ಮನೆ ಯೋಗಾಸನ ಬೋರಲು ಮಲಗಿ ಮಾಡುವ ಆಸನಗಳು

ಬೋರಲು ಮಲಗಿ ಮಾಡುವ ಆಸನಗಳು

0

ಮಕರಾಸನ : ಎರಡು ಮೊಣಕೈಗಳನ್ನು ಎದೆಯ ಪಕ್ಕ ನೆಲಕ್ಕೆ ಉರಿ ಎದೆಯನ್ನು ಮೇಲೆತ್ತುತ್ತ, ಅಂಗೈಗಳನ್ನು ಗದ್ದಕ್ಕೆ ಅನಿಸಿಕೊಂಡು, ಉಸಿರನ್ನು ಒಳಗೊಳೆದುಕೊಂಡು ಕಾಲುಗಳನ್ನು ನೆಲಕ್ಕು, ನಿಂತಂಬಕ್ಕೂ ಒಂದರ ನಂತರ ಒಂದರಂತೆ ಒಂದೊಂದಾಗಿ ಹಾಗೆ ಎರಡು ಪದಗಳನ್ನು ಸೇರಿಸಿ ಒಟ್ಟಾಗಿ ಪಡೆದುಕೊಳ್ಳುತ್ತಾ (10-15 ಸಲ) ನಂತರ ಉಸಿರು ಬಿಡುತ್ತ ಕಾಲುಗಳನ್ನು ನೇರಗೊಳಿಸಬೇಕು.

ಪ್ರಯೋಜನಗಳು :ಬೆನ್ನು ಹುರಿಯ ಸಮಸ್ಯೆಗಳಾದ ಸ್ಲಿಪ್ ಡಿಸ್ಕ್, ಸರ್ವೈಕಲ್, ಸಿಯಾಟಿಕ ಗಳಿಗೆ ಪ್ರಯೋಜನಕಾರಿ ಮಂಡಿ ನೋವು, ಅಸ್ತಮಾ ಮತ್ತು ಶ್ವಾಸ ಸಂಬಂಧಿ ವಿಕಾರಗಳು ಗುಣವಾಗುತ್ತದೆ.

ಭುಜಂಗಾಸನ : ಈ ಆಸನದಲ್ಲಿ ಮೂರು ವಿಧ ಹಾಗೆ ಗರ್ಭಿಣಿಯರಿಗೆ ನಿಷಿದ್ಧವಾಗಿದೆ.

 ಭಾಗ-1 : ಎರಡೂ ಅಂಗೈಗಳನ್ನು ಎದೆಯ ಪಕ್ಕ ನೆಲಕ್ಕೆ ಉರಿ ಮೊಣಕೈಗಳು ನೆಲಮಯ ನೆಲ ಬಿಟ್ಟು ಮೇಲೆ ಎದ್ದಿರಬೇಕು ಉಸಿರು ತೆಗೆದುಕೊಳ್ಳುತ್ತ ನಾಬಿ ನೆಲಕ್ಕೆಅಂಟಿರುವಂತೆಯೇ ಎದೆ ಸಹಿತವಾಗಿ ತಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆತ್ತಿ ಕುತ್ತಿಗೆಯನ್ನು ಸಾಧ್ಯವಿದ್ದಷ್ಟು ಹಿಂದಕ್ಕೆಬಾಗಿಸಿ ಈ ಸ್ಥಿತಿಯಲ್ಲಿ ಸಾಧ್ಯವಿದ್ದರೆ (2 ಸಲ)                      ಭಾಗ-2 :  ಇದೆ ಆಸನವನ್ನು ಎದೆ ಮುಂಭಾಗದಲ್ಲಿ ಎಡ ಅಂಗೈಮೇಲೆ ಬಲ ಅಂಗೈಯನ್ನು ಬೋರಲು ಹಾಕಿಕೊಂಡು ಮಾಡುವುದು (2 ಸಲ) 

ಭಾಗ-3 : ಈಗ ಎರಡು ಕೈಗಳನ್ನು ಎದೆ ಪಕ್ಕದಲ್ಲಿರಿಸಿ ಕೈಗಳ ಸಹಿತವಾಗಿ ಎದೆ ಮತ್ತು ತಲೆಗಳನ್ನು ಎತ್ತುವುದು.

ಪ್ರಯೋಜನಗಳು : ಸ್ಲಿಪ್ ಡಿಸ್ಕ್, ಸರ್ವೆಕಲ್, ಸಿಯಾಟಿಕ ಮುಂತಾದ ಮೇರುದಂಡ ಅಥವಾ ಬೆನ್ನುಹುರಿಯ ಸಮಸ್ಯೆಗಳು ಹೆಚ್ಚು ಪ್ರಯೋಜನಕಾರಿ ಬೊಜ್ಜು, ಗರ್ಭಾಶಯ ತೊಂದರೆ, ಮುಟ್ಟಿನ ದೋಷ ,ಬಿಳುಪು ಗೋಗುವುದು ಕೂಡ ನಿವಾರಣೆ ಆಗುತ್ತದೆ.

ಶಲಭಾಸನ : ಶಲಭಾಸನದಲ್ಲಿ ಎರಡು ವಿಧಗಳಿವೆ.

ಎರಡೂ ಕೈಗಳನ್ನು ತೊಡೆಗಳ ಬುಡದಲ್ಲಿ ಅಂಗೈ ಮೇಲೆ ಮಾಡಿ ಇಟ್ಟುಕೊಳ್ಳಿ ಗದ್ದವು ನೆಲಕ್ಕೆ ತಾಗಿರಲಿ ಉಸಿರು ತೆಗೆದುಕೊಳ್ಳುತ್ತಾ ಒಂದು ಕಾಲನ್ನು ಮಡಿಸದೆ ಮೇಲೆತ್ತಿ ಸಾಧ್ಯವಿದ್ದಷ್ಟು ಹೊತ್ತು ಅದೇ ಸ್ಥಿತಿಯಲ್ಲಿದ್ದು ಉಸಿರು ಬಿಡುತ್ತ ಕಾಲು ಕೆಳಗಿಳಿಸಿ ಅದೇ ರೀತಿ ಇನ್ನೊಂದು ಕಾಲಿನಿಂದಲೂ ಮಾಡಬೇಕು (ಎರಡೆರಡು ಸಲ)                                                     ಭಾಗ-2 : ಮೇಲಿನಂತೆಯೇ ಆದರೆ ಎರಡು ಪಾದಗಳನ್ನು ಜೋಡಿಸಿ ಎತ್ತಿಕೊಂಡು ಮಾಡಬೇಕು (2 ಸಲ)

ಪ್ರಯೋಜನಗಳು : ಮೇರುದಂಡದ ಕೆಳಭಾಗದ ಸೊಂಟ ನೋವು, ಸಿಯಾಟಿಕ, ಸರ್ವೈಕಲ್ ಇತ್ಯಾದಿ ಎಲ್ಲಕ್ಕೂ ಅತ್ಯಂತ ಪರಿಣಾಮಕಾರಿಯಾಗಿದೆ.

ಧನುರಾಸನ : ಎರಡು ಕಾಲುಗಳನ್ನು ಮಡಿಚಿ ನಿತಂಭಕ್ಕೆ ತಾಗಿಸಿ ಅದೇ ಸಮಯದಲ್ಲಿ ಕೈಗಳನ್ನು ಹಿಂದಕ್ಕೆ ತಂದು ಹಿಮ್ಮಡಿಗಳ ಮೇಲ್ಭಾಗದ ಕಣ ಕಾಲುಗಳನ್ನು ಹಿಡಿದುಕೊಂಡು ಉಸಿರು ತೆಗೆದುಕೊಳ್ಳುತ್ತಾ ದೇಹದ ಮುಂಭಾಗ ಮತ್ತು ಹಿಂಭಾಗಗಳನ್ನು ಸಾಧ್ಯವಿದ್ದಷ್ಟು ಮೇಲಕ್ಕೆ ಎತ್ತುವುದು ಸ್ವಲ್ಪ ಹೊತ್ತು ತಡೆದು ಉಸಿರು ಬಿಡುತ್ತ ಮೊದಲಿಗೆ ಬರುವುದು (2ಸಲ)

 ಪ್ರಯೋಜನಗಳು : ಮೂತ್ರ ವಿಕಾರಗಳು ದೂರ, ಮಹಿಳೆಯರ ಮಾಸಿಕ ಸಂಬಂಧಿಸಿದ ಸಮಸ್ಯೆಗಳು ದೂರ, ನಾಭಿ (ಬಟ್ಟಿ) ಸರಿಯುವುದು ಅಥವಾ ಜಾರುವುದು ದೂರ, ಥೈರಾಯ್ಡ್, ದೃಷ್ಟಿ ಪರಿಹಾರ ಸೊಂಟ ನೋವು ,ಸಿಯಾಟಿಕ ,ಸರ್ವೆಕಲ್, ಬೆನ್ನುಹುರಿಯ ಎಲ್ಲ ರೋಗಗಳಿಗೆ ಪರಿಣಾಮಕಾರಿ.

ವಿಪರೀತನೌಕಾಸನ (ನಾಭಿ ಆಸನ) : (ಇದು ಸ್ತ್ರೀಯರಿಗೆ ನಿಷಿದ್ಧ) ಬೋರಲು ಮಲಗಿ, ಎರಡು ಕೈಗಳನ್ನು ನೇರವಾಗಿ ಜೋಡಿಸಿ, ಮುಂದಕ್ಕೆ ಚಾಚಿ ಕಾಲೂಗಳನ್ನು ಕೂಡ ನೇರವಾಗಿ ಹಿಂದಕ್ಕೆ ಜೋಡಿಸಿರಲಿ ಉಸಿರನ್ನು ಒಳಗೆ ಎಳೆದುಕೊಳ್ಳುತ್ತ, ಎರಡು ಕಡೆಗಳಿಂದ ಅಂದರೆ, ಕೈಕಾಲುಗಳನ್ನು ಮಾಡಿಚದೆ ಸಾಧ್ಯವಾದಷ್ಟು ಮೇಲೆತ್ತಬೇಕು.

ಪ್ರಯೋಜನಗಳು : ನಾಭಿಪ್ರದೇಶಕ್ಕೆ ಶಕ್ತಿ, ಗ್ಯಾಸ್ ಹೊರಬೀಳುವುದು, ಯವ್ವನ ರೋಗ ಮತ್ತು ಲೈಂಗಿಕ ದೌರ್ಬಲ್ಯದೂರ, ಮೇರು ದಂಡದ ಸಮಸ್ತ ಸಮಸ್ಯೆಗಳಿಗೆ ಪರಿಹಾರ. ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುವುದು.