ಮನೆ ರಾಜ್ಯ ಕಿಂಗ್ ಫಿಶರ್ ಬಿಯರ್‌ ನಲ್ಲಿ ಅಪಾಯಕಾರಿ ಅಂಶ ಪತ್ತೆ: 25 ಕೋಟಿ ಮೌಲ್ಯದ 78678 ಬಾಕ್ಸ್...

ಕಿಂಗ್ ಫಿಶರ್ ಬಿಯರ್‌ ನಲ್ಲಿ ಅಪಾಯಕಾರಿ ಅಂಶ ಪತ್ತೆ: 25 ಕೋಟಿ ಮೌಲ್ಯದ 78678 ಬಾಕ್ಸ್ ಬಿಯರ್ ವಶ

0

ಮೈಸೂರು: ಯುವಜನತೆಯ ಅತೀ ಆಕರ್ಷಣೀಯ ಹಾಗೂ ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ.

ಪರಿಣಾಮ 25 ಕೋಟಿ ಮೌಲ್ಯದ 78678 ಬಾಕ್ಸ್ ಬಿಯರ್ ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರಿವರಿಸ್ ಕಂಪನಿ ತಯಾರಿಸಿದ್ದ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ.

ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದ್ದು, 7e ಮತ್ತು 7c ನಮೂನೆಯ ದಿನಾಂಕ 15-07-23ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಈ ಸೆಡಿಮೆಂಟ್ ಅಂಶ ಕಂಡುಬಂದಿದೆ.

ಈ ಮಾಹಿತಿ ತಿಳಿದ ಕೂಡಲೇ ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ಕುರಿತು 2-08-2023ರಂದು ಕೆಮಿಕಲ್ ವರದಿ ಬಂದಿದ್ದು, ವರದಿಯಲ್ಲಿ ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್ ಎಂದು ತಿಳಿಸಲಾಗಿದೆ.

ಈ ಅವಧಿಯಲ್ಲಿ ಒಟ್ಟು‌ 78678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟರ ವೇಳೆಗೆ ಎಲ್ಲಾ ಬಾಕ್ಸ್ ಗಳನ್ನು ತಡೆಹಿಡಿಯಲಾಗಿದೆ. ಕೆಲ ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್ ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ.

ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.