ಹಾಲಲ್ಲಾದರೂ ಹಾಕೂ, ನೀರಲ್ಲಾದರು ಹಾಕು ರಾಘವೇಂದ್ರ,
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ||
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರೂ ನೂಕು ರಾಘವೇಂದ್ರ ||
ಮುಳ್ಳಲ್ಲಿ ಮುಳ್ಳಾಗಿ | ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ |
ಬಿಸಿಲಲ್ಲಿ ಒಣಗಿಸು| ನೆರಳಲ್ಲಿ ಮಲಗಿಸು ರಾಘವೇಂದ್ರ ||
ಬಿಸಿಲಲ್ಲಿ ಕೆಂಪಾಗಿ | ನೆರಳಲ್ಲಿ ತಂಪಾಗಿ ನಗುನಗುತ್ತಾ ಇರುವೆ ರಾಘವೇಂದ್ರ || ಹಾಲಲ್ಲಾದರೂ ||
ಸುಖವನ್ನೇ ನೀಡೆಂದು ಎಂದು ಕೇಳಲಿ ನಾನು ರಾಘವೇಂದ್ರ ||
ಮುನ್ನ ಮಾಡಿದ ಪಾಪ ಯಾರದಾತನ ಗಂಟು | ನೀನೇಹೇಳು ರಾಘವೇಂದ್ರ|
ಎಲ್ಲಿದ್ದರೇನು ನಾ | ಹೇಗಿದ್ದರೇನು ನಾ ರಾಘವೇಂದ್ರ |
ನಿನ್ನಲ್ಲೇ ಶರಣಾಗಿ ನಿನ್ನನ್ನ ಉಸಿರಾಗಿ | ಬಾಳಿದರೆ ಸಾಕು ರಾಘವೇಂದ್ರ|| ಹಾಲಲ್ಲಾದರು||