ಮನೆ ಸ್ಥಳೀಯ ಜಿಲ್ಲಾಧಿಕಾರಿಗಳಿಂದ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾಧಿಕಾರಿಗಳಿಂದ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ

0

Join Our Whatsapp Group

ಮೈಸೂರು:- ಜಿಲ್ಲಾಧಿಕಾರಿಗಳಾದ ಡೀ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ, ಉಪವಿಭಾಗಾಧಿಕಾರಿಗಳು, ತಾಲ್ಲೂಕು ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿ.ಡಿ.ಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು, ಪಿ.ಆರ್ ಇ ಡಿ ಅಭಿಯಂತರರು ಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆ ನಡೆಸಲಾಯಿತು.

2019 ರಿಂದ ಇಲ್ಲಿಯವರೆಗೆ ಮಳೆ/ಪ್ರವಾಹದಿಂದ ಹಾನಿಯಾದ ವಾಸದ ಮನೆಗಳಿಗೆ ಸಂಬoಧಿಸಿದoತೆ ಮೊದಲನೇ ಕಂತಿನ ಪರಿಹಾರ ಹಣವನ್ನು ಪಡೆದುಕೊಂಡವರು ಇಲ್ಲಿಯವರೆಗೂ ಮನೆ ನಿರ್ಮಾಣ ಪ್ರಾರಂಭಿಸದೇ ಇರುವುದು ಕಂಡುಬoದಿದ್ದು, ಇಂತಹ ಪ್ರಕರಣಗಳಲ್ಲಿ – ಪಿ.ಡಿ.ಒ, ವಿ ಎ ಒ ಮತ್ತು ಪಿ ಆರ್ ಇ ಡಿ ಅಭಿಯಂತರರು ಜಂಟಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು.

2019-20 ರಿಂದ ಮಳೆ/ಪ್ರವಾಹದಿಂದ ಹಾನಿಯಾದ ಶಾಲೆ/ಅಂಗನವಾಡಿ/ರಸ್ತೆ/ಸೇತುವೆ ದುರಸ್ತಿ ಕಾಮಗಾರಿಗಳು ಬಾಕಿ ಉಳಿದಿದ್ದಲ್ಲಿ ತಕ್ಷಣವೇ ಪೂರ್ಣಗೊಳಿಸಿ ಸಂಬoಧಪಟ್ಟ ಅಧಿಕಾರಿಗಳು ಬಳಕೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಲಾಯಿತು.
ಜೂನ್ 2023 ರಿಂದ ಇಲ್ಲಿಯವರೆಗೆ ಹಾನಿಯಾಗಿರುವ ಮನೆಗಳ ವಿವರಗಳನ್ನು ತ್ರಿ-ಸದಸ್ಯ ಸಮಿತಿ (ವಿ ಎ ಒ/ಪಿ.ಡಿ.ಒ / ಪಿಆರ್ ಇ ಡಿ ಅಭಿಯಂತರರು) ಜಂಟಿ ಸಮೀಕ್ಷೆ ತಪಾಸಣೆ ನಡೆಸಿ ಆರ್ ಜಿ ಹೆಚ್ ಸಿ ಎಲ್ ತಂತ್ರಾoಶದಲ್ಲಿ ನಮೂದಿಸಲು ಸೂಚಿಸಿದರು.

ಸರ್ಕಾರದ ದಿನಾಂಕ 3.8.2023 ರ ಸುತ್ತೋಲೆ ರೀತ್ಯಾ ಪರಿಹಾರ ಪಾವತಿಗೆ ತುರ್ತಾಗಿ ಕ್ರಮವಹಿಸಲು
ಹಾಗೂ ಸೂಚನೆಗಳನ್ನು ಆಗಸ್ಟ್ 21, 2023ರೊಳಗೆ ಕ್ರಮವಹಿಸಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅನುಪಾಲನಾ ವರದಿ ಸಲ್ಲಿಸಲು ಉಪವಿಭಾಗಾಧಿಕಾರಿರವರುಗಳಿಗೆ ತಿಳಿಸಿದರು.ಇದಕ್ಕೆ ವಿಫಲರಾಗುವ ಸಂಬoಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮವಹಿಸುವುದು ಅನಿವಾರ್ಯವಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.