ಮನೆ ಅಪರಾಧ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ. ವಶಕ್ಕೆ ಪಡೆದ ಆಹಾರ ಇಲಾಖೆ

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ. ವಶಕ್ಕೆ ಪಡೆದ ಆಹಾರ ಇಲಾಖೆ

0

Join Our Whatsapp Group

ಶ್ರೀರಂಗಪಟ್ಟಣ: ಟಾಟ ಐಚರ್ ಮತ್ತು  ಟಾಟಾ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿರವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ನೀರಿಕ್ಷಕ ಬಸರವಾರಜು ಮತ್ತು ಕೆಆರ್‌ಎಸ್ ಪೊಲೀಸರು ಕಾರ್ಯಚರಣೆ ನಡೆಸಿ ನೂರಕ್ಕೂ ಹೆಚ್ಚು ಪಡಿತರ ಅಕ್ಕಿಯಿದ್ದ ಚೀಲಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ತಾಲೂಕಿನ ಮೊಗರಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ  ಶನಿವಾರ ರಾತ್ರಿ ಮೈಸೂರು ಕಡೆಯಿಂದ ಶ್ರೀರಂಗಪಟ್ಟಣ ಕಡೆಗೆ ಬರುತ್ತಿದ್ದ ವಾಹವನ್ನು ಠಾಣೆ ಪಿಎಸ್‌ಐ ಬಸವರಾಜು ಮತ್ತು ಸಿಬ್ಬಂದಿ ಕಾರ್ಯಕಚರಣೆ ನಡೆಸಿ ವಶಕ್ಕೆ ಪಡೆದು ವಾಹನಸಮೇವಾಗಿ ನೂರಕ್ಕೂ ಹೆಚ್ಚು ಪಡಿತರ ಅಕ್ಕಿಯಿದ್ದ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.

ವಾಹನ ಚಾಲಕ ಮೈಸೂರು ಕೆಸರ ನಿವಾಸಿ ಮಹಮದ್ ಶಫೀರ್ ಅಲಿಯಾಸ್ ಕಲೀಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಂದು ವಾಹನ ಚಾಲಕ ಪರಾರಿಯಾಗಿದ್ದಾನೆ. ಅಕ್ಕಿಯನ್ನು ಮೈಸೂರು ನಗರ ಒಂದು ಬಡಾವಣೆಯಿಂದ ಲಾರಿಯೊಂದರಿಂದ ಶ್ರೀರಂಗಪಟ್ಟಣಕ್ಕೆ ತರಲಾಗುತ್ತಿತ್ತು, ವಾಹನದ ಮುಂದೆ ಅಕ್ಕಿ ಇಳಿಸುವ ವ್ಯಕ್ತಿ ಹೋಗುತ್ತಿದ್ದು, ಆತ ಪೊಲೀಸ್ ಕಂಡೊಡನೆ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.

ಶ್ರೀರಂಗಪಟ್ಟಣ ಆಹಾರ ನೀರಿಕ್ಷಕ ಬಸವರಾಜು ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.