ಮನೆ ರಾಜ್ಯ ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ದರೋಡೆ ನಡೆಯುತ್ತಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ರಾಮನಗರ ಎಸ್ ಪಿ...

ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ದರೋಡೆ ನಡೆಯುತ್ತಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ರಾಮನಗರ ಎಸ್ ಪಿ ಮನವಿ

0

ರಾಮನಗರ: ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ರಾತ್ರಿ ಹೊತ್ತು ವಾಹನಗಳನ್ನು ಅಡ್ಡ ಹಾಕಿ ದರೋಡೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿರುವ ವಿಚಾರಕ್ಕೆ  ಕುರಿತು ಪ್ರತಿಕ್ರಿಯಿಸಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಈ ವಿಚಾರ ಶುದ್ಧ ಸುಳ್ಳು ಇಲ್ಲಿ ಯಾವುದೇ ದರೋಡೆ ಪ್ರಕರಣ ನಡೆದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿದ ಅವರು, ಬೆಂಗಳೂರು ಮೈಸೂರು ಎಕ್ಸ್‌ ಪ್ರೆಸ್‌ ವೇನಲ್ಲಿ ರಾತ್ರಿ ಹೊತ್ತು ವಾಹನಗಳನ್ನು ತಡೆದು ದರೋಡೆ ನಡೆಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ ಪ್ರೆಸ್‌ ವೇ ದರೋಡೆಕೋರರ ಹಾವಳಿ ಎಂದು ಪೋಸ್ಟ್ ಮಾಡಲಾಗಿತ್ತು. ಇದು ಸತ್ಯಕ್ಕೆ ದೂರವಾದ ವಿಚಾರ ಇಲ್ಲಿ ಒಂದು ಘಟನೆ ನಡೆದಿದ್ದು, ಬಿಟ್ಟರೆ ಬೇರೆ ಯಾವುದೇ ಪ್ರಕರಣ ನಡೆದಿಲ್ಲ ಹಾಗಾಗಿ ಯಾರು ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಜಾಲತಾಣದಲ್ಲಿ ಹಾಕಿರುವ ಸುಳ್ಳು ಸುದ್ದಿ‌ ಅಲ್ಲದೆ ಈ ಪೋಟೋದಲ್ಲಿರುವ ರಸ್ತೆ ಭಾರತಕ್ಕೆ ಸಂಬಂಧಿಸಿದ್ದಲ್ಲ. ಇದು ಹೊರ ದೇಶಕ್ಕೆ ಸಂಬಂಧಿಸಿದ ಪೋಸ್ಟ್ ಆಗಿದೆ. ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ಯಾವುದೇ ದರೋಡೆಗಳು ಆಗುತ್ತಿಲ್ಲ. ಅಲ್ಲದೆ ಹೈವೇ ಪ್ಯಾಟ್ರೋಲ್ ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುತ್ತಿದೆ. ಈ ಹಿಂದೆ ಆಗಿದ್ದ ದರೋಡೆಗಳ ಪ್ರಕರಣಕ್ಕೆ‌ ಸಂಬಂಧಿಸಿದ ಆರೋಪಿಗಳನ್ನ ಈಗಾಗಲೇ ಬಂಧಿಸಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವುದು ಸುಳ್ಳು ಸುದ್ದಿ ಇದಕ್ಕೆ ಯಾರು ಕಿವಿಗೊಡಬೇಡಿ ಎಂದು ಹೇಳಿದ್ದಾರೆ.