ಮನೆ ಮನರಂಜನೆ ಮತ್ತೆ ಜೊತೆಯಾಗುತ್ತಿರುವ ಬಡವ ರಾಸ್ಕಲ್ ಸಿನಿಮಾ ನಿರ್ದೇಶಕ ಶಂಕರ್ ಗುರು ಹಾಗೂ ಡಾಲಿ ಧನಂಜಯ್

ಮತ್ತೆ ಜೊತೆಯಾಗುತ್ತಿರುವ ಬಡವ ರಾಸ್ಕಲ್ ಸಿನಿಮಾ ನಿರ್ದೇಶಕ ಶಂಕರ್ ಗುರು ಹಾಗೂ ಡಾಲಿ ಧನಂಜಯ್

0

ಡಾಲಿ ಧನಂಜಯ್ ಗೆ ಬ್ರೇಕ್ ಕೊಟ್ಟದ್ದು ಹಾಗೂ ಸ್ಟಾರ್ ಪಟ್ಟ ತಂದುಕೊಟ್ಟದ್ದು ಬಡವ ರಾಸ್ಕಲ್ ಸಿನಿಮಾ. ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಸಹ ಬಡ್ತಿ ಪಡೆದ ಧನಂಜಯ್ ಮೊದಲ ಹೂಡಿಕೆಯಲ್ಲಿಯೇ ಗೆದ್ದು ಬೀಗಿದ್ದರು. ಆದರೆ ಮತ್ತೆ ಜತೆಯಾಗಿದ್ದರೆ  ಬಡವ ರಾಸ್ಕಲ್ ಸಿನಿಮಾದ  ನಿರ್ದೇಶಕ ಶಂಕರ್ ಗುರು ಹಗೂ ಡಾಲಿ ಧನಂಜಯ್ .

ಹೊಸ ಸಿನಿಮಾವೊಂದನ್ನು ಮಾಡಲು ಶಂಕರ್ ಗುರು ಹಾಗೂ ಡಾಲಿ ಧನಂಜಯ್ ಮತ್ತೊಮ್ಮೆ ಜತೆಯಾಗಿದ್ದು, ಚಿತ್ರ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ನಾಳೆ ( ಆಗಸ್ಟ್ 23 ) ಘೋಷಣೆಯಾಗಲಿದೆ.

ಮಾಧ್ಯಮದ ಜತೆ ಮಾತನಾಡಿರುವ ನಿರ್ದೇಶಕ ಶಂಕರ್ ಗುರು ಬಡವ ರಾಸ್ಕಲ್ ಚಿತ್ರದಲ್ಲಿ ಮಧ್ಯಮ ವರ್ಗದ ನಾಯಕನ ಲವ್ ಸ್ಟೋರಿ ಜತೆಗೆ ಫ್ಯಾಮಿಲಿ ಬಾಂಡಿಂಗ್ ಕುರಿತು ಕಥೆ ಬರೆಯಲಾಗಿತ್ತು. ಈ ಬಾರಿ ಅಜ್ಜಿ ಹಾಗೂ ಮೊಮ್ಮಗನ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿದೇಶದಲ್ಲಿ ನೆಲೆಸಿರುವ ನಾಯಕ ಕಾರಣಾಂತರಗಳಿಂದ ನಾಡಿಗೆ ಮರಳಲಿದ್ದು, ನಾಯಕ ವಿದೇಶದಲ್ಲಿ ಏನು ಮಾಡುತ್ತಾ ಇರುತ್ತಾನೆ ಹಾಗೂ ಆತ ತಾಯ್ನಾಡಿಗೆ ಯಾಕೆ ಮರಳುತ್ತಾನೆ ಎಂಬುದೇ ಚಿತ್ರದ ಆಸಕ್ತಿಕರ ಪಾಯಿಂಟ್ ಎಂದು ಶಂಕರ್ ಗುರು ಹೇಳಿದ್ದಾರೆ.