ಮನೆ ಪೌರಾಣಿಕ ವಾಸುದೇವ ಸ್ವರೂಪ

ವಾಸುದೇವ ಸ್ವರೂಪ

0

ಮೈತ್ರೇಯಾ !  ಶ್ರೀ ಮಹಾವಿಷ್ಣು ಅಖಿಲಾಂಡಕೋಟಿಭೂತ ರಾಶಿಯ ಸೃಷ್ಟಿಗೂ, ಸ್ಥಿತಿ, ಲಯಗಳಿಗೂ ಕಾರಣಭೂತನು. ಆತನು ಜಗತ್ತಿನಲ್ಲಿಯೂ ಜಗತ್ತು ಆತನಲ್ಲಿಯೂ ಏಕಕಾಲದಲ್ಲಿ ನಡೆಸಿರುವುದರಿಂದ ಆತನು ವಾಸುದೇವನಾದನು.

ಈ ದೃಶ್ಯ ದೃಶ್ಯನ ಸರ್ವಸ್ವವು ಆತನ ರೂಪವೇ ಆಗಿದೆ.  ತನ್ನಲ್ಲಿ ನಿಕ್ಷಿಪ್ತವಾಗಿರುವ ಸಕಲ ಚರಾಚರ ಜಗತ್ತು ಲಯವಾದಾಗ ಆತನ ಕಾಲ ಸ್ವರೂಪವಾಗಿ ನಿಲ್ಲುತ್ತದೆ. ವಿಮಲವೂ, ಅಚ್ಯುತವೂ ಸರ್ವ ವ್ಯಾಪಕವೂ, ಆದಿಮದ್ಯಾಂತರಗಳು ಸಮಸ್ತವೂ ಆತನ ಕಾಲ ವ್ಯಕ್ತಸ್ವರೂಪ. ಅದು ನಿತ್ಯವಾಗಿ ನಿರಂತರವಾಗಿ ಹಗಲು ರಾತ್ರಿಗಳಾಗಿ ಪರಿಣಮಿಸಿದೆ.   

ಅನಾದಿನಿಧನನೂ,  ವಿಶ್ವಮಯನೂ ಆದ ವಾಸುದೇವನಿಗೂ ಕಾಲಪುರುಷನಿಗೂ ಆಬೇದ. ಅವರಿಗೆ ಪೂರ್ವಪರಗಳಿಲ್ಲ. ಹಗಲುರಾತ್ರಿ ,ಭೂಮಿ ಆಕಾಶಗಳು, ಕತ್ತಲು ಬೆಳಕು, ಶೀತೋಷ್ಣಗಳು -ಇವುಗಳಲ್ಲಿ ಯಾವುದು ತಾನಲ್ಲದೇ, ಎಲ್ಲಾದರಲ್ಲಿಯೂ ತಾನೇ ಆಗಿ ವಾಸುದೇವನಾಗಿ ಪ್ರಕಾಶಿಸುತ್ತಿದ್ದಾನೆ.

ಈ ವಿಶ್ವವನ್ನು ಸೃಜಿಸುವ ತರುಣವು ಅಸನ್ನವಾದಾಗ ಆತನಿಂದ ಶಬ್ದ ಬ್ರಹ್ಮವೂ ಉದಯಿಸಿತು.