ಮನೆ ಕಾನೂನು ಸುಳ್ಳು ಜಾತಿ ಪ್ರಮಾಣ ಪತ್ರದಿಂದ ನೌಕರಿ ಪಡೆದ ಆರೋಪಿಗೆ ಯಾವುದೇ ರಕ್ಷಣೆ ಇಲ್ಲ: ಸುಪ್ರೀಂಕೋರ್ಟ್

ಸುಳ್ಳು ಜಾತಿ ಪ್ರಮಾಣ ಪತ್ರದಿಂದ ನೌಕರಿ ಪಡೆದ ಆರೋಪಿಗೆ ಯಾವುದೇ ರಕ್ಷಣೆ ಇಲ್ಲ: ಸುಪ್ರೀಂಕೋರ್ಟ್

0

Join Our Whatsapp Group

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದ ಸರ್ಕಾರಿ ನೌಕರರಿಗೆ ಯಾವುದೇ ರಕ್ಷಣೆ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

 ಜಾತಿ ಪ್ರಮಾಣ ಪತ್ರವನ್ನು ಮೋಸದಿಂದ ಪಡೆದು ಸಲ್ಲಿಸಲಾಗಿದೆ ಅಥವಾ ನಿಜವಾದ ತಪ್ಪು ಗ್ರಹಿಕೆಯಿಂದ ಪಡೆದು ಸಲ್ಲಿಸಲಾಗಿದೆ ಎಂಬುದು ಇಲ್ಲಿ ನಗಣ್ಯವಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದ ಮಧುಮಿತದಾಸ್ ಎಂಬವರನ್ನು ಉದ್ಯೋಗದಲ್ಲಿ ಮುಂದುವರಿಸುವಂತೆ ಒಡಿಶಾ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ, ಭುವನೇಶ್ವರ ಅಭಿವೃದ್ದಿ ಪ್ರಾಧಿಕಾರ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್  ಮತ್ತು ನ್ಯಾ. ಪರ್ಡಿವಾಲಾ ಅವರಿಂದ ನ್ಯಾಯ ಪೀಠ ತೀರ್ಪು ನೀಡಿದೆ.

ಮೀಸಲು ಹುದ್ದೆಗಳನ್ನ ಅರ್ಹರಿಗೆ ಮಾತ್ರ ನೀಡಬೇಕು. ಒಂದು ವೇಳೆ ಅನರ್ಹ ವ್ಯಕ್ತಿಗೆ ನೀಡಿದರೆ ಅರ್ಹ ವ್ಯಕ್ತಿಯ ಅಕಾಶವನ್ನು ಕಸಿದುಕೊಂಡಂತಾಗುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಪ್ರಮಾದ ಗಮನಕ್ಕೆ ಬಂದ ನಂತರವೂ ರಕ್ಷಣೆ ನೀಡಿದರೆ ಅಕ್ರಮವನ್ನು ಶಾಶ್ವತ ಗೊಳಿಸಿದಂತಾಗುತ್ತದೆ ಎಂದು ಹೇಳಿದೆ.

ಪ್ರಕರಣದ ವಿವರ :-

ಮಧುಮಿತದಾಸ್ ಅವರೂ ಜನ್ಮತಹ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ಮದುವೆಯಾಗಿದ್ದರು.

ಬಳಿಕ ತನಗೂ ಪರಿಶಿಷ್ಟ ಜಾತಿ ಅನ್ವಯಿಸುತ್ತದೆ ಎಂದು ತಹಶೀಲ್ದಾರ್ ಅವರಿಂದ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಇದೇ ಆಧಾರದಲ್ಲಿ ಭುವನೇಶ್ವರ ಅಭಿವೃದ್ದಿ ಪ್ರಾಧಿಕಾರದಿಂದ ಎಸ್.ಸಿ ಸಮುದಾಯಕ್ಕೆ ಮೀಸಲಾಗಿದ್ದ ಹುದ್ದೆಗೆ ಅದೇ ಮೀಸಲಾತಿ ಆಧಾರದಲ್ಲಿ ನೇಮಕಾತಿ ಹೊಂದಿದ್ದರು.

2011ರಲ್ಲಿ ಅವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪದಲ್ಲಿ ಶಿಸ್ತು ಪ್ರಾಧಿಕಾರವು ಕ್ರಮ ಜರುಗಿಸಿತ್ತು. 2012ರಲ್ಲಿ ವಿಚಾರ ಬಳಿಕ ಅವರನ್ನು ಸೇವೆಯಿಂದ ವಜಗೊಳಿಸಲಾಗಿತ್ತು. ಈ ಮಧ್ಯೆ ತಹಶೀಲ್ದಾರರು ಅವರು ಮಧುಮಿತ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿದೆ.

ಶಿಸ್ತು ಪ್ರಾಧಿಕಾರದ ವಜಾ ಆದೇಶವನ್ನು ಪ್ರಶ್ನಿಸಿ ಮಧುಮಿತ ಹೈಕೋರ್ಟ್ ಮೆಟಿಲೇರಿದ್ದರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರು ಮೋಸದಿಂದ ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ. ಹೀಗಾಗಿ ಹುದ್ದೆ ಖಾಲಿ ಇದ್ದರೆ ಮುಂದುವರೆಸಲು ಕುರಿತು ಪರಿಶೀಲಿಸಬೇಕು ಎಂದು ಪ್ರಾಧಿಕಾರಕ್ಕೆ ಅಧಿವೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪ್ರಾಧಿಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಪ್ರಾಧಿಕಾರ ಅರ್ಜಿಯನ್ನು ಸುಪ್ರೀಂ ಪುರಸ್ಕರಿಸಿದೆ.