಗ್ ಬಗ್ಗೆ ಎರಡು ಯೋಚನೆ ಹೊಂದಿರುವುದಿಲ್ಲ. ಹೊಸ ಸ್ಥಳಗಳಿಗೆ ಹೋಗಲು, ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಧನಸ್ಸು ರಾಶಿಯವರಿಗೆ ಮೇಕಪ್, ಬ್ಯಾಗ್ ಮತ್ತು ಶೂಗಳ ಮೇಲೆ ಮೋಹ ಇರುತ್ತದೆ

ಸಿಂಹ ರಾಶಿ: ಇತರರನ್ನು ಮೆಚ್ಚಿಸಲು ಹೆಚ್ಚು ಸ್ಟೈಲಿಶ್ ಆಗಿರಬೇಕು ಎಂದು ಬಯಸುತ್ತಾರೆ ಇವರು. ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಿವೆ. ವಸ್ತುಗಳ ಬೆಲೆಯ ಬಗ್ಗೆ ಚಿಂತಿಸುವುದಿಲ್ಲ. ಉತ್ತಮ ಬ್ರಾಂಡ್, ಡಿಸೈನರ್ ಉತ್ಪನ್ನಗಳನ್ನು ಖರೀದಿಸಲು ಇಷ್ಟಪಡುತ್ತಾರೆ.

ಮಿಥುನ ರಾಶಿ: ಯಾವುದೇ ವಸ್ತು ಪ್ರದರ್ಶನಗಳು, ಕಾರ್ಯಾಗಾರಗಳು, ತರಗತಿಗಳಿಗೆ ಹೋಗಲು ಹೆಚ್ಚು ಖರ್ಚು ಮಾಡುತ್ತಾರೆ. ಹೊಸದಕ್ಕೆ ಹಣ ಖರ್ಚು ಮಾಡಿದರ ಬಗ್ಗೆ ವ್ಯಥೆ ಪಡುವುದಿಲ್ಲ.

ತುಲಾ: ತಮ್ಮನ್ನು ತಾವು ಉತ್ತಮರು ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಹೆಚ್ಚು ಖರ್ಚು ಮಾಡುತ್ತಾರೆ. ತಮ್ಮ ಪಾಲುದಾರರನ್ನು ಖರ್ಚು ಮಾಡುವ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುತ್ತಾರೆ. ತಮ್ಮ ಬಳಿ ಇಲ್ಲದ ವಸ್ತುಗಳನ್ನು ಕೊಳ್ಳಲು ಉತ್ಸಕರಾಗಿರುತ್ತಾರೆ

ವೃಶ್ಚಿಕ: ಇವರಿಗೆ ಆಸೆಗಳು ಹೆಚ್ಚು. ಅವರು ಯಾವುದೇ ವಸ್ತುಗಳನ್ನು ಖರೀದಿಸಿದರೂ ಅವರು ತುಂಬಾ ಖುಷಿ ಪಡುತ್ತಾರೆ. ಅದರಲ್ಲೂ ಆಭರಣಗಳು, ಕಲಾ ಸಾಮಗ್ರಿಗಳು, ಕರಕುಶಲ ವಸ್ತುಗಳು ಇತ್ಯಾದಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ.

ಕುಂಭ ರಾಶಿ: ಶಾಪಿಂಗ್​ ಬಗ್ಗೆ ಹೆಚ್ಚು ಆಕರ್ಷಣೆ ಹೊಂದಿರುತ್ತಾರೆ. ಹೊಸ ವಸ್ತುಗಳ ಬಗ್ಗೆ ಕುತೂಹಲ ಇವರನ್ನು ಕೊಳ್ಳುವಂತೆ ಪ್ರೇರೆಪಿಸುತ್ತದೆ. ತಮ್ಮಗೆ ಅಗತ್ಯ ಎಂದು ಎನಿಸಿದರೆ ಅದನ್ನು ಕೊಳ್ಳಲು ಹಿಂದೆ ಮುಂದೆ ಯೋಚಿಸುವುದಿಲ್ಲ.

ಮೀನ: ಇವರಿಗೆ ಹಣದ ನಿರ್ವಹಣೆ ಗೊತ್ತಿಲ್ಲ. ಪ್ರತಿದಿನ ಶಾಪಿಂಗ್ ಮಾಡಲು ಮತ್ತು ಐಕಾನಿಕ್ ವಸ್ತುಗಳನ್ನು ಖರೀದಿಸಲು ಆಸಕ್ತಿ. ಆದರೆ, ಅವುಗಳನ್ನು ಪೂರ್ಣವಾಗಿ ಬಳಸುವುದಿಲ್ಲ. ಸಾಲಕ್ಕಾಗಿ ಹೆಚ್ಚು ಖರ್ಚು ಮಾಡುವ ಈ ಜನರು ಶಾಪಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದಿಲ್ಲ