ಬೆಂಗಳೂರು: ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.
ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆಯ ಫೆಡರಲ್ ಮಂತ್ರಿ, ವೋಲ್ಕರ್ ವಿಸ್ಸಿಂಗ್ ಅವರು UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಪಾವತಿಗಳ ಸರಳತೆಯನ್ನು ನೇರವಾಗಿ ಅನುಭವಿಸಲು ಸಾಧ್ಯವಾಗಿದ್ದು, ಮಾತ್ರವಲ್ಲದೇ ಭಾರತದ ಡಿಜಿಟಲ್ ಪೇಮೆಂಟ್ ಪಯಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ವಿಚಾರವಾಗಿ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಹೊಗಳಿರುವ ಅವರು ಅದನ್ನು ದೇಶದ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.
ಅಂತೆಯೇ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿಯು ವಿಸ್ಸಿಂಗ್ ದಿನಸಿ ವಸ್ತುಗಳನ್ನು ಖರೀದಿಸುವ ಮತ್ತು ಪಾವತಿಗಳನ್ನು ಮಾಡಲು UPI ಬಳಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ಪೋಸ್ಟ್ ನಲ್ಲಿ, “ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಮೂಲಸೌಕರ್ಯ. UPI ಪ್ರತಿಯೊಬ್ಬರನ್ನು ಸೆಕೆಂಡುಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಿದ್ದಾರೆ. ಫೆಡರಲ್ ಡಿಜಿಟಲ್ ಮತ್ತು ಸಾರಿಗೆ ಸಚಿವ @Wissing ಅವರು UPI ಪಾವತಿಗಳ ಸರಳತೆಯನ್ನು ಮೊದಲು ಅನುಭವಿಸಲು ಸಾಧ್ಯವಾಯಿತು. ಡಿಜಿಟಲ್ ಪಾವತಿ ಸೇವೆಯಿಂದ ಅವರ ತುಂಬಾ ಆಕರ್ಷಿತರಾದರು ಎಂದು ಹೇಳಿದೆ.
ಇನ್ನು ಜರ್ಮನ್ ರಾಯಭಾರ ಕಚೇರಿಯ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ‘ಭಾರತದ ಡಿಜಿಟಲ್ ಆರ್ಥಿಕ ಕ್ರಾಂತಿಯ ಭಾಗವಾಗಿದ್ದಕ್ಕಾಗಿ ವಿಸ್ಸಿಂಗ್ ಗೆ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೋರ್ವ ಬಳಕೆದಾರರು, “ನಗದು-ಮಾತ್ರ ವಹಿವಾಟುಗಳೊಂದಿಗೆ ಹೆಣಗಾಡುತ್ತಿರುವ ಜರ್ಮನಿಯಲ್ಲಿರುವ ಜರ್ಮನ್ ವ್ಯಾಪಾರಿಗಳು ಮತ್ತು ಅಂಗಡಿಯವರಿಗೆ ಇದು ಆಶೀರ್ವಾದವಾಗಿದೆ ಎಂದು ಹೇಳುವ ಮೂಲಕ ಜರ್ಮನಿಯಲ್ಲೂ ಡಿಜಿಟಲ್ ಪಾವತಿಗಾಗಿ ಒತ್ತಾಯಿಸಿದ್ದಾರೆ. ಮತ್ತೋರ್ವ ಬಳಕೆದಾರರು “UPI ಗೋಸ್ ಗ್ಲೋಬಲ್! ಜರ್ಮನಿ ಯಾವಾಗ UPI ಪ್ಲಾಟ್‌ಫಾರ್ಮ್‌ಗೆ ಸೇರುತ್ತದೆ?” ಪ್ರಶ್ನಿಸಿದ್ದಾರೆ.
G20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಆಗಸ್ಟ್ 19 ರಂದು ಪಾಲ್ಗೊಳ್ಳಲು ವಿಸ್ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.