ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು |
ರಂಗನರ್ಧಾಂಗಿ ಮಂಗಳಾಂಗಿ ಶ್ರೀದೇವಿ ||
ಹಾಕಿದ ಕಾಲ್ಗೆಜ್ಜೆ ಸದ್ದು ಮಾಡುತ್ತಾ|
ಕಾಲುಂದುಗೆಯ ಖಣ,ಖಣ ಎನ್ನುತ,|
ಕರಣದಿಂದ ಧನ,ಕನಕ ಧಾರೆಯರಿಯುತ ||
ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.
ಉಟ್ಟ ಪೀತಾಂಬರದ ನೀರಿಗೆಗಳಲಿಯುತ |
ತೊಟ್ಟ ಕುಂಚವ ಜಗಿಮಗಿಸುತ |
ಮುದ್ದು ಮುಖದಲ್ಲಿ ಮಂದಹಾಸ ಬೀರುತ ||
ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.
ಕ್ಷೀರಸಾಗರದ ಜನಿಸಿದ ಚಂದ್ರ ಸಹೋದರಿ,|
ಮುತ್ತು ರತ್ನಗಳ ಹೊತ್ತು ತಂದ ಮನೋಹರಿ |
ನಗು ನಗುತ ಬಂದು ವರವನೀಡಿದ ಗುಣಸಾಗರಿ ||
ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು,
ಕೊಲ್ಲಾಪುರದಿಂದ ಭಕ್ತ ಜನರ ಉದ್ದರಿಸಲೆಂದು |
ಬೇಡಿದ ವರವ ಕೊಡುವೆ ಎನುತ |
ವರಜಹ್ನವಿ ವಿಠ್ಠಲೇಶನ ಮೋಹದ ರಾಣಿ ||
ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.