ಮನೆ ಉದ್ಯೋಗ ರಾಷ್ಟ್ರೀಯ ತನಿಖಾ ಸಂಸ್ಥೆ: ಫೋಟೋಗ್ರಾಫರ್ ಸೇರಿ 24 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ತನಿಖಾ ಸಂಸ್ಥೆ: ಫೋಟೋಗ್ರಾಫರ್ ಸೇರಿ 24 ಹುದ್ದೆಗಳಿಗೆ ಅರ್ಜಿ ಆಹ್ವಾನ

0

ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 24 ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್, ಕ್ರೈಂ ಸೀನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ ​ಲೈನ್ ಮೂಲಕ ಅರ್ಜಿ ಹಾಕಬೇಕು.

ಹುದ್ದೆಯ ಮಾಹಿತಿ:

ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್- 3

ಫಿಂಗರ್ ಪ್ರಿಂಟ್ ಎಕ್ಸ್​ಪರ್ಟ್​- 2

ಎಕ್ಸ್​ಪ್ಲೋಸಿವ್ ಎಕ್ಸ್​ಪರ್ಟ್- 2

ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್- 10

ಬಯಾಲಜಿ ಎಕ್ಸ್​ಪರ್ಟ್​-1

ಕ್ರೈಮ್ ಸೀನ್ ಅಸಿಸ್ಟೆಂಟ್- 5

ಫೋಟೋಗ್ರಾಫರ್- 1

ವಿದ್ಯಾರ್ಹತೆ:

ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್- ಸ್ನಾತಕೋತ್ತರ ಪದವಿ

ಫಿಂಗರ್ ಪ್ರಿಂಟ್ ಎಕ್ಸ್ ​ಪರ್ಟ್​- ಎಂ.ಎಸ್ಸಿ

ಎಕ್ಸ್​ ಪ್ಲೋಸಿವ್ ಎಕ್ಸ್​ಪರ್ಟ್- ಬಿ.ಎಸ್ಸಿ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ

ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್- ಬಿಇ/ಬಿ.ಟೆಕ್

ಬಯಾಲಜಿ ಎಕ್ಸ್ ​ಪರ್ಟ್​- ಬಿ.ಎಸ್ಸಿ, ಪದವಿ, ಎಂ.ಎಸ್ಸಿ

ಕ್ರೈಮ್ ಸೀನ್ ಅಸಿಸ್ಟೆಂಟ್- ಸ್ನಾತಕೋತ್ತರ ಪದವಿ

ಫೋಟೋಗ್ರಾಫರ್- ಡಿಪ್ಲೊಮಾ, ಪದವಿ

ವಯೋಮಿತಿ:

ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 15, 2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್- ಮಾಸಿಕ  56,100- 1,77,500

ಫಿಂಗರ್ ಪ್ರಿಂಟ್ ಎಕ್ಸ್​ ಪರ್ಟ್​- ಮಾಸಿಕ   56,100- 1,77,500

ಎಕ್ಸ್​ ಪ್ಲೋಸಿವ್ ಎಕ್ಸ್​ ಪರ್ಟ್- ಮಾಸಿಕ   56,100- 1,77,500

ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್- ಮಾಸಿಕ   56,100- 1,77,500

ಬಯಾಲಜಿ ಎಕ್ಸ್​ ಪರ್ಟ್​- ಮಾಸಿಕ   56,100- 1,77,500

ಕ್ರೈಮ್ ಸೀನ್ ಅಸಿಸ್ಟೆಂಟ್- ಮಾಸಿಕ   44,900-1,42,400

ಫೋಟೋಗ್ರಾಫರ್- ಮಾಸಿಕ   35,400-1,12,400

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ.

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಸೂಪರಿಂಡೆಂಟ್ ಆಫ್ ಪೊಲೀಸ್ (ಆಡಳಿತ)

NIA HQ

CGO ಕಾಂಪ್ಲೆಕ್ಸ್ ಎದುರು

ಲೋಧಿ ರಸ್ತೆ

ನವದೆಹಲಿ-110003

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/08/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 15, 2023