ಮನೆ ದೇವಸ್ಥಾನ ಮೇಲುಕೋಟೆ

ಮೇಲುಕೋಟೆ

0

Join Our Whatsapp Group

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಯಾತ್ರಸ್ಥಳ ಇಲ್ಲಿ ಪ್ರತಿ ವರ್ಷ ನಡೆಯುವ ವೈರಮುಡಿ ಉತ್ಸವ ನೋಡಲು ಸಹಸ್ರಾರು ಭಕ್ತರು ಬರುತ್ತಾರೆ.

ಮೈಸೂರಿಗೆ 48 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ 156 km ದೂರದಲ್ಲಿ ಮೇಲುಕೋಟೆ ಇದೆ. ಇದೊಂದು ನಿರೀಕ್ಷೆೇತ್ರವು ಆಗಿದೆ ಊರು ಯಾದವಗಿರಿ ಅಥವಾ ಎದುಗಿರಿ ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಕ್ರಿಸ್ತಶಕ 12ನೇ ಶತಮಾನದಲ್ಲಿ ಶ್ರೀ ರಾಮಾನುಜಾಚಾರ್ಯರು ತಮಿಳುನಾಡಿನಿಂದ ಇಲ್ಲಿಗೆ ಆಗಮಿಸಿ 20 ವರ್ಷಗಳ ಕಾಲ ನೆಲೆಸಿದ್ದರು. ವೈಷ್ಣವ ಧರ್ಮ ಪ್ರಚಾರ ಮಾಡಿದರು. ಮೇಲುಕೋಟೆಗೆ ನಾರಾಯಣದ್ರಿ, ವೇಧಾದ್ರಿ, ಯಾದವಾದ್ರಿ, ಯತಿಶೈಲ ಮೊದಲಾದ ಹೆಸರುಗಳಿವೆ.

ಚೆಲುವನಾರಾಯಣ ದೇವಸ್ಥಾನ ಇಲ್ಲಿನ ಮುಖ್ಯ ದೇವಾಲಯ. ಇಲ್ಲಿನ ಸುಮಾರು 200 ಅಡಿ ಚಚ್ಚೌಕಾರದ ವಿಸ್ತಾರವಾದ ಕಟ್ಟಡ ಸುತ್ತಲೂ ಕೈಸಾಲೆ. ಮುಂದೆ ಮಹಾದ್ವಾರ ಮತ್ತು ಗೋಪುರ ಕಲ್ಲಿನ ಪ್ರಕಾರ ಅದಕ್ಕೆ ಸೇರಿದಂತೆ ಒಳಗೂ ಕೈಸಾಲೆ ಚಿಕ್ಕ ಗುಡಿಗಳು ಯಜ್ಞ ಶಾಲೆ, ಪಾಕ ಶಾಲೆ, ಮಂಟಪಗಳು ಮತ್ತು ಪಾತಾಳಂಕಣ ಇವೆ. ಗರ್ಭಗುಡಿ ಸುತ್ತರಂಗದ ಕತ್ತಲೆ ಪ್ರದಕ್ಷಿಣೆ ಇದೆ. ಇದು ವೈರಮುಡಿ ಉತ್ಸವದ ರಾತ್ರಿ ತೆರೆದಿರುತ್ತದೆ. ದೇವಾಲಯದ ಉತ್ಸವಮೂರ್ತಿ ಶೆಲ್ವ ಪಿಳ್ಳೆಯನ್ನು ಮೂಲ ವಿಗ್ರಹದಿಂದ ಬೇರ್ಪಡಿಸಿ ನವರಂಗದಲ್ಲಿ ಒಂದು ಮಂಟಪದಲ್ಲಿ ಇಟ್ಟಿರುವುದು. ವೈಶಿಷ್ಟ ಪಾತಾಳಕಣದ ರಾಮಾನುಜಾಚಾರ್ಯರ ಸನ್ನಿಧಿ ಮತ್ತು ಎದುಗಿರಿಯಮ್ಮನವರ ಸನ್ನಿಧಿ ಮುಖ್ಯವಾದದ್ದು ರಾಮಾನುಜರ ವಿಗ್ರಹವನ್ನು ಅವರು ಮೇಲುಕೋಟೆ ಬಿಟ್ಟು ಶ್ರೀರಂಗಂ (ತಮಿಳುನಾಡು) ಗೆ ಹೊರಟಾಗ ಅವರ ನೆನಪಿಗೆ ಶಿಷ್ಯರೇ ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ.

ಹುತ್ತದಲ್ಲಿ ಹುದುಗಿದ್ದ ನಾರಾಯಣ ದೇವರನ್ನು ತೆಗೆಯಲು ಮತ್ತು ದೇವಸ್ಥಾನ ಪುನರ್ಮಿಸಲು ರಾಮಾನುಜರಿಗೆ ಹೊಯ್ಸಳ ವಿಷ್ಣುವರ್ಧನನ್ನು ಸಹಾಯ ಮಾಡಿದನೆಂದುಹೇಳಲಾಗುತ್ತದೆ. 1110ರಲ್ಲಿ ನಾರಾಯಣ ದೇವರ ಪ್ರತಿಷ್ಠಾವಪನೆ ಆಯ್ತೆನ್ನಲಾಗಿದೆ.

ಇಲ್ಲಿನ ಉತ್ಸವಮೂರ್ತಿ ಶೆಲ್ವಪಿಳ್ಳೆ ದೆಹಲಿಯ ಸುಲ್ತಾನನ ಅರಮನೆಯಲ್ಲಿದ್ದಿ ಎಂದು ಸ್ವತಹ ರಾಮಾನುಜರೆ ದೆಹಲಿಗೆ ಹೋಗಿ ಸುಲ್ತಾನನ ಮಗಳು ವರನಂದಿ ಪೂಜಿಸುತ್ತಾ, ಪ್ರೀತಿಯಿಂದ ಇಟ್ಟುಕೊಂಡಿದ್ದ ಆ ವಿಗ್ರಹವನ್ನು ಅವಳಿಂದ ತಂದರೆಂದೂ ಎಂದು ತಿಳಿದು ಬರುತ್ತದೆ. ಆದರೆ ವಿಗ್ರಹವನ್ನು ಬಿಟ್ಟಿರಲಾರದೆ ವರನಂದಿ ಶೆಲ್ವ ಪಿಳ್ಳೆಯನ್ನು ಹಿಂಬಾಲಿಸಿ, ಬಂದು ದೇವರಲ್ಲಿ ಊರ ಹೊರಗೆ ಹೊರನಂದಿಯ ಗುಡಿ ನಿರ್ಮಿಸಿ ಬೇಬಿ ನಾಚಿಯರೆಂಬ ಕರೆಯಲಾಗಿದೆ.

ಚೆಲುವನಾರಾಯಣಸ್ವಾಮಿ ಮೈಸೂರು ಅರಸರ ಆರಾಧ್ಯ ದೇವರು ಹೀಗಾಗಿ ದೇವಾಲಯಕ್ಕೆ ಅರಸರ ಹೇರಳವಾದ ದಾನ ಧರ್ಮಗಳು ಮಾಡಿರುವರು ರಾಜ ಒಡೆಯರ ರಾಜಮುಡಿ ಮತ್ತು ಕೃಷಿ ಕೃಷ್ಣರಾಜ ಒಡೆಯರ ಕೃಷ್ಣರಾಜಮುಡಿ ತುಂಬಾ ಪ್ರಸಿದ್ಧವಾದವು.

ರತ್ನ ಖಚಿತವಾದ ವೈರ ಮೂಡಿ ಎಂಬ ಕಿರೀಟ ಚೆಲುವನಾರಾಯಣ ಗುಡಿಯ ಅಮೂಲ್ಯ ವಸ್ತುಗಳಲ್ಲಿ ಒಂದು ಆದರೆ ಇದು ಹೇಗೆ ಬಂದಿದೆ ಎಂಬುದು ಇಂದಿಗೂ ರಹಸ್ಯವಾಗಿ ಉಳಿದೆ ಪ್ರತಿ ವರ್ಷ ಈ ಕಿರೀಟವನ್ನು ಉತ್ಸವ ಮೂರ್ತಿಗೆ ಧರಿಸಿ ವಿಜೃಂಭಣೆಯಿಂದ ವೈರಮುಡಿ ಉತ್ಸವವನ್ನು ಏಪ್ರಿಲ್ ತಿಂಗಳಲ್ಲಿ ನಡೆಸುವರು.

ದೇವಾಲಯದಿಂದ ಸ್ವಲ್ಪವೇ ದೂರದಲ್ಲಿರುವ ಕಲ್ಯಾಣಿ ತೀರ್ಥ ರಾಮಾನುಜರ ಕಾಲಕ್ಕೂ ಮೊದಲೇ ಇದ್ದಿದ್ದು ಹೇಳುತ್ತಾರೆ. ಈ ಕಲ್ಯಾಣಿ ಸುತ್ತ ಅನೇಕ ಮಂಟಪಗಳಿವೆ. ಕಲ್ಯಾಣಿ ಅಷ್ಟ ತೀರ್ಥಗಳಲ್ಲಿ ಅಗ್ರಗಣ್ಯವಾದುದಾಗಿದೆ.

ಕಲ್ಯಾಣಿಯ ತೀರದಲ್ಲಿರುವ ಬೆಟ್ಟದ ಮೇಲೆ ಯೋಗ ನರಸಿಂಹ ಸ್ವಾಮಿ ದೇವಾಲಯವಿದೆ ಇದು ಮೇಲುಕೋಟೆ ಅತ್ಯಂತ ಎತ್ತರದ ಶೃಂಗದ ಮೇಲೆ ಇದೆ ಈ ನರಸಿಂಹ ಕ್ಷೇತ್ರಗಳಲ್ಲಿ ಒಂದನ್ನಲಾಗಿದೆ ಗರ್ಭಗುಡಿ ಸುತ್ತ ಮಂಟಪ ಮತ್ತು ಮಹಾದ್ವಾರವುಳ್ಳ ಚಿಕ್ಕ ದೇವಾಲಯ.

ಮೇಲುಕೋಟೆಯಲ್ಲಿ ಶ್ರೀವೈಷ್ಣವಮತಾನುಯಾಯಿಗಳ ಯತಿರಾಜ ಮಠ, ಹೋಬ್ಬಿಲ ಮಠ, ಪರಕಾಲ ಮಠ ಮೊದಲಾದವು ಇವೆ. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯದ ನವರಂಗದ ಕಂಬ ಒಂದರ ಮೇಲೆ ರಾಜ ಒಡೆಯರ ಉಬ್ಬು ಚಿತ್ರ ಕೆತ್ತಲಾಗಿದೆ.