ಮನೆ ದೇವಸ್ಥಾನ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

0

ದಕ್ಷಿಣ ಭಾರತದಲ್ಲಿ ಮೂರು ಸ್ಥಳಗಳಲ್ಲಿರುವ ರಂಗನಾಥ ದೇವಸ್ಥಾನಗಳಲ್ಲಿ ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗವೆಂದು ಗುರುತಿಸುವವರು.

ನಮ್ಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಆದಿರಂಗ ಮತ್ತು ಶಿವನಸಮುದ್ರದ ಮಧ್ಯರಂಗ ಹಾಗು ತಮಿಳುನಾಡಿನ ಶ್ರೀರಂಗವನ್ನು ಅಂತರಂಗ ಎನ್ನುವರು.

ಶ್ರೀರಂಗಪಟ್ಟಣದ ಅಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದಿಂದಾಗಿ ಪುಣ್ಯಸ್ಥಳವಾಗಿದೆ. ರಂಗನಾಥ ದೇವಸ್ಥಾನದ ಕರ್ನಾಟಕದ ದೊಡ್ಡ ಗುಡಿಗಳಲ್ಲಿ ಒಂದು. ಇಲ್ಲಿನ ಶ್ರೀರಂಗನಾಥನಲ್ಲಿ ಮಹಾಮತಿಯ ದೊರೆ ಟಿಪ್ಪು ಸುಲ್ತಾನನು ಭಕ್ತಿ ಇಟ್ಟಿದ್ದನು.

ದೇವಾಲಯದಲ್ಲಿ ಮೂರು ಹಂತಗಳಲ್ಲಿ ಕಟ್ಟಲಾಗಿದೆ. ಒಳಭಾಗ ಹೊಯ್ಸಳರ ಕಾಲದಾಗಿದೆ. ನವರಂಗ ಮತ್ತು ಗೋಪುರ ವಿಜಯನಗರದ ಕಾಲದ ನಿರ್ಮಿತಿ. ಗರ್ಭಗುಡಿಯಲ್ಲಿ ರಂಗನಾಥನ ವಿಗ್ರಹ ಆದಿಶೇಷನ ಮೇಲೆ ಮಲಗಿರುವುದಾಗಿದೆ. ಕಾವೇರಿಯ ಮತ್ತು ಗೌತಮನ ವಿಗ್ರಹಗಳು ಗರ್ಭಗುಡಿಯಲ್ಲಿದೆ ಗುಡಿಯ ಎರಡು ಕಂಬಗಳ ಮೇಲೆ ವಿಷ್ಣು 24 ರೂಪಗಳನ್ನು ಕೆತ್ತಲಾಗಿದೆ. ಚತುರ್ವಿಂಶತಿ ಕಂಬಗಳೆಂದು ಈ ಕಂಬಗಳಿಗೆ ಹೆಸರು.

ಶ್ರೀರಂಗಪಟ್ಟಣ ದ್ವೀಪ. ಸುತ್ತ ಕಾವೇರಿ ನದಿ ಹರಿದಿದೆ. ಮೈಸೂರಿಗೆ 14 ಕಿಲೋಮೀಟರ್ ದೂರದಲ್ಲೂ ಬೆಂಗಳೂರಿಗೆ 124 ಕಿಲೋಮೀಟರ್ ದೂರದಲ್ಲಿದೆ. ರಂಗನಾಥನ ಹೆಸರೇ ದ್ವೀಪಕ್ಕು ಇದೆ.

ಲಕ್ಷ್ಮಿ ನರಸಿಂಹ ಹಾಗೂ ಗಂಗಾಧರೇಶ್ವರ ಇತರ ದೇವಾಲಯಗಳು. ಲಕ್ಷ್ಮಿನರಸಿಂಹ ಮೂಲ ವಿಗ್ರಹ ಸುಂದರವಾಗಿದೆ.

ಶ್ರೀರಂಗಪಟ್ಟಣದ ಸಂಗಮದ ಬಳಿ ನಿಮಿಷಾಂಬ ದೇವಾಲಯವಿದ್ದು ಭಕ್ತರು ಈ ದೇವಿಗೆ ನಡೆದುಕೊಳ್ಳುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಸೀರೆ ಕಾಣಿಕೆಕೊಡುತ್ತಾರೆ.

ಕಂಬದಳ್ಳಿ :

ಜೈನರಿಗೆ ಪವಿತ್ರ ಸ್ಥಳವಾದ ಕಂಬದಳ್ಳಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿದೆ…

ಆದಿನಾಥ ಬಸದಿ : ಕ್ರಿ.ಶ. 900 ರ ಕಾಲದ ನಿರ್ಮಾಣ. ಪಂಚಕೂಟ ಬಸದಿಎನ್ನುವರು. ಬಸಿದಿಗೆ ಗಡ್ಡೆ ಆಕಾರದ ಮೂರು ಗೋಪುರಗಳಿವೆ. ಬಸದಿಯ ವಿಗ್ರಹಗಳು ಸುಂದರವಾಗಿದೆ ದಿಕಲ್ಪಾರ ಹಾಗೂ ರಕ್ಷಣೆಯರ ವಿಗ್ರಹಗಳು ಮನಮೋಹಕ. ಈ ಬಸದಿಗೆ ಉತ್ತರದಲ್ಲಿ ಎತ್ತರವಾದ ಬೆಟ್ಟದ ಮೇಲೆ ಬ್ರಹ್ಮದೇವರ ಕಂಬವಿದೆ. ಎತ್ತರ 50 ಅಡಿ. ಅಷ್ಟ ಕೋನಾಕಾರ ಪೀಠದ ಮೇಲೆ ನಿಂತಿದೆ. ಪೀಠದ ಮೇಲೆ ಅಷ್ಟ ದಿಕ್ಪಾಲಕರ ಕೆತ್ತನೆ ಇದೆ. ಕಂಬದ ತುದಿಯಲ್ಲಿ ಬ್ರಹ್ಮ ಕುಳಿತಿದ್ದಾನೆ ಆ ಕಂಬದಿಂದಲೇ ಹಳ್ಳಿಗೆ ಈ ಹೆಸರಿದೆ.

ಶಾಂತಿನಾಥ ಬಸದಿ : ಬಸದಿಯು ಆದಿನಾಥ ಬಸದಿ ಸಮೀಪವಿದೆ. ಬಸದಿಯ ಕೆತ್ತನೆಗಳು ವೈವಿಧ್ಯಮಯ ಯುದ್ಧ ದೃಶ್ಯಗಳು ಇವೆ. ಶಾಂತಿನಾಥ ವಿಗ್ರಹ 10 ಅಡಿ ಎತ್ತರ ಬಲು ಸುಂದರ ನವರಂಗದಲ್ಲಿ ನೇಮಿನಾಥ, ಜಿನ, ಮತ್ತು ಯಕ್ಷೀಣಿಯರ ವಿಗ್ರಹಗಳು ಇದ್ದು ಅಮೋಘ ಶಿಲ್ಪ ಕೃತಿಗಳೆನಿಸಿದೆ.

ನವರಂಗದ ಭುವನೇಶ್ವರಿ ಜಿನ, ದಿಕ್ಪಾಲಕರು ಹಾಗೂ ಗಂಧರ್ವರ ಕೆತ್ತನೆಗಳು ಅಪೂರ್ವ.

ಶಿವನಸಮುದ್ರ : ಮೈಸೂರಿನಿಂದ 80 ಕಿಲೋಮೀಟರ್ ದೂರದಲ್ಲಿದೆ. ಇದೊಂದು ದ್ವೀಪ ಇಲ್ಲಿ ರಂಗನಾಥನ ಗುಡಿ ಇದ್ದು ಪವಿತ್ರ ಸ್ಥಳ ಎನಿಸಿದೆ. ಮಧ್ಯರಂಗ ಎನ್ನುವ ಇಲ್ಲಿ ರಂಗನಾಥನಿಗೆ ಜಗನ್ಮೋಹನ ರಂಗನಾಥ ಎಂಬ ಹೆಸರಿದೆ. 8 ಅಡಿ ಉದ್ದದ ಮಲಗಿರುವ ಭಂಗಿಯ ವಿಗ್ರಹ. ಈ ಶ್ರೀರಂಗಪಟ್ಟಣದ ರಂಗನಾಥನಿಗಿಂತ ಸಣ್ಣ. ಇಲ್ಲಿನ ಸೋಮೇಶ್ವರ ದೇವಾಲಯವು ಪ್ರಸಿದ್ಧ.