ಮನೆ ಮನೆ ಮದ್ದು ಮನೆ ಮದ್ದು: ಏಲಕ್ಕಿ ಚೂರ್ಣ

ಮನೆ ಮದ್ದು: ಏಲಕ್ಕಿ ಚೂರ್ಣ

0

ತಲೆನೋವು :-

ಎರಡು ಚಮಚೆಯಷ್ಟು ಎಳ್ಳೆಣ್ಣೆಯನ್ನು ಬಿಸಿ ಮಾಡಬೇಕು ನಂತರ ಇದಕ್ಕೆ ತಲಾ ಅರ್ಧ ಚಮಚದಷ್ಟು ಏಲಕ್ಕಿ ಚೂರ್ಣ ಮತ್ತು ದಾಲ್ಚಿನ್ನಿ ಚೂರ್ಣ ಸೇರಿಸಿ ಕಲಸಿ ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಮೈಗ್ರೇನ್ ತಲೆನೋವು ನಿವಾರಣೆ ಆಗುತ್ತದೆ.

ಪಿತ್ತದಿಂದ ತಲೆಸುತ್ತುವಿಕೆ ಸಮಸ್ಯೆ ಇದ್ದಾಗ ಬೆಲ್ಲದ ಪಾನಕಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಕುಡಿಯಬೇಕು 

ಮಾನಸಿಕ ಸಮಸ್ಯೆಗಳು :-

ಏಲಕ್ಕಿ ಪುಡಿಯನ್ನು ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ನೆಕ್ಕುತ್ತಿದ್ದರೆ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತದೆ.

ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಚಹಾ ಸೋಪ್ಪು ಹಾಕಿ ಕುದಿಸಿ, ಶೋದಿಸಬೇಕು. (ಡಿಪ್ರೆಶನ್) ಸಮಸ್ಯೆ ನಿವಾರಣೆಯಾಗುತ್ತದೆ.

ಆಯಾಸ, ನಿಶಕ್ತಿ :-

ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಚಹಾ ಸೊಪ್ಪು ಹಾಕಿ ಕುದಿಸಿ ಶೋಧಿಸಬೇಕು. ಇದಕ್ಕೆ ಕಾಲು ಚಮಚ ಎಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು ಇದರಿಂದ ನಿಶಕ್ತಿ ಸಮಸ್ಯೆ ನಿವಾರಣೆಯಾಗುತ್ತದೆ. 

ಕಣ್ಣಿನ ಸಮಸ್ಯೆ :-

ಏಲಕ್ಕಿ ಪುಡಿಯನ್ನು ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ನೆಕ್ಕುತ್ತಿದ್ದರೆ, ದೃಷ್ಟಿ ಶಕ್ತಿ ತೀಕ್ಷ್ಣವಾಗುತ್ತದೆ.

ಬಾಯಿಯ ಸಮಸ್ಯೆ :-

ವಾಕರಿಕೆಯ ಸಮಸ್ಯೆ ಇದ್ದಾಗ ಒಂದು ಸಣ್ಣ ತುಂಡು ಶುಂಠಿ ಮತ್ತು ಒಂದೆರಡು ಚಿಟಿಕೆ ಏಲಕ್ಕಿ ಚೂರ್ಣವನ್ನು ಒಂದು ಲೋಟಕ್ಕೆ ಹಾಕಿ ಕುದಿಯುತ್ತಿರುವ ನೀರನ್ನು ಸುರಿದು ಮುಚ್ಚಿಟ್ಟು ಅದನ್ನು ತಣಿದ ನಂತರ ಸ್ವಲ್ಪ ಸ್ವಲ್ಪ ಕುಡಿಯುತ್ತಿರಬೇಕು.

ಗಂಟಲಿನ ಸಮಸ್ಯೆಗಳು :-

ಗಂಟಲಿನ ಸಮಸ್ಯೆಗಳಿಗೆ ಏಲಕ್ಕಿಯು ಪರಿಹಾರ ನೀಡುತ್ತದೆ. ಸ್ವರ ಶಕ್ತಿ ಕಡಿಮೆಯಾದಾಗ ಏಲಕ್ಕಿ ನೆರವಾಗುತ್ತದೆ.

ಗಂಟಲಿನ ಸಮಸ್ಯೆಗಳಿದ್ದಾಗ ಬಿಸಿ ಹಾಲಿಗೆ ಒಂದೆರಡು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು ಈ ಕಾರಣದಿಂದಲೇ ಅನೇಕ ಸಂಗೀತಗಾರರು ಹಾಡುವ ಮೊದಲು ಏಲಕ್ಕಿ ಚೂರ್ಣ ಸೇರಿಸಿದ ಬಿಸಿ ಹಾಲನ್ನು ಕುಡಿಯುತ್ತಾರೆ. ಮತ್ತು ಕಾರ್ಯಕ್ರಮ ಮುಗಿದ ನಂತರ ಗಂಟಲಿಗೆ ವಿಶ್ರಾಂತಿ ನೀಡಲು ಏಲಕ್ಕಿ ಪುಡಿ ಸೇರಿಸಿದ ಕಾಫಿಯನ್ನು ಕುಡಿಯುತ್ತಾರೆ.

ನೆಗಡಿ, ಕೆಮ್ಮು, ದಮ್ಮು, ಶ್ವಾಸಕೋಶದ ಸಮಸ್ಯೆಗಳು :-

ನೆಗಡಿ ಮತ್ತು ಮೂಗು ಕಟ್ಟಿಕೊಂಡ ಸಮಸ್ಯೆ ಇದ್ದಾಗ ಸ್ವಲ್ಪ ಏಲಕ್ಕಿ ಪುಡಿಯನ್ನು ಕೆಂಡದ ಮೇಲೆ ಉದುರಿಸಿ ಅದರಿಂದ ಹೊರಹೊಮ್ಮ ಹೊಗೆಯನ್ನು ಮೂಸುತ್ತಿರಬೇಕು.

ತಲಾ ಒಂದು ಚಮಚದಷ್ಟು ಏಲಕ್ಕಿ ಬೀಜದ ಚೂರ್ಣ, ಒಣಶುಂಠಿ ಚೂರ್ಣ, ಕಾಳುಮೆಣಸು ಚೂರ್ಣ, ದಾಲ್ಚಿನ್ನಿ ಚೂರ್ಣವನ್ನು ಮಿಶ್ರಣ ಮಾಡಬೇಕು ಇದಕ್ಕೆ ನಾಲ್ಕು ಚಮಚಯಷ್ಟು ಸಕ್ಕರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ನೆಗಡಿ ಸಮಸ್ಯೆ ಇದ್ದಾಗ ಅರ್ಧ ಚಮಚೆಯಷ್ಟು ಈ ಚೂರ್ಣವನ್ನು ಜೇನುತುಪ್ಪದೊಡನೆ ಅಥವಾ ಬಿಸಿ ನೀರಿನೊಡನೆ ಊಟದ ನಂತರ ಸೇವಿಸಬೇಕು.

ಏಲಕ್ಕಿ ಪುಡಿಯನ್ನು ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ನೆಕ್ಕುತ್ತಿದ್ದರೆ, ಕೆಮ್ಮು ಮತ್ತು ನೆಗಡಿ ತೀವ್ರತೆ ಕಡಿಮೆಯಾಗುತ್ತದೆ

ಕಫ ಸಹಿತವಾದ ಕೆಮ್ಮಿನ ಸಮಸ್ಯೆ ಇದ್ದಾಗ ಹೀಗೆ ಮಾಡಬೇಕು: ಒಣಶುಂಠಿ ಚೂರ್ಣ, ಲವಂಗದ ಚೂರ್ಣ, ಏಲಕ್ಕಿ ಚೂರ್ಣ, ಮತ್ತು ದಾಲ್ಚಿನ್ನಿ ಚೂರ್ಣ ಒಂದು ಲೋಟಕ್ಕೆ ಹಾಕಬೇಕು. ಇದರ ಮೇಲೆ ಕುದಿಯುತ್ತಿರುವ ನೀರು ಸುರಿದು ಮುಚ್ಚಿಡಬೇಕು. ಸ್ವಲ್ಪ ಸಮಯದ ನಂತರ ಇದನ್ನು ಶೋಧಿಸಿ ಸ್ವಲ್ಪ ಜೇನು ತುಪ್ಪದಲ್ಲಿ ಬೆರೆಸಿ ದಿನದಲ್ಲಿ ಎರಡು ಮೂರು ಬಾರಿ ಕುಡಿಯಬೇಕು

ದಾಲ್ಚಿನ್ನಿ ಚೂರ್ಣ 10 ಗ್ರಾಂ, ಏಲಕ್ಕಿ ಚೂರ್ಣ 10 ಗ್ರಾಂ, ಕಾಳುಮೆಣಸು ಚೂರ್ಣ 20 ಗ್ರಾಂ, ಬಿದಿರುಪ್ಪು 30 ಗ್ರಾಂ, ಕಲ್ಲು ಸಕ್ಕರೆ 30 ಗ್ರಾಂ, ಹಿಪ್ಪಲಿ ಚೂರ್ಣ 10 ಗ್ರಾಂ, ಶುಂಠಿ ಚೂರ್ಣ 10 ಗ್ರಾಂ ಇವೆಲ್ಲವೂ ನುಣ್ಣಗೆ ಚೂರ್ಣ ಮಾಡಿ ಇಡಬೇಕು. ಶೀತ, ನೆಗಡಿ, ಕೆಮ್ಮು ಆದಾಗ ದಿನದಲ್ಲಿ ಮೂರು ಬಾರಿ ಅರ್ಧ ಚಮಚ ಎಷ್ಟು ಚೂರ್ಣವನ್ನು ಸ್ವಲ್ಪ ಜೇನುತುಪ್ಪದೊಡನೆ ಸೇರಿಸಿ ಸೇವಿಸಬೇಕು.

ಹೃದಯದ ಸಮಸ್ಯೆಗಳು :-

 ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಚಹಾ ಸೊಪ್ಪು ಹಾಕಿ ಕುದಿಸಿ ಶೋಧಿಸಬೇಕು ಇದಕ್ಕೆ ಕಾಲು ಚಮಚದಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು ಇದರಿಂದ ಹೃದಯದ ಬಡಿತದಲ್ಲಾಗುವ ಏರುಪೇರು (ಪಾಲ್ಫಿಟೇಷನ್) ನಿವಾರಣೆ ಆಗುತ್ತದೆ.

ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿದ ಅಡುಗೆಯನ್ನು ಊಟ ಮಾಡಿದರೆ ಕೆಲವೊಮ್ಮೆ ಎದೆ ಉರಿ ಉಂಟಾಗುತ್ತದೆ. ಆದರೆ ಇದಕ್ಕೆ ಕಾರಣವೆಂದರೆ ವಾಯು ಪ್ರಕೋಪ. ಈ ಸಮಸ್ಯೆ ಇದ್ದಾಗ ಬಿಸಿನೀರಿಗೆ ಒಂದು ಚಿಟಕೆ ಏಲಕ್ಕಿ ಪುಡಿ ಸೇರಿಸಿ ಕುಡಿಯಬೇಕು.

ಹೊಟ್ಟೆ ಸಮಸ್ಯೆಗಳು :-

ನಾಲ್ಕೈದು ಪುದೀನಾ ಸೊಪ್ಪನ್ನು ಒಂದು ಬಟ್ಟಲು ನೀರಿಗೆ ಹಾಕಿ ಕುದಿಸಬೇಕು ನಂತರ ನೀರನ್ನು ಸ್ವಲ್ಪ ತಣಿಸಿ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಕುಡಿಯಬೇಕು ಇದರಿಂದ ವಾಕರಿಕೆ ಇಲ್ಲದಿರುವುದು ಜೀರ್ಣ ಮುಂತಾದ ಸಮಸ್ಯೆಗಳು ನಿವಾರಣೆಯಾಗುವುದು.

ಮಹಿಳೆಯರ ಸಮಸ್ಯೆಗಳು :-

*ಗರ್ಭಿಣಿಯರು ಅನುಭವಿಸುವ ಮುಂಜಾನೆಯ ವಾಕರಿಕೆ ಸಮಸ್ಯೆ ನಿವಾರಿಸಲು ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಅರ್ಧ ಚಮಚ ಜೇನುತುಪ್ಪದಲ್ಲಿ ಕಲಸಿ ನೆಕ್ಕುತ್ತಿರಬೇಕು

*ನೆಗಡಿ ಮತ್ತು ಇನ್ನಿತರ ಅಲರ್ಜಿ ಕಾರ್ಯಕ್ರಮ ತೊಂದರೆಗಳಿಂದ ಬಳಲುತ್ತಿರುವ ಗರ್ಭಿಣಿಯರು ಪ್ರತಿನಿತ್ಯ ಕಾಳು ಮೆಣಸಿನ ಪುಡಿಯೊಂದಿಗೆ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಿರಬೇಕು

*ಗರ್ಭಿಣಿಯರು ಮೂತ್ರ ವಿಸರ್ಜನೆಯ ತೊಂದರೆಗಳಿಂದ ಬಳಲುತ್ತಿದ್ದರೆ ಎಳನೀರು ಅಥವಾ ನೆಲ್ಲಿಕಾಯಿ ರಸಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು

*ಗರ್ಭಿಣಿಯಲ್ಲಿರುವ ಬಿಕ್ಕಳಿಕೆ ಮತ್ತು ತೇಗು ಸಮಸ್ಯೆಯನ್ನು ನಿವಾರಿಸಲು ಸಕ್ಕರೆ ಪುಡಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಸೇವಿಸಬೇಕು.

*ರಕ್ತಪ್ರದರದ ಸಮಸ್ಯೆ ಇರುವವರದು ಸ್ವಲ್ಪ ಏಲಕ್ಕಿ ಪುಡಿಯನ್ನು ಸಕ್ಕರೆ ತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿ ಹಾಲು ಕುಡಿಯಬೇಕು (ಗರ್ಭಿಣಿಯರು ಏಲಕ್ಕಿಯನ್ನು ದೀರ್ಘ ಕಾಲದವರೆಗೆ ಬಳಸುವುದು ಒಳ್ಳೆಯದಲ್ಲ).

ಮಕ್ಕಳ ಸಮಸ್ಯೆಗಳು :-

ಮಕ್ಕಳಿರುವ ಬಿಕ್ಕಳಿಕೆ ಮತ್ತು ತೇಗು ಸಮಸ್ಯೆಗಳನ್ನು ನಿವಾರಿಸಲು ಸಕ್ಕರೆ ಪುಡಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಸೇವಿಸಬೇಕು.

ಜ್ವರದ ಸಮಸ್ಯೆಗಳು :-

ಫ್ಲೂ ನಂತಹ ಜ್ವರ ಬರುವ ಲಕ್ಷಣಗಳು ಕಂಡ ಕೂಡಲೇ ಕುಡಿಯುವ ನೀರು ಒಂದು ಲೋಟದಷ್ಟು ತೆಗೆದುಕೊಂಡ ಅದಕ್ಕೆ ಒಂದೆರಡು ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ತಣಿಸಿ ಶೋಧಿಸಿ ದಿನದಲ್ಲಿ ನಾಲ್ಕೈದು ಬಾರಿ ಮುಕ್ಕಳಿಸಬೇಕು. ಇದರಿಂದ ಫ್ಲೂ ಬರುವ ಸಾದ್ಯತೆ ನಿವಾರಣೆ ಆಗುತ್ತದೆ.