ಪಾಂಡವಪುರ:ತಾಲೂಕಿನ ಕಡಬ ಸಮೀಪದ ದೇವೇಗೌಡನಕೊಪ್ಪಲು ಗ್ರಾಮದ ಬಳಿ ಮೂರು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಸೆರೆಯಾಗಿದೆ.
ಗ್ರಾಮದ ಸುತ್ತಮುತ್ತಲೂ ಸಂಚರಿಸುತ್ತಿದ್ದ ಚಿರತೆ ಹಸು, ಕುರಿ, ಕೋಳಿ, ಮೇಕೆ ಹಾಗೂ ನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿತ್ತು.ಈ ಹಿನ್ನೆಲೆಯಲ್ಲಿ ರೈತರು ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಚಿರತೆ ಸೆರೆ ಹಿಡಿದು ಅದರ ಕಾಟ ತಪ್ಪಿಸುವಂತೆ ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿ ಒತ್ತಡ ಹಾಕಿದ್ದರು. ಚಿರತೆ ಚಲನ ವಲನ ಆಧರಿಸಿ ಬೋನಿನಲ್ಲಿ ನಾಯಿ ಕಟ್ಟಿಹಾಕಿ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ, ವಲಯ ಉಪರಣ್ಯಾಧಿಕಾರಿ ಶಿವಸಿದ್ದು, ಲವಕುಮಾರ್, ಧನಂಜಯ, ಕುಮಾರ್, ಮಹದೇವು,ಡ್ರೈವರ್ ಮಂಜು ಇತರರು ಇದ್ದರು.














