ಮನೆ ರಾಜ್ಯ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ 30ನೇ ಪುಣ್ಯಸ್ಮರಣೆ

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ 30ನೇ ಪುಣ್ಯಸ್ಮರಣೆ

0

ಮೈಸೂರು: ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರವರ 30ನೇ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡುರಾಯರ ನೆನೆಪಿನಂಗಳ ಕಾರ್ಯಕ್ರಮವನ್ನು ಗುಂಡೂರಾವ್ ಅಭಿಮಾನಿಗಳ ಬಳಗದ ವತಿಯಿಂದ  ಆಚರಿಸಲಾಯಿತು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ರವರು ಮಾತನಾಡಿ, ಗುಂಡುರಾಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರ ಬಡವರ್ಗದ ಮನೆಗೆಳಲ್ಲಿ ಸರ್ಕಾರಿ ಕೆಲಸ ನೀಡುವ ಮೂಲಕ ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಪ್ರೇರೇಪಿಸಿದವರೇ ಗುಂಡುರಾಯರು, ಪೇಕಮಿಷನ್ ಜಾರಿಗೆ ತಂದರು ಮತ್ತು ರಾಜಧಾನಿಯೆಂದರೆ ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಸಾರಿಗೆ ಯೋಜನೆ ಏಷ್ಯಾದಲ್ಲೆ ಪ್ರಪ್ರಥಮ ಮಹತ್ವದ ಪಡೆಯಿತು, ಕುಗ್ರಾಮದಲ್ಲಿರುವ ಬಡವರಿಗೆ ಉಚಿತವವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಸಾಕಷ್ಟು ಜನಪರ ಯೋಜನೆ ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.

ಹಿರಿಯ ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ ಮಾತನಾಡಿ, ಮೈಸೂರಿನ ಭವ್ಯವಾದ ಸಾಂಸ್ಕೃತಿಕ ಕಟ್ಟಡ ಕರ್ನಾಟಕ ಕಲಾಮಂದಿರ ನಮ್ಮ  ಹಿಂದಿನ  ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡೂರಾವ್ ರವರ ಕನಸಿನ ಕೂಸು. ಈ ಹಿಂದೆ ಗ್ರೀಕ್ ತತ್ವಜ್ಞಾನಿಗಳು ಹೇಳ್ತಾ ಇದ್ರು ಚಿಂತಕ ರಾಜಕಾರಣಿ ಅಂದ್ರೆ ಫಿಲಾಸಫರ್ ಕಿಂಗ್ ಇರ್ಬೇಕು ಅಂತ್ಹೇಳಿ ಆ ರಾಜ್ಯ  ಅ ಸಂಸ್ಕೃತಿ ಚಿಂತನೆ  ಜನಮಾನಸದಲ್ಲಿ , ಮೈಗೂಡಿಸಿಕೊಳ್ಳಬೇಕೆಂಬ ಆಶಯ ಹೊಂದಿದ್ದರು ಅಂತಹ ಕೆಲವೇ ರಾಜ ಪ್ರಮುಖರಲ್ಲಿ ಕೃಷ್ಣದೇವರಾಯ  ನಮ್ಮ ನಾಲ್ವಡಿ ಕೃಷ್ಣರಾಜ್ ಒಡೆಯರ್  ಇಂತಹ ಮನಸ್ಥಿತಿ ಹೊಂದಿದವರಾಗಿದ್ದರು ಎಂದು ತಿಳಿಸಿದರು.

ಆರ್ ಗುಂಡೂ ರಾವ್ ರವರು ಪ್ರತಿ ತಾಲ್ಲೂಕು ಕೇಂದ್ರ ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಭವನ ಗಳನ್ನು ಸರ್ಕಾರದ ವೆಚ್ಚದಲ್ಲೇ ನಿರ್ಮಿಸಿಕೊಡಬೇಕೆಂಬ ಆಶಯದಿಂದ ಇಂತಹ ಭವ್ಯವಾದ ಕಲಾ ಮಂದಿರಕ್ಕೆ ಬುನಾದಿ ಹಾಕಿದ್ದರು. ಇಂತಹ ಕಟ್ಟಡದಲ್ಲಿಯೇ ಅವರ ಸಂಸ್ಮರಣೆಗೆ  ಪ್ರತಿಮೆಯೂ ಇಲ್ಲದಿರುವುದು ಬಹಳ ವಿಷಾದಕರ ಸಂಗತಿ. ಕೂಡಲೇ ಸರ್ಕಾರದವರು, ಕನ್ನಡ ಸಂಸ್ಕೃತಿ ಇಲಾಖೆಯವರು ಆರ್ ಗುಂಡೂರಾಯರ ಆಳೆತ್ತರದ ಪ್ರತಿಮೆಯನ್ನು ಮುಂಭಾಗದಲ್ಲಿ ಸ್ಥಾಪಿಸಿ ಹಾಗೂ ಈ ಕಲಾಮಂದಿರಕ್ಕೆ ಆರ್ ಗುಂಡೂರಾವ್ ಕರ್ನಾಟಕ ಕಲಾಮಂದಿರ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಕಾಂಗ್ರೆಸ್ ಯುವ ಮುಖಂಡ ಸಿಎಸ್.ರಘು,  ಮೂಡ ಮಾಜಿ ಸದಸ್ಯೆ ಲತಾ ಮೋಹನ್, ವಿಜಯ್ ಕುಮಾರ್, ರೈಲ್ವೆ ರಾಮಣ್ಣ, ಸುಬ್ಬಣ್ಣ, ಪವನ್ ಸಿದ್ದರಾಮ, ಎಸ್.ಎನ್ ರಾಜೇಶ್, ರಾಕೇಶ್,  ಪಣೀಶ್, ಸುಚೀಂದ್ರ, ವಿದ್ಯಾ, ಚಕ್ರಪಾಣಿ, ಇನ್ನಿತರರು ಇದ್ದರು.