ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ನಾಗಾಲೋಟ ಮುಂದುವವರೆಸಿದೆ.
10 ದಿನಕ್ಕೆ ಸಿನಿಮಾ ಗಳಿಕೆ 500 ಕೋಟಿ ರೂಪಾಯಿ ಗಡಿ ದಾಟಿದೆ. ಜೈಲರ್ ಚಿತ್ರ 500 ಕೋಟಿ ಕ್ಲಬ್ ಗೆ ಸೇರಿದೆ. ಚಿತ್ರವೂ ಎಲ್ಲಾ ಭಾಷೆಗಳಲ್ಲಿಯೂ ದಾಖಲೆಯ ಕಲೆಕ್ಷನ್ ಗಳನ್ನು ಮಾಡುತ್ತಿದೆ.
ಕೇವಲ 6 ದಿನಗಳಲ್ಲಿ, ಚಿತ್ರವು ತಮಿಳುನಾಡು, ಕೇರಳ, ಕರ್ನಾಟಕ, ತೆಲುಗು ರಾಜ್ಯಗಳು ಮತ್ತು ವಿದೇಶಗಳಲ್ಲಿ ಉತ್ತಮ ಲಾಭ ಗಳಿಸಿದೆ.
ಎರಡನೇ ವಾರದಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೈಲರ್ 1000 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯಿದೆ.
ಜೈಲರ್ ಚಲನಚಿತ್ರವು ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಗೆ ಅತಿದೊಡ್ಡ ಲಾಭ ತಂದುಕೊಟ್ಟಿದೆ. ಬಿಡುಗಡೆಯಾದ ಎರಡು ವಾರದೊಳಗೆ 500 ಕೋಟಿ ಕ್ಲಬ್ ಗೆ ಪ್ರವೇಶ ಪಡೆದಿದ್ದು, ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೈಲರ್ ಸಿನಿಮಾವೂ 500 ಕೋಟಿ ಕ್ಲಬ್ ಗೆ ಪ್ರವೇಶಿಸಿದ 7 ನೇ ದಕ್ಷಿಣ ಭಾರತದ ಚಲನಚಿತ್ರವಾಗಿದೆ.
ಚಿತ್ರಕ್ಕೆ ನೆಲ್ಸನ್ ನಿರ್ದೇಶನ ರಜನಿಕಾಂತ್, ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಕೃಷ್ಣ, ವಿನಾಯಕ್ ಅಭಿನಯ ಜನರನ್ನು ರಂಜಿಸಿದೆ.