ಮನೆ ಯೋಗಾಸನ ನಿಂತುಕೊಂಡು ಮಾಡುವ ಆಸನಗಳು

ನಿಂತುಕೊಂಡು ಮಾಡುವ ಆಸನಗಳು

0

ತಡಾಸನ : ಸಮಸ್ಥಲ ಸ್ಥಿತಿಯಲ್ಲಿ ಬೆನ್ನನ್ನು ನೇರವಾಗಿ ಕಾಲುಗಳನ್ನು ಸ್ವಲ್ಪ ಅಗಲಿಸಿಟ್ಟುಕೊಂಡು ಅದನ್ನೇ ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತ ಎರಡೂ ಕೈಗಳನ್ನು (ಪರಸ್ಪರ ಬೆರಳುಗಳನ್ನು ಸೇರಿಸಿ ಅಥವಾ ಅಂಗೈಯನ್ನು ಮೇಲ್ಮುಖವಾಗಿ ಹಿಡಿದುಕೊಂಡು) ಹಿಮ್ಮಡಿ ಸಮೇತ ಮೇಲೆತುತ್ತ ಶರೀರದ ಸಮಸ್ತ ಭಾರತ ಭಾರವು ಮುಂಗಾರುಗಳ ಮೇಲಿದ್ದು ಸಮಸ್ತ ಶರೀರವನ್ನು ಮೇಲಕ್ಕೆ ಸೆಳೆಯುವಂತೆ ಕನಿಷ್ಠ ಒಂದು ನಿಮಿಷವಾದರೂ ಇದ್ದು ಕೆಳಕ್ಕೆ ಬರಬೇಕು. ಇದರಿಂದ ನಮ್ಮ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ವಿಶೇಷ ಪ್ರಯೋಜನಗಳು ಲಭಿಸುತ್ತದೆ. (ಮೊದಲು 5,10 ಸೆಕೆಂಡುಗಳಿಂದ ಪ್ರಾರಂಭಿಸಿ ನಿಧಾನವಾಗಿ ಹೆಚ್ಚಿಸುತ್ತಾ ಕೊನೆಗೆ ಒಂದು ನಿಮಿಷದವರೆಗೆ ತಲುಪಬಹುದು)

ಅದನ್ನೇ ಪದಗಳನ್ನು ಜೋಡಿಸಿ ಹಿಮ್ಮಡಿ ಮತ್ತು ಕಾಲ್ ಬೆರಳುಗಳ ಮೇಲೆ ಸಮಭಾರ ಹಾಕಿ ನಿಂತುಕೊಳ್ಳುವುದಕ್ಕೂ ಕೆಲವು ಕೆಲವರು ತಳಾಸನ ಎನ್ನುತ್ತಾರೆ ಇದರಿಂದ ಇಡೀ ಶರೀರದ ಬಂಗಿ ಅಂದರೆ ಪರ್ಸನಾಲಿಟಿ ಅಥವಾ ವ್ಯಕ್ತಿತ್ವ ಸುಧಾರಿಸುತ್ತದೆ ದೇಹದ ಭಾರ ಸಮನಾಗಿ ಹಂಚಿಹೋಗುತ್ತದೆ ಒಂದೇ ಕಾಲಿನ ಮೇಲೆ ಭಾರ ಹಾಕಿದ ಓರೆಯಾಗಿ ನಿಲುವವರಿಗೆ ಆಗಬಹುದಾದ ದೊಡ್ಡ ಪರಿಣಾಮಗಳಾಗುವುದು ತಪ್ಪಿಸಬಹುದು ಎನ್ನುವ ಅಭಿಪ್ರಾಯ ಇದ್ದರೆ ಆದರೆ ಆಗ ಅದು ಕೇವಲ ನಿಂತುಕೊಳ್ಳುವ ಒಂದು ಬಂಗಿ ಆಗುತ್ತದೆ ಅಷ್ಟೇ.

ಪ್ರಯೋಜನಗಳು : ದೇಹವು ಎತ್ತರವಾಗಿ ಬೆಳೆಯಲು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಅತ್ಯುತ್ತಮ ಹಿರಿಯ ನಾಗರಿಕರಿಗೂ ಅಷ್ಟೇ ಎಲ್ಲ ಅಂಗಾಂಗಗಳು ಸಡಿಲವಾಗುತ್ತದೆ ಮತ್ತು ವೃದ್ಧಪ್ಯದದಲ್ಲಿ ಉಂಟಾಗುವ ದೇಹದ ಕುಗ್ಗುವಿಕೆಯನ್ನು ಕೂಡ ಇದು ತಡೆಯುತ್ತದೆ.

ನಟರಾಜನ : ದಡಾಸನದಲ್ಲಿ ನಿಂತುಕೊಂಡು ಬಲ ಭಾಗವನ್ನು ಹಿಂದಕ್ಕೆ ಮಡಿಸಿ ಎಡಗೈಯನ್ನು ಭುಜದ ಮೇಲಿನಿಂದ ಹಿಂದಕ್ಕೆ ಮಡಚಿಕೊಳ್ಳುತ್ತೆ ಎಡಗಾಳಿನ ಹೆಬ್ಬೆರಳುಗಳನ್ನು ಹಿಡಿದುಕೊಳ್ಳಬೇಕು. ಬಲಗೈಯನ್ನು ಎದುರು ಬದಿಗೆ ಮೇಲಕ್ಕೆ ಎತ್ತಬೇಕು ಇದೇ ರೀತಿಯಲ್ಲಿ ಇನ್ನೊಂದು ಬದಿಯಿಂದಲೂ ಮಾಡಬೇಕು.. ಪ್ರಯೋಜನಗಳು :ಕೈಕಾಲುಗಳ ಸ್ನಾಯುಗಳು ಅಭಿವೃದ್ಧಿ ಹೊಂದುತ್ತದೆ ಸ್ನಾಯುಗಳ ಬಲಗೊಳ್ಳುತ್ತದೆ.

ಹಸ್ತಪಾದಾಸನ : ತಡಾಸನದಲ್ಲಿ ನಿಂತುಕೊಂಡು ಪೂರಕ ಮಾಡುತ್ತಾ (ಶ್ವಾಸವನ್ನು ಒಳಗೆಳೆದು ಕೊಳ್ಳುತ್ತ) ಕೈಗಳನ್ನು ಮೇಲೆತ್ತುತ್ತಾ ಮುಂದಕ್ಕೆ ಬಾಗುತ್ತ ತಲೆಯೂ ಮೊಣಕಾಲು ಮಂಡಿಗಳ ಸ್ಪರ್ಧಿಸಬೇಕು ಸರಿಯುತ್ತಾ ಮೀನ ಗಂಡ ಮತ್ತು ಹಿಮ್ಮಡಿಗಳ ಹತ್ತಿರ ತಲುಪಲಿ ನಿಧಾನವಾಗಿ ಉಸಿರು ಬಿಡುತ್ತ ವಾಪಸ್ಸು ನಿಂತುಕೊಳ್ಳಬೇಕು (ಇದಕ್ಕೆ ಪಾದಹಸ್ತಸನ)ಎಂದಲೂ ಕರೆಯುತ್ತಾರೆ.. ಪ್ರಯೋಜನಗಳು : ಎತ್ತರ ಬೆಳೆಯಲು ಸಹಕಾರಿ ವಿಶೇಷವಾಗಿ ಮಕ್ಕಳಿಗೆ ಸೊಂಟ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಉತ್ತಮ.

ತ್ರಿಕೋನಸನ : ಎರಡು ಕಾಲಗಳನ್ನು ಸುಮಾರು ಒಂದರಿಂದ ಒಂದೂವರೆ ಅಡಿ ಅಂತರದಲ್ಲಿರಿಸಿ ನೇರವಾಗಿ ನಿಂತುಕೊಳ್ಳಬೇಕು ಆ ಎರಡು ಕೈಗಳನ್ನು ಪಕ್ಕಕ್ಕೆ ಭುಜಗಳಿಗೆ ಸಮಾನಾಂತರವಾಗಿ ಚಾಚಬೇಕು ಈಗ ಪೂರಕ ಮಾಡುತ್ತಾ ಉಸಿರು ಒಳಗಡೆ ಹತ್ತಿರ ನೆಲಕ್ಕೆ ತಾಕಿಸಿ ಅಥವಾ ಎರಡು ಪಾದವನ್ನು ಹಿಡಿದುಕೊಳ್ಳಿ ಹಾಗೂ ಅದೇ ಸಮಯದಲ್ಲಿ ಬಲಗೈ ಮೇಲಕ್ಕೆ ನೇರವಾಗಿ ಜಾಚರಿ ಸ್ವಲ್ಪ ಸಮಯವಿದ್ದು ಇದೇ ರೀತಿ ಇನ್ನೊಂದು ಕೈಯಿಂದಲೂ ಪುನರಾವರ್ತಿಸಬೇಕು…. ಪ್ರಯೋಜನಗಳು ಸೊಂಟದ ಆರೋಗ್ಯಕ್ಕೆ ತುಂಬಾ ಸಹಕಾರಿ ವಿಶೇಷವಾಗಿ ಕೊಬ್ಬು ಕರಗುತ್ತದೆ, ಪ್ರಷ್ಠಭಾಗದ ಮಾಂಸ ಖಂಡಗಳ ಮೇಲೆ ಒತ್ತಡ ಬೀಳುವುದರಿಂದ ಸೊಂಟದ ಸ್ಥಿತಿ ಸ್ಥಾಪಕತ್ವ ಗುಣ ಸುಧಾರಿಸುತ್ತದೆ ಮತ್ತು ಎದೆಯು ಅಗಲವಾಗುತ್ತದೆ.

ಮುಂದುವರೆಯುತ್ತದೆ….