ಮನೆ ರಾಜ್ಯ ಸಿಎಂಗೆ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅಸಲಿ: ಸಿ.ಟಿ ರವಿ

ಸಿಎಂಗೆ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅಸಲಿ: ಸಿ.ಟಿ ರವಿ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಜತೆ ಸರಣಿ ಸಭೆ ನಡೆಸುತ್ತಿರುವುದನ್ನು ನೋಡಿದರೆ, ಎಂಎಲ್ ​​ಎಗಳು ಅವರಿಗೆ ಬರೆದಿರುವ ಪತ್ರ ನಕಲಿ ಅಲ್ಲ, ಅಸಲಿ ಎಂಬುದು ತಿಳಿಯುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು ಶಾಸಕರ ಪತ್ರ ನಕಲಿ ಅಂತ ಹೇಳಿದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ಸಿದ್ದರಾಮಯ್ಯ ಸಭೆ ಮಾಡುತ್ತಿದ್ದಾರೆ. ಅದಕ್ಕಿಂತ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಆ ನಂತರ ಒಂದರ ಹಿಂದೆ ಒಂದರಂತೆ ಸಭೆ ನಡೆಸಿದರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುತ್ತದೆ ಶಾಸಕರು ಬರೆದಿರುವ ಪತ್ರ ನಕಲಿ ಅಲ್ಲ ಅಸಲಿ ಎಂಬುದು ಎಂದು ಹೇಳಿದ್ದಾರೆ.

ಈ ರೀತಿಯ ಅಸಮಾಧಾನ ನೋಡಿದರೆ ಲೋಕಸಭೆ ಚುನಾವಣೆ ತನಕ ಈ ಸರ್ಕಾರ ಉಳಿಯಲಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇಶಗಳಲ್ಲಿ ಚೀನಾದ ಪರ ಕೆಲಸ ಮಾಡುವ ವಿಚಾರವಾಗಿ ‘ನ್ಯೂಯಾರ್ಕ್ ಟೈಮ್ಸ್’ನ ತನಿಖಾ ವರದಿ ಆಧರಿಸಿ ಸಮಗ್ರ ತನಿಖೆ ಆಗಬೇಕು. ಹಲವು ವಿಷಯ ಇಟ್ಟುಕೊಂಡು ಅರಾಜಕತೆ ಸೃಷ್ಟಿಸಲು ಷಡ್ಯಂತ್ರ ಹೂಡಲಾಗುತ್ತಿದೆ. ಹಣ ಪಡೆದು ಕೆಲಸ ಮಾಡ್ತಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನೋಡಿದರೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಅವರು ಆಗ್ರಹಿಸಿದರು.

ಗುತ್ತಿಗೆದಾರರು ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಳೆ ಬಿಲ್ ​ಗೆ ಪರ್ಸಂಟೇಜ್ ಜೊತೆಗೆ ಬ್ಲಾಕ್​​ ಮೇಲ್ ಸಹ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಗುತ್ತಿಗೆದಾರರ ಬಿಲ್ ಕ್ಲಿಯರ್ ಮಾಡಲಿ. ಆರೋಪ ಮಾಡಿದರೆ ಧಮ್ಕಿ ಹಾಕುತ್ತಿದ್ದಾರೆ ಅಷ್ಟೇ ಎಂದು ಸಿಟಿ ರವಿ ಆರೋಪಿಸಿದರು.

ಐದು ವರ್ಷಗಳ ಬಿಲ್ ​​​ಗೂ ಪರ್ಸಂಟೇಜ್ ಕೊಡಿ ಎಂದು ಬೇಡಿಕೆ ಇಡುತ್ತಿರುವುದು ಗುತ್ತಿಗೆದಾರರ ನಡುವಿನ ಗುಸು ಗುಸು ಸುದ್ದಿಯಾಗಿದೆ. ಇದನ್ನು ಅಲ್ಲಗೆಳೆಯಲು ಪತ್ರ ನಕಲಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಅದನ್ನು ನಕಲಿ ಎನ್ನಲು ಸಾಧ್ಯವೇ ಎಂದು ರವಿ ಪ್ರಶ್ನಿಸಿದ್ದಾರೆ.