ಮನೆ ಆರೋಗ್ಯ ತಾಯಿಯ ಹಾಲು- ಎಂಬ ಅಮೃತ

ತಾಯಿಯ ಹಾಲು- ಎಂಬ ಅಮೃತ

0

ತಾಯಿಯ ಹಾಲು ಅಮೃತಕ್ಕೆ ಸಮನಎನ್ನುತ್ತಾರೆ. ಅಮೃತವಷ್ಟೇ ಅಲ್ಲ ಅದಕ್ಕಿಂತ ಮಿಗಿಲು ಮಗು ಹುಟ್ಟಿದ 4-6 ತಿಂಗಳವರೆಗೆ ತಾಯಿಯ ಹಾಲನೆ ಕೊಡಬೇಕು 4-6 ತಿಂಗಳ ನಂತರ ತಾಯಿ ಹಾಲಿನ ಜೊತೆಗೆ ಸ್ವಲ್ಪ ಘನಹಾರವನ್ನು ಕೊಡಬಹುದು ಇತರೆ ಆಹಾರ ಕೊಡುತ್ತಿದ್ದೇವೆ ಎಂದು ಮಗು ಸೇವಿಸುತ್ತಿದ್ದೇನೆ ಎಂದು ತಾಯಿ ಹಾಲನ್ನು ಬಿಡಿಸಬಾರದು ತಾಯಿಯ ಹಾಲನ್ನು ಕನಿಷ್ಠ ಎರಡು ವರ್ಷದವರೆಗೆ ಕೊಡಬೇಕು ಆನಂತರ ಕೂಡ ಕೊಡಬಹುದು ತಾಯಿಯ ಹಾಲನ್ನು ಕೆಲವು ತಿಂಗಳು ಮಾತ್ರ ಕೊಡಬೇಕೆಂಬ ನಿಯಮವೇನು ಇಲ್ಲ. ಕೆಲವು ಮಕ್ಕಳು 3-4 ವರ್ಷಗಳವರೆಗೆ ತಾಯಿಯಾ ಹಾಲನ್ನು ಕುಡಿಯುತ್ತದೆ. ಆದ್ದರಿಂದ ತಾಯಿ ಮಗುವಿನ ಅನುಬಂಧ ಮತ್ತಷ್ಟು ಬಲಿಷ್ಠವಾಗುತ್ತದೆ ಹೊರತು ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ತಾಯಿಯ ಹಾಲಿನಿಂದ ಆರೋಗ್ಯಕರವಾದ ಬೆಳವಣಿಗೆ :

ತಾಯಿ ಹಾಲು ಕುಡಿಯುವ ಮಗುವಿಗೆ ಬೆಳವಣಿಗೆ ಬಹಳ ಗಣನೀಯವಾಗಿರುತ್ತದೆ ಇಂತಹ ಮಕ್ಕಳಿಗೆ ರೋಗಗಳು ಬರುವುದು ಅಪರೂಪ ಪೌಷ್ಟಿಕಾಂಶಗಳ ಕೊರತೆ ಇರುವುದಿಲ್ಲ.  ತಾಯಿ ಹಾಲು ಕುಡಿಯುವ ಮಕ್ಕಳು ಮರಣದ ಸಂಖ್ಯೆ ಕೂಡ ಕಡಿಮೆ. ತಾಯಿಯ ಹಾಲು ಕುಡಿಯುವ ಮಕ್ಕಳಿಗೆ ರೋಗ ಬರುವ ಸಂಭವ ೧೪ ಪಟ್ಟು ಹೆಚ್ಚು ನೀರು ನೀರಾಗಿ ಭೇದಿಯಾಗುವ 3-4 ಪಟ್ಟು ಹೆಚ್ಚು ಶ್ವಾಸಕೋಶದ ರೋಗಗಳು ಬರುವುದು 2-3 ಪಟ್ಟು ಹೆಚ್ಚು ಇದರ ಹಿನ್ನೆಲೆಯಲ್ಲಿ ನೋಡಿದರೆ ತಾಯಿಯ ಹಾಲಿನ ಶ್ರೇಷ್ಠತೆ ಅರ್ಥವಾಗುತ್ತದೆ.

 ತಾಯಿ ಆರೋಗ್ಯ ಕೆಟ್ಟಿದ್ದರು ಕೂಡ ಎಂದಿನಂತೆ ಹಾಲು ಕೊಡಬಹುದು, ತಾಯಿ ಗರ್ಭ ಧರಿಸಿದ್ದರು ಕೂಡ ಮಗುವಿಗೆ ಮೊಲೆ ಉಣಿಸಬಹುದು.

ತಾಯಿಯ ಹಾಲಿನಲ್ಲಿ ಅಧಿಕ ಪೋಷಕಾಂಶಗಳು :

ತಾಯಿಯ ಹಾಲಿನಲ್ಲಿ ಮಗುವಿಗೆ ಅಗತ್ಯವಿರುವ ಪ್ರೋಟೀನ್ ಗಳು ಕೊಬ್ಬಿನ ಪದಾರ್ಥಗಳು ಸೂಕ್ತವಾದ ಪ್ರಮಾಣದಲ್ಲಿಇರುತ್ತದೆ. ಲಾಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಮಗುವಿಗೆ ಬೆಳವಣಿಗೆಗೆ ಬಹು ಅಗತ್ಯ. ವಿಟಮಿನ್ ಗಳು, ಖನಿಜ ಲವಣಗಳು, ಎಂ ಜೈಮ್ ಗಳು ಅಗತ್ಯ ಪ್ರಮಾಣದಲ್ಲಿ ಇರುತ್ತದೆ. ತಾಯಿಯ ಹಾಲಿನಲ್ಲಿ ಯಾವುದೇ ರೋಗಾಣುಗಳಿರುವುದಿಲ್ಲ. ಬದಲಿಗೆ ರೋಗನಿರೋಧಕ ಶಕ್ತಿ ಇರುತ್ತದೆ. ಇಂತಹ ರೋಗ ನಿರೋಧಕಗಳಲ್ಲಿ ಲ್ಯೂಕೋಸೈಟ್, ಇಮ್ಮುನೋ ಗ್ಲೋಬ್ಯಿಲಿನ್ಸ್, ಬೈಫಿಡಸ್,  ಫ್ಯಾಕ್ಟರ್ಸ್ ಸಂಪೂರ್ಣವಾಗಿರುತ್ತದೆ. ಬೈಫಿಡಸ್ ಫ್ಯಾಕ್ಟರ್ಸ್ ಮಗುವಿನ ಕರುಳುಗಳಲ್ಲಿ ಲ್ಯಾಪ್ಟೋ ಬಾಸಿಲಸ್ ಬೆಳವಣಿಗೆಗೆ ಸಹಕರಿಸುತ್ತದೆ. ಲ್ಯಾಪ್ಟೋಬಾಸಿಲಸ್  ಕರುಳುಗಳಲ್ಲಿ ಹಾನಿ ಉಂಟು ಮಾಡುವ ಬ್ಯಾಕ್ಟೀರಿಯಗಳನ್ನು ನಾಶ ಮಾಡುತ್ತದೆ.

ಸ್ತನ್ಯಪಾನದಿಂದ ತಾಯಿಗೂ ಕ್ಷೇಮ :

ಮಗುಗೆ ಹಾಲು ಕೊಡುವ ತಾಯಿ ಹೆರಿಗೆಯಾದ 4-6 ತಿಂಗಳ ಒಳಗೆ ಗರ್ಭ ಧರಿಸುವ ಸಂಭವವಿರುವುದಿ.ಲ್ಲ ಹೀಗಾಗಿ 4-6 ತಿಂಗಳವರೆಗೆ ಸಹಜವಾಗಿ ಗರ್ಭ ನಿರೋಧಕತೆ ಇರುತ್ತದೆ. ಹೆರಿಗೆಯಾದ ಅರ್ಧಗಂಟೆ ಒಳಗೆ ಮಗುವಿಗೆ ಮೊಲೆ ಹಿಡಿಸಬೇಕು. ನವಜಾತ ಶಿಶು ಮೊಲೆಯ ತೊಟ್ಟುಗಳನ್ನು ಚೀಪುವುದರ ಕ್ರಿಯೆಯಿಂದ ಗರ್ಭಾಶಯ ಶೀಘ್ರವಾಗಿ ಸಂಕುಚಿತಗೊಂಡು ಹೆರಿಗೆ ನಂತರ ಈ ಪರಿಸರಾಗದಂತೆ ತಡೆಯುತ್ತದೆ ಮಗುವಿಗೆ ಹಾಲು ಕೊಡುವ ತಾಯಂದಿರಿಗೆ ಎದೆಯ ಕ್ಯಾನ್ಸರ್, ಓವೇರಿಯನ್ ಕ್ಯಾನ್ಸರ್, ಬರುವುದು ಅಪರೂಪ. ಹಾಲು ಕೊಡುವುದರಿಂದ ತಾಯಿಯ ಸೌಂದರ್ಯ ಹಾಳಾಗುತ್ತವೆ ಎಂಬುದು ಶುದ್ಧ ಸುಳ್ಳು ಮಗುವಿಗೆ ಹಾಲು ಕೊಡುವುದರಿಂದ ಸಹಜ ಸೌಂದರ್ಯ ಮತ್ತಷ್ಟು ಆಕರ್ಷಕವಾಗುತ್ತದೆ.

ತಾಯಿ ಹಾಲು ಹಸುವಿನ ಹಾಲು :

ಹಲವು ತಾಯಂದಿರು ಮಗುವಿಗೆ ಹಸುವಿನ ಹಾಲು ಕುಡಿಸುತ್ತಾರೆ. ಹಸುವಿನ ಹಾಲು ಕುಡಿಯುವುದರಿಂದ ಅಜೀರ್ಣ ಉಂಟಾಗುತ್ತದೆ ಸದಾ ವಾಂತಿಯಾಗುತ್ತಿರುತ್ತದೆ ಅಲರ್ಜಿಗಳು ತೊಂದರೆಗಳು ಆರಂಭವಾಗುತ್ತದೆ ಹಸುವಿನ ಹಾಲು ಕುಡಿಸುವುದರಿಂದ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್, ಕೊಬ್ಬು, ವಿಟಮಿನ್ ಗಳು, ಖನಿಜಗಳು, ಲಭ್ಯವಾಗದೆ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ.. ಹಸುವಿನ ಹಾಲು ಕುಡಿಯುವ ಮಕ್ಕಳಿಗೆ ಸದಾ ಭೇದಿಯಾಗುತ್ತದೆ ಇದಕ್ಕೆ ಕಾರಣ ಹಾಲು ಕುಡಿಸುವ ಬಾಟಲಿ ಇಲ್ಲವೇ, ಲೋಟಗಳಲ್ಲಿ ಸರಿಯಾದ ಶುದ್ಧೀಕರಿಸದೆ ಇರುವುದು ಆಗಿರುತ್ತದೆ. ಹಸುವಿನ ಹಾಲು ಕುಡಿಸುವುದರಲ್ಲಿ ಯಾವುದೇ ನಿರ್ಲಕ್ಷವಾದರೂ ಸ್ವಲ್ಪ ಸಮಯದಲ್ಲೇ ಹಾಲಿನ ಬ್ಯಾಕ್ಟೀರಿಯ ಬೆಳವಣಿಗೆಯಾಗಿ ಹಾನಿಉಂಟು ಮಾಡುತ್ತದೆ. ಯಾವ ರೀತಿಯಿಂದ ನೋಡಿದರೂ ಹಸುವಿನ ಹಾಲು ಸೂಕ್ತವಲ್ಲ.

ತಾಯಿ ಹಾಲಿನ ಉತ್ಪಾದನೆ :

ಹೆರಿಗೆಯಾದ ಸ್ವಲ್ಪ ಹೊತ್ತಿಗೆ ಮಗುವಿಗೆ ತಾಯಿಯ ಮೊಲೆ ಹಿಡಿಸಬೇಕು. ಮಗುವಿಗೆ ತುಟಿಗಳು ತಾಯಿಯ ಮೇಲೆ ತೊಟ್ಟುಗಳನ್ನು ಸ್ಪರ್ಶಿಸುವುದರಿಂದ ಸೆನ್ಸರಿ ಸ್ಟಿಮ್ಯೂಲಸ್ ಮೊಲೆ ತೊಟ್ಟುಗಳಿಂದ ಪಿಟ್ಯುಟರಿ ಗ್ರಂಥಗಳಿಗೆ ಸಂಪರ್ಕ ಉಂಟಾಗಿ ಪ್ರೊಡಕ್ಟಿವ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹಾಗೆ ಬಿಡುಗಡೆಯಾದ ಪ್ರಾಡಕ್ಟಿವ್ ಹಾರ್ಮೋನ್ ಮೊಲೆಗಳಲ್ಲಿನ ಹಾಲಿನ ಗ್ರಂಥಿಗಳನ್ನು ಉತ್ತೇಜಿಸುತ್ತದೆ ಈ ರೀತಿಯಾದ ಪ್ರಾಡಕ್ಟಿವ್ ಹಾರ್ಮೋನ್ ಗಳ ಮೂಲಕ ಮೊಲೆಗಳಲ್ಲಿನ ಹಾರ್ಮೋನ್ ಗಳು ಉತ್ತೇಜಿಸಲ್ಪಡುವುದನ್ನು “ಪ್ರೊಲಾಕ್ಟಿವ್ ರೆಫ್ಲೆಕ್ಸ್” ಎನ್ನುತ್ತಾರೆ.

ಮಗುವಿನ ತುಟಿಗಳು ತೊಟ್ಟುಗಳನ್ನು ಚೀಪಿದಾಗ ಆಕ್ಸಿಟೋಸಿನ್ ಪ್ರತಿಕ್ರಿಯೆ ಕೂಡ ಉಂಟಾಗುತ್ತದೆ. ಹಾರ್ಮೋನುಗಳು ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ ಹೀಗೆ ಬಿಡುಗಡೆಯಾದ ಆಕ್ಸಿಟೋಸಿನ್ ಮೊಲೆಗಳಲ್ಲಿನ ಹಾಲು ಗ್ರಂಥಿಗಳ ಸುತ್ತಲೂ ಇರುವ ಸೂಕ್ಷ್ಮ ಸ್ನಾಯುಗಳನ್ನು ಪ್ರಚೋದಿಸುತ್ತದೆ ಹೀಗೆ ಪ್ರಚೋದನೆ ಒಳಗಾದ ಸ್ನಾಯುಗಳು ಸಂಕುಚಿತಗೊಂಡು ದುಗ್ಧ ಗ್ರಂಥಿಗಳಲ್ಲಿರುವ ಹಾಲು ಹೊರಕಲ್ಪಡುತ್ತದೆ. ಈ ರೀತಿಯಾಗಿ ತಾಯಿಯಿಂದ ಮಗುವಿಗೆ ಬಾಯಿಗೆ ಹಾಲು ರವಾನೆ ಆಗುತ್ತದೆ. ಒಂದು ಮಗುವಿಗೆ ಅಲ್ಲದೆ ಎರಡು ಮಕ್ಕಳಿಗಾಗುವಷ್ಟು ಹಾಲು ಕೊಡುವ ಸಾಮರ್ಥ್ಯ ತಾಯಿ ಇರುತ್ತದೆ ಅಷ್ಟು ಪ್ರಮಾಣದಲ್ಲಿ ತಾಯಿಯ ಹಾಲು ಉತ್ಪಾದನೆ ಆಗುತ್ತದೆ.

ಮೊದಲ ಹಾಲು ಶ್ರೇಷ್ಠವಾದದ್ದು :

ಮಗು ಹುಟ್ಟಿದ ಒಂದೆರಡು ದಿನಗಳವರೆಗೆ ಸಾಕಷ್ಟು ಪ್ರಮಾಣದಲ್ಲಿ ಹಾಲು ಬಿಡುಗಡೆಯಾಗುವುದಿಲ್ಲ ಕೊಲೆಸ್ಟ್ರಮ್ ಮತ್ತು ಒಂದಷ್ಟು ದ್ರವ ಪದಾರ್ಥ ಮಾತ್ರವೇ ಮೊಲೆಗಳಿಂದ ಬಿಡುಗಡೆಯಾಗುತ್ತದೆ .ಈ ದ್ರವವನ್ನು ಗಿಣ್ಣಲು ಎನ್ನುತ್ತಾರೆ. ಈ ಗಿಣ್ಣಲು ಮಗುವಿನ ಭವಿಷ್ಯಕ್ಕೆ ಬಹು ಅಗತ್ಯ ಹಲವು ತಾಯಂದಿರು ತಮ್ಮ ಬಳಿ ಸಾಕಷ್ಟ್ ಹಾಲಿನವೆಂದು ಮಗು ಹುಟ್ಟಿದಾಗ ಮೊದಲು ಎರಡು ದಿನ ಹಸುವಿನ ಹಾಲು, ಸಕ್ಕರೆ ನೀರು, ಜೇನು ಮಿಶ್ರಿತ ನೀರನ್ನು ಕುಡಿಸುತ್ತಾರೆ. ಇದು ಅಗತ್ಯವೇನು ಇಲ್ಲ ಇದರಿಂದ ಅನಾನುಕೂಲವೇ ಸಂಭಾವನೆ ಹೆಚ್ಚು ಮಗು ತಾಯಿಯ ಮೊಲೆ ಹಿಡಿಯುವುದನ್ನು ಬಿಟ್ಟು ಇವುಗಳ ಕಡೆಗೆ ಆಸಕ್ತಿ ತೋರಿಸಬಹುದು. ಇದರಿಂದ ಮೊಲೆ ತೊಟ್ಟುಗಳಿಗೆ ಸಾಕಷ್ಟು ಪ್ರಚೋದನೆ ಇಲ್ಲದೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ ತಾಯಿಯ ಹಾಲು ಪ್ರಚೋದನೆಗಿಂತ ಮಾತ್ರ ಉತ್ಪತ್ತಿಯಾಗುತ್ತದೆ ಎಂಬುದನ್ನು ಮರೆಯಬಾರದು.

ಸಹಜವಾದ ಹೆರಿಗೆ ಆದರೆ ಅರ್ಧ ಗಂಟೆಯಲ್ಲಿ ಮಗುವಿನ ತಾಯಿಯ ಮೊಲೆ ಹಿಡಿಸಬೇಕು ಸಿಜರಿಯನ್ ಹೆರಿಗೆಯಾಗಿದ್ದರೆ ನಾಲ್ಕು ಗಂಟೆ ಒಳಗಾಗಿ ತಾಯಿಯ ಮೊಲೆ ಹಿಡಿಸಬೇಕು.

ಮಗುವಿಗೆ ಹಾಲು ಕೊಡುವ ಕ್ರಮ :

ಮಗುವಿಗೆ ಹಾಲನ್ನು ಕುಳಿತುಕೊಂಡಾದರೂ ಕೊಡಬಹುದು, ಮಲಗಿಯಾದರೂ ಕೊಡಬಹುದು. ಮಗುವಿಗೆ ಕ್ರಮವಾಗಿ ಹೇಗೆ ಮೊಲೆ ಹಿಡಿಸಬೇಕೆಂಬುದು ತಾಯಿಗೆ ತಿಳಿದಿರಬೇಕು ಮಗುವಿಗೆ ಬಾಯನ್ನು ನೇರವಾಗಿ ಮೊಳೆ ತೊಟ್ಟುಗಳನ್ನು ಹತ್ತಿರ ಇಳಿಯುತ ಹಿಡಿಯುವುದಕ್ಕಿಂತಲೂ ಮಗುವಿನ ಬಾಯನ್ನು ತಾಯಿಯ ಎದೆಗೆ ಹಿಡಿಯಬೇಕು ಮಗು ತನ್ನ ಮೃದುವಾದ ಕೆನ್ನೆಗಳಿಂದ ಮೊಲೆಗಳನ್ನು ಉಜ್ಜುತ್ತಾ ಮೊಲೆತೊಟ್ಟಿಗಾಗಿ ಹುಡುಕುವ  ಕ್ರಿಯೆ ಹಾಲಿನ  ಉತ್ಪತ್ತಿಗೆ ಬಹು ಅಗತ್ಯ… ಮಗು ಕೆನ್ನೆಗಳನ್ನು ಮೊಲೆಗಳಿಗಾಗಿ ಉಜ್ಜುತ್ತಾ ನಂತರ ತನ್ನ ಎಳೆಯ ತುಟಿಗಳಿಂದ ಮೊಲೆ ತೊಟ್ಟು ಹಿಡಿಯುವುದಕ್ಕೆ “ರೂಟಿಂಗ್ ರಿಫ್ಲೆಕ್ಸ್” ಎನ್ನುತ್ತಾರೆ. ಮೊಲೆ ತೊಟ್ಟುಗಳನ್ನು ಹಿಡಿದ ನಂತರ ಮಗು ಅವುಗಳನ್ನು ತನ್ನಷ್ಟಕ್ಕದೇ ಚಪ್ಪರಿಸುತ್ತದೆ. ಇದರಿಂದಾಗಿ ತಾಯಿಯ ಮೊಲೆಯಿಂದ ಮಗುವಿಗೆ ಬಾಯಿಗೆ ಹಾಲು ಹರಿಯುತ್ತದೆ. ಇದನ್ನು “ಸಕ್ಕಿಂಗ್ ರಿಫ್ಲೆಕ್ಸ್” ಎನ್ನುತ್ತಾರೆ. ಮಗುವಿನ ಬಾಯಿಗೆ ಹಾಲು ಬಂದಾಗ ಅದು ಸಂತೃಪ್ತಿಂದ ನುಂಗುತ್ತದೆ. ಈ ರೀತಿಯಾಗಿ ತಾಯಿ ಹಾಲು “ಸ್ವಲೋಯಿಂಗ್ ರಿಫ್ಲೆಕ್ಸ್” ಗೆ ಸಹಕರಿಸುತ್ತದೆ.

ತಾಯಿ ಕುಳಿತುಕೊಂಡು ಹಾಲು ಕುಡಿಸುವುದಾದರೆ ತನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳಬೇಕು ಒಂದು ಕೈ ಮಗುವಿನ ಆಧಾರವಾಗಿಟ್ಟುಕೊಂಡು ಮತ್ತೊಂದು ಕೈಯನ್ನು ತಲೆಗೆ ಆಧಾರವಾಗಿ ಕೊಡಬೇಕು. ಮಗುವಿನ ತಲೆಗೆ ಆಧಾರ ಕೊಡುವುದರ ಮೂಲಕ ಮಗುವಿನ ಕೆನ್ನೆಗಳು ಮೊಲೆಗಳಿಗೆ ತಾಕುವಂತೆ ನೋಡಿಕೊಳ್ಳಬೇಕು. ಆನಂತರ ನಿಧಾನವಾಗಿ ತೊಟ್ಟುಗಳ ಕಡೆಗೆ ಮಗುವಿನ ಬಾಯಿ ಹೋಗುವಂತೆ ಸಹಕರಿಸಬೇಕು. ಮಗುವಿನ ತಲೆಯನ್ನು ಬಿಗಿಯಾಗಿ ಒತ್ತಿ ಹಿಡಿಯಬಾರದು. ಮಗು ತಲೆಯನ್ನು ಅತ್ಯುತ್ತ ಸುಲಭವಾಗಿ ತಿರುಗಿಸುವಂತಿರಬೇಕು.

ಪ್ರತಿ ಬಾರಿಯೂ ಎರಡು ಸ್ಥಾನದಿಂದ ಹಾಲು ಕುಡಿಸಬೇಕು :

ಮಗುವಿಗೆ ಇಂತಿಷ್ಟೇ ಸಮಯಕ್ಕೆ ಹಾಲು ಕುಡಿಸಬೇಕೆಂದಾಗಲಿ, ದಿನಕ್ಕೆ ಇಷ್ಟೇ ಸಾರಿ ಹಾಲು ಕುಡಿಸಬೇಕೆಂದಾಗಲಿ ನಿಯಮ ಇಲ್ಲ. ಮಗು ಹಾಲಿಗಾಗಿ ಅತ್ತಾಗಲೆಲ್ಲ ಹಾಲು ಕುಡಿಸಬಹುದು. ಸಾಮಾನ್ಯವಾಗಿ ಮಗು ಹುಟ್ಟಿದ ಎರಡು ವಾರಗಳವರೆಗೆ ಹೆಚ್ಚು ಬಾರಿ ಹಾಲು ಕುಡಿಯುತ್ತದೆ ರಾತ್ರಿ ಬೆಳೆಯಲು ಕೂಡ ಮಗುವಿಗೆ ಹಾಲು ಕುಡಿಸುತ್ತಿರಬೇಕು.

ಬಾಣಂತಿ ಮೊಲೆಯ ಗೆಡ್ಡೆಗಳು :

ಹೆರಿಗೆಯಾದ ನಂತರ ಕೆಲವು ತಾಯಂದಿರ ಮೊಲೆಗಳು ಗಟ್ಟಿಯಾಗಿ ಗಡ್ಡೆ ಕಟ್ಟಿದಂತಾಗುತ್ತದೆ. ಮಗುವಿನ ಹಾಲು ಕೂಡ ಸಾಕಷ್ಟು ಲಭ್ಯವಾಗುವುದಿಲ್ಲ. ಇದಕ್ಕೆ ಕಾರಣ ಹಾಲಿನ ನಾಳಗಳಿಂದ ಹಾಲು ಹೆಪ್ಪುಗಟ್ಟಿ ಸುಗಮವಾಗಿ ಹಾಲು ಪ್ರವಹಿಸಲು ಅಡ್ಡಿಯಾಗಿರುತ್ತದೆ. ಹೆರಿಗೆಯ ನಂತರ ಕೂಡ ಹೀಗೆ ಮಾಡಬೇಕು ಹೀಗೆ ಮಾಡುವುದರಿಂದ ಹಾಲಿ ನಾಳಗಳಲ್ಲಿ ಹಾಲು ಸರಾಗವಾಗಿ ಹರಿದು ಮಗುಗೆ ಲಭ್ಯವಾಗುತ್ತದೆ.

ಕೆಲವು ತಾಯಂದಿರ ಮೊಲೆಗಳು ಕಿವು ಗಡ್ಡೆಗಳಾಗಿರುತ್ತದೆ. ಇದಕ್ಕೆ ಬ್ಯಾಕ್ಟೀರಿಯಾ ಸೋಂಕು ಕಾರಣ. ಅಗತ್ಯನುಸಾರ ಸೂಕ್ತ ಪ್ರಮಾಣದಲ್ಲಿ, ಸೂಕ್ತವಾದ ರೋಗ ನಿರೋಧಕ ಔಷಧಿಗಳು ಬಳಸಿದರೇ ಮೊಲೆಯ ಗಡ್ಡೆಗಳು ಕಿವು ಗಡ್ಡೆಗಳಾಗುವುದಿಲ್ಲ, ಮೊಲೆಗಳು ಗಡ್ಡೆ ಕಟ್ಟಿದಾಗ ರೋಗ ನಿರೋಧಕ ಔಷಧಿ ಬಳಕೆಯೊಂದಿಗೆ ಬಿಸಿ ನೀರಿನ ತಾವು ಕೂಡ ಕೊಡಬೇಕು ಈ ಸ್ಥಿತಿಯಲ್ಲೂ ಮಗುವಿಗೆ ಹಾಲುಣಿಸಬಹುದು.

ತಾಯಿಯ ಹಾಲನ್ನು ಹಿಂಡಬೇಕಾದರೆ :

ಕೆಲವು ಸಂದರ್ಭಗಳಲ್ಲಿ ತಾಯಿಯ ಹಾಲನ್ನು ಹಿಂಡಿ ಮಗುವಿಗೆ ಕುಡಿಸಬೇಕಾಗುತ್ತದೆ ಮೊಳೆಗಳಿಂದ ತಾನು ಹಿಂಡುವ ಕ್ರಮ ತಾಯಿಗೆ ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಮೊಲೆಯಿಂದ ಹಾಲು ಹಿಂಡಲಿ 20-30 ನಿಮಿಷ ಹಿಡಿಯುತ್ತದೆ ಹಾಲು ನೀಡುವಾಗ ಮೊಲೆ ತೊಟ್ಟುಗಳು ಸ್ವಲ್ಪ ದೂರದಲ್ಲಿ ಹಿಡಿದುಕೊಂಡು ಹಿಂಡುವುದೇ ಅಲ್ಲದೆ, ಹಾಗೆ ಹಿಂಡುವಾಗ ಮೊಲೆಗಳನ್ನು ಎದೆಗೆ ಅದುಮಿ ಹಿಂಡಿದಿರಬೇಕು. ಹೀಗೆ ಮಾಡುವುದರಿಂದ ಗ್ರಂಥಿಗಳಿಂದ ಹಾಲುಗಳು ಸುಲಭವಾಗಿ ಹೊರಬರುತ್ತದೆ

ಒಡೆಯುವ ಮೊಲೆ ತೊಟ್ಟುಗಳು :

ಕೆಲವು ತಾಯಂದರಿಗೆ ಮೊಲೆ ತೊಟ್ಟುಗಳು ಒಡೆಯುತ್ತದೆ. ಸಾಮಾನ್ಯವಾಗಿ ಮಗುವಿನ ಹಾಲು ಕೊಡಲು ಆರಂಭಿಸಿದ 2-3 ದಿನಗಳಲ್ಲಿ ಹೀಗಾಗುತ್ತದೆ. ಮೊಲೆ ತೊಟ್ಟುಗಳು ಒಡೆಯಲು ಮುಖ್ಯವಾದ ಕಾರಣವೇನೆಂದರೆ ಸರಿಯಾದ ಕ್ರಮದಲ್ಲಿ ಮಗುವಿಗೆ ಮೊಲೆ ಹಿಡಿಸದಿರುವುದು ಆಗಿರುತ್ತದೆ. ಮೊಲೆ ತೊಟ್ಟುಗಳು ಒಡೆಯುವುದರಿಂದ ಬ್ಯಾಕ್ಟೀರಿಯಾ ಸೋಂಕು ತಗುಲುವ ಸಾಧ್ಯತೆ ಇದ್ದು. ಮೊಲೆಗಳು ಗಡ್ಡೆಕಟ್ಟಿ ಕೀವು ಉಂಟಾಗುತ್ತದೆ.

ಹೆರಿಗೆಯಾದ ಮೊದಲ ವಾರದಲ್ಲಿ ಮೊಲೆ ತೊಟ್ಟುಗಳು ಒಡೆಯಲು ಮಗುವನ್ನು ಸರಿಯಾದ ಕ್ರಮದಲ್ಲಿ ಮೊಲೆ ಹಿಡಿಸದಿರುವುದು ಕಾರಣವಾದರೆ ಕೆಲವು ವಾರಗಳ ನಂತರ ಮೊಲೆ ತೊಟ್ಟುಗಳು ಒಡೆದರೆ ಅದಕ್ಕೆ ಫಂಗಸ್ ಸೋಂಕು ಕಾರಣವಾಗಿರುತ್ತದೆ.

ಮೊಲೆ ತೊಟ್ಟುಗಳು ಒಡೆದಿದ್ದಾಗ್ಯೂ ಹಾಲುಣಿಸುವುದನ್ನು ಬಿಡುವ ಅಗತ್ಯವಿಲ್ಲ. ಮಗುವನ್ನು ಸರಿಯಾದ ಕ್ರಮದಲ್ಲಿ ಹಿಡಿದುಕೊಂಡು ಹಾಲುಣಿಸಿದರೆ ಮೊಲೆ ತೊಟ್ಟುಗಳು ಅವಶ್ಯಕವೆ ಸರಿಯಾಗುತ್ತದೆ. ಮಗುವಿನ ನಾಲಿಗೆಯ ಮೇಲೆ ಪಾಚಿ ಕಟ್ಟಿದರೆ ಅದನ್ನ “ಥ್ರೇಶ್” ಎನ್ನುತ್ತಾರೆ. ಈ ಥ್ರೇಷ್ ಆದಾಗ ನಾಲಿಗೆಯ ಮೇಲೆ ಜಂಕ್ಷನ್ ವೈಟಲ್ಸ್ ಸೊಲ್ಯೂಷನ್ ಲೇಪಿಸಿದರೆ ವಾಸಿಯಾಗುತ್ತದೆ. ಹಾಗೆ ತೊಟ್ಟಿಗೂ ಕೂಡ ಸೊಲ್ಯೂಷನ್ ಲೇಪಿಸಬೇಕು….

ಮೊಲೆ ತೊಟ್ಟುಗಳು ಒಡೆದಿದ್ದಾಗ ನಾವೆ, ಉರಿ ,ನೋವಿದ್ದರೂ ಮೈಕನಜೋಲ್ ಗುಳಿಗೆಯನ್ನು ದಿನಕ್ಕೆ 3 ಬಾರಿ, 10 ದಿನ ಬಳಸಬೇಕು.

ಮೊಲೆ ತೊಟ್ಟುಗಳು ಒಡೆದಾಗ ದಿನಕ್ಕೊಮ್ಮೆಯಾದರೂ ಶುಭ್ರವಾಗಿ ಉಜ್ಜಿ ತೊಳೆಯಬೇಕು. ಸಾಧ್ಯವಾದಷ್ಟು ಗಾಳಿ ಬೆಳಕಿಗೆ ತೊಟ್ಟುಗಳನ್ನು ತೆರೆದುಕೊಂಡಿರುವಂತೆ ಜಾಗೃತ ವಹಿಸಬೇಕು.

ಮೊಲೆ ತೊಟ್ಟುಗಳು ಒಡೆದು ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ, ಮೊಲೆಗಳಿಂದ ಹಾಲು ಹಿಂಡಿ ತೆಗೆಯಬೇಕು. ಹಾಗೆ ಮಾಡದಿದ್ದರೆ ಮೊಲೆಗಳು ಮಗುವಿಗೆ ಕುಡಿಸಬೇಕು ಹಾಲು ಕುಡಿಸುವ ಬಟ್ಟಲನ್ನು ಶುಭ್ರವಾಗಿ ತೊಳೆಯಬೇಕು.

ಒಳಕ್ಕೆಳಕೊಂಡಿರುವ ಮೊಲೆ ತೊಟ್ಟುಗಳು :

ಕೆಲವು ಮಹಿಳೆಯರಿಗೆ ಮೊಲೆ ತೊಟ್ಟುಗಳು ಮುಂದಕ್ಕೆ ಬಾರದೆ ಒಳಕ್ಕೆ ಎಳೆದುಕೊಂಡಿರುತ್ತದೆ. ಇಂತಹ ಗರ್ಭಿಣಿಯರಾದ ನಂತರ ಮೊಲೆಗಳು ತುಂಬಿಕೊಂಡು ತೊಟ್ಟುಗಳು ಹೊರಕ್ಕೆ ಚಾಚುತ್ತದೆ ಮೊಲೆ ತೊಟ್ಟುಗಳು ಒಳಕ್ಕೆಳೆದುಕೊಂಡಿದ್ದಾಗ ಬೆರಳುಗಳಿಂದ ಹಿಡಿದುಕೊಂಡು ಹೊರಗೆಎಳೆಯುತ್ತಿದ್ದರೆ ಸಾಹಜ ಸ್ಥಿತಿಗೆ ಬರುತ್ತದೆ. ಆದರೆ ಕೆಲವರಿಗೆ ಹೊರಕ್ಕೆ ಬಾರದೆ ಹಾಗೆ ಇದ್ದುಬಿಡುವುದುಂಟು. ಇಂತಹ ಸಂದರ್ಭಗಳಲ್ಲಿ ಮೊಲೆ ತೊಟ್ಟುಗಳನ್ನು ಕ್ರಮವೊಂದಿಗೆ 20cc ಡಿಸ್ಪೋಸಜಬಲ್ ಪ್ಲಾಸ್ಟಿಕ್ ಸಿರಂಜ್ ತೆಗೆದುಕೊಳ್ಳಬೇಕು. ಅದನ್ನು ಸೂಜಿ ಸೇರಿಸುವ ಕಡೆ ಅರ್ಧ ಸೆಂಟಿಮೀಟರ್ ಮೇಲಕ್ಕೆ ಕತ್ತರಿಸಬೇಕು, ಹೀಗೆ ಕತ್ತರಿಸಿದ ನಂತರ ಪಿಸ್ಟಿನ್ ನನ್ನು ಮಾಮೂಲಿಯಾಗಿ ತೂರಿಸುವ ಕಡೆಗಲ್ಲದೆ ಕತ್ತರಿಸಿದ ಕಡೆಯಿಂದ ಒಳಗೆ ತೋರಿಸು ನಂತರ ಮಾಮೂಲಿಯಾಗಿ ಪಿಸ್ತೀನ್ ತೂರಿಸುವ ಚಿರಂಜ ಭಾಗವನ್ನು ಮೊಲೆ ತೊಟ್ಟುಗಳಿಗೆ ನಿರ್ವಾತ ಉಂಟಾಗಿ ಮೊಲೆ ತೊಟ್ಟುಗಳು ಹೊರಗೆಡೆಯಲ್ಪಡುತ್ತದೆ.

ಒಂದು ವೇಳೆ ಮೊಲೆ ತೊಟ್ಟುಗಳು ಹೊರಕ್ಕೆ ಬಾರದಿದ್ದರೂ ಹಾಲುಣಿಸಲು ಯಾವ ತೊಂದರೆಯೂ ಇರುವುದಿಲ್ಲ ಮಗುವನ್ನು ಸರಿಯಾದ ಕ್ರಮದಲ್ಲಿ ಹಿಡಿದುಕೊಂಡು ಮೊಲೆಯ ಹೆಚ್ಚು ಭಾಗ ಮಗುವಿನ ಬಾಯಿಗೆ ಸಿಗುವಂತೆ ಮಾಡಿದರೆ ಮಗು ಹಾಲು ಕುಡಿಯುವ ಬಾಯಿ ಆಡಿಸುತ್ತಿದ್ದಾಗ ಹಾಲು ಸರಾಗವಾಗಿ ಬಾಯಿಗೆ ಹೋಗುತ್ತದೆ ಮಗು ಸಾಮಾನ್ಯವಾಗಿ ಮೊಲೆ ತೊಟ್ಟುಗಳೊಂದಿಗೆ ಅದರ ಸುತ್ತಲೂ ಇರುವ ಕಪ್ಪು ಪ್ರದೇಶವನ್ನು ಬಾಯಿಗೆ ತೆಗೆದುಕೊಳ್ಳುತ್ತದೆ. ಮೊಲೆ ತೊಟ್ಟುಗಳು ಒಳಗಿದ್ದಾಗ ಆ ಕಪ್ಪು ಪ್ರದೇಶಕ್ಕಿಂತಲೂ ಹೆಚ್ಚು ಭಾಗವನ್ನು ಬಾಯಿಗಿಟ್ಟುಕೊಂಡರೆ ಸುಲಭವಾಗಿ ಹಾಲು ಕುಡಿಯಲು ಸಾಧ್ಯವಾಗುತ್ತದೆ. ಮಗು ಆ ರೀತಿ ಮೊಲೆ ಹಿಡಿಯಲು ತಾಯಿ ಸಹಕರಿಸುತ್ತದೆ.

ಕೆಲವು ತಾಯಿಂದರು ನಿಪ್ಪಲ್ಲನ್ನು ಬಳಸುತ್ತಾರೆ ಆದರೆ ನಿಪ್ಪಲ್ ನ ಅಗತ್ಯವಿಲ್ಲ. ಅಲ್ಲದೆ ನಿಪ್ಪಲ್ ಶುಭ್ರವಾಗಿರದಿದ್ದರೆ ಮಗುವಿನ ಬಾಯಲ್ಲಿ ಫಂಗಸ್ ಸಂಕುಂಟಾಗುತ್ತದೆ.

ದೊಡ್ಡದಾಗಿರುವ ಮೊಲೆ ತೊಟ್ಟುಗಳು :

ಕೆಲವು ತಾಯಂದಿರಿಗೆ ಮೊಲೆ ತೊಟ್ಟುಗಳು ದೊಡ್ಡದಾಗಿರುತ್ತದೆ. ಒಳಗೆ ಸಂಕುಚಿತಗೊಂಡಿರುವ ಮೊಲೆ ತೊಟ್ಟುಗಳಿಗಿಂತಲೂ ಇವು ಮಗುವಿನ ಹಾಲು ಕುಡಿಯಲು ಅಡ್ಡಿಯಾಗುತ್ತದೆ. ಮಗು ಹಾಲು ಕುಡಿಯಲು ಕೇವಲ ಮೊಲೆ ತೊಟ್ಟುಗಳನ್ನು ಹಿಡಿದುಕೊಂಡರೆ ಸಾಲದು ಮೌಲ್ಯ ಸ್ವಲ್ಪ ಭಾಗವನ್ನು ಬಾಯಿಗೆ ತೆಗೆದುಕೊಳ್ಳಬೇಕಾಗುತ್ತದೆ ಮೊಳೆ ತೊಟ್ಟುಗಳು, ದೊಡ್ಡದಿದ್ದಾಗ ಹಾಗೆ ಮಾಡಲಾಗುವುದಿಲ್ಲ. ಹಾಗಾಗಿ ಸಾಕಷ್ಟು ಹಾಲನ್ನು ಮಗು ಹೀರಲಾರದು ಇಂತಹ ಸಂದರ್ಭದಲ್ಲಿ ಮೊದಲು ಸ್ವಲ್ಪ ಭಾಗವನ್ನು ಮಗುವಿನ ಬಾಯಿಗಿಡಲು ತಾಯಿ ಸಹಕರಿಸಬೇಕು.

ಮೊಲೆಗಳಿಂದ ಹಾಲು ಸುರಿದು ಹೋಗುವುದು :

 ಕೆಲವು ತಾಯಂದಿರಿಗೆ ಹೆರಿಗೆಯಾದ ಮೊದಲ ವಾರಗಳಲ್ಲಿ ಮೊಲೆಗಳಿಂದ ಅಷ್ಟೋ ಇಷ್ಟು ಹಾಲು ಹರಿದು ಹೋಗುತ್ತದೆ. ಮುಖ್ಯವಾಗಿ ಮಗು ಹಾಲು ಕುಡಿಯುವ ಅವಧಿಯ ನಡುವೆ ಹೆಚ್ಚು ಅಂತರವಿದ್ದಾಗ ಹೀಗಾಗುತ್ತದೆ. ತಾಯಿಗೆ ಮಗುವಿನ ಬಗ್ಗೆ ವಾತ್ಸಲ್ಯ ಉಂಟಾದಾಗಲೂ ಹಾಲು ಸುರಿಯಬಹುದು ಹೀಗೆ ಸುರಿಯುವುದು ಅಸಾಧ್ಯ ಏನು ಅಲ್ಲ ಉದ್ಯೋಗಸ್ಥ ತಾಯಂದಿರು 2-3 ಗಂಟೆ ಒಳಗೆ ಹಾಲು ಕುಡಿಸಲು ಸಾಧ್ಯವಾಗದಿದ್ದಾಗ, ಸುರಿವ ಸಂಭವ ಜಾಸ್ತಿ ಇಂತಹ ಸ್ರವಿಸಿದ ಹಾಲನ್ನು ಹೀರಲು ಬ್ರಾದೊಳಗೆ ಪ್ಯಾಡ್ಸ್ ಇಟ್ಟುಕೊಳ್ಳಬೇಕು ಆಗ ಕುಪ್ಪಸ ಹಾಲಿನಿಂದ ತೇವವಾಗುವ ಸಂಭವ ಇರುವುದಿಲ್ಲ. ಹಾಲೂ ಮತ್ತು ಸುರಿಯುತ್ತಿದ್ದರೆ ಅದನ್ನು ಹಿಂಡಿ ಶುಭ್ರವಾದ ಸೀಸಿಯಲ್ಲಿ ಶೇಖರಿಸಬೇಕು. ನಂತರ ಮಗುವಿಗೆ ಕೊಡಬಹುದು ಹಾಲು ಹಿಂಡಿದ ನಂತರ ಹೆಚ್ಚು ಸಮಯ ಹೊರಗಿದ್ದಾದರೆ ಅದನ್ನು ಬಿಸಿ ಮಾಡಿಕುಡಿಸಬೇಕು.

ಹಾಲಿನಲ್ಲಿ ರಕ್ತ :

ಕೆಲವು ತಾಯಂದಿರು ತಮ್ಮ ಹಾಲಿನಲ್ಲಿ ರಕ್ತವಿದೆ ಎಂದು ಹೇಳುತ್ತಾರೆ ಸಾಮಾನ್ಯವಾಗಿ ಮೊಲೆ ತೊಟ್ಟುಗಳು ಒಡೆದಿದ್ದಾಗ ಹೀಗಾಗುತ್ತದೆ ಹಾಲಿನಲ್ಲಿ ರಕ್ತ ಕಂಡುಬಂದರೂ ,ತಾಯಿ ಮಾಮುಲಿನಂತೆ ಮಗುವಿಗೆ ಮೊಲೆಯುಣಿಸಬಹುದು.

ತಾಯಿಯ ಹಾಲಿನ ಕೊರತೆ :

ಕೆಲವು ತಾಯಂದಿರು ತಮ್ಮಲ್ಲಿ ಸಾಕಷ್ಟು ಹಾಲು ಇಲ್ಲವೆಂದು ಮಗುವಿಗೆ ಸಾಕಾಗುತ್ತಿಲ್ಲವೆಂದು ಭಾವಿಸುತ್ತಾರೆ. ಆದರೆ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪತ್ತಿ ಆಗಿರುತ್ತದೆ ಅನಗತ್ಯವಾಗಿ ಆತುರ ಪಟ್ಟು ಹಸುವಿನ ಹಾಲನ್ನು ಕುಡಿಸುತ್ತಾರೆ. ಹಾಗೆ ಹಾಲಿನ ಹಸುವಿನ ಹಾಲನ್ನು ಕುಡಿಸುವುದು ಒಳ್ಳೆಯದಲ್ಲ.

ಮಗುವಿಗೆ ಹಾಲು ಸಾಕಾಗುತ್ತಿಲ್ಲವೆಂದು ಭಾವಿಸಿದಾಗ ಮಗು ಸರಿಯಾಗಿ ಮೊಲೆ ಹಿಡಿಯುತ್ತಿದೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕು. ತಾಯಿ ಕ್ರಮಬದ್ಧವಾಗಿ ಮಗುವನ್ನು ಹಿಡಿದುಕೊಂಡು ಹಾಲುಣಿಸದಿದ್ದರೆ ಸಕ್ಕಿಂಗ್ ರಿಫ್ಲೆಕ್ಸ್ ಇಲ್ಲದೆ ,ಹಾಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಒಂದು ವಿಷಯವನ್ನು ತಾಯಿ ಗಮನಿಸಬೇಕು ತಾಯಿಯಲ್ಲಿ ಒಂದೇ ಮಗುವಿಲ್ಲದ ಎರಡು ಮಗುವಿಗಾಗುವಷ್ಟು ಹಾಲು ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿ ಮಗುವಿಗೆ ಹಾಲು ಸಾಕಾಗುತ್ತಿಲ್ಲವೆಂದು ಅನಿಸಿದಾಗ ಮೂರು ಅಂಶಗಳು ಸ್ಪಷ್ಟವಾಗಿ ಗಮನಿಸಬೇಕು

1 ನಿಜವಾಗಿಯೂ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪತ್ತಿಯಾಗುತ್ತಿದೆಯೇ ?ಇಲ್ಲವೇ ?

2 ಒಂದುವೇಳೆ ಸಾಕಷ್ಟು ಹಾಲು ಉತ್ಪತ್ತಿಯಾಗದಿದ್ದರೆ ಅದಕ್ಕೆ ಕಾರಣವೇನು?

3 ಒಂದು ವೇಳೆ ನಿಜವಾಗಿಯೂ ಹಾಲು ಉತ್ಪತ್ತಿಯಾಗಲು ಸಾಧ್ಯವಾಗದಿದ್ದರೆ ಮಗುವಿಗೆ ಪರ್ಯಾಯ ಮಾರ್ಗವೇನು?

ಮೇಲಿನ ಮೂರು ಅಂಶಗಳು ಗಮನದಲ್ಲಿಟ್ಟುಕೊಂಡಾಗ ಅವಲೋಕಿಸಿದಾಗ ವಿಷಯ ಮನದಟ್ಟಾಗುತ್ತದೆ ನಿಜವಾಗಿಯೂ ಮಗುವಿನ ಹಾಲು ಸಾಕಾಗದಿದ್ದರೆ ವಯಸ್ಸಿನಿಗೆ ತಕ್ಕ ಬೆಳವಣಿಗೆ ಇರುವುದಿಲ್ಲ ಅಷ್ಟೇ ಅಲ್ಲದೆ ಮಗುವಿನ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗುತ್ತದೆ ಮೂತ್ರದ ಸಾಂದ್ರತೆ ಹೆಚ್ಚಾಗಿದ್ದು ಬಣ್ಣ ಹಳದಿಯಾಗಿರುತ್ತದೆ.