ಹುಣಸೂರು: ನಗರಸಭೆ ಪೌರಾಯುಕ್ತರಾಗಿ ಎಂ.ಮಾನಸ ಅಧಿಕಾರ ಸ್ವೀಕರಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ಸ್ವ ಕ್ಷೇತ್ರದ ಕಾರಣಕ್ಕೆ ಇಲ್ಲಿಂದ ವರ್ಗಾವಣೆಗೊಂಡಿದ್ದ ಮುಖ್ಯಾಧಿಕಾರಿ-1 ಶ್ರೇಣಿಯ ಎಂ.ಮಾನಸರನ್ನು ಮತ್ತೆ ಹುಣಸೂರು ನಗರಸಭೆ ಪೌರಾಯುಕ್ತರನ್ನಾಗಿ ವರದಿ ಮಾಡಿಕೊಳ್ಳಲು ಆದೇಶಿಸಿದೆ.
ಇಲ್ಲಿ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಜಯ್ ರನ್ನು ಸ್ಥಳ ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ರವರು ಆದೇಶಿಸಿದ್ದಾರೆ.
Saval TV on YouTube